ಚಿಂಚೋಳಿ ಪಟ್ಟಣದ ಕ್ರಾಂತಿವೀರ ಸಂಗೋಳ್ಳಿರಾಯಣ್ಣ ನವರ ವೃತ್ತದ ಬಳಿ ತಾಲೂಕು ಗೊಂಡ ಕುರುಬ ಸಂಘವು ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ನವರ ರಾಜಿನಾಮೆ ಪಡೆದ ಕಾಂಗ್ರೇಸ್ ಪಕ್ಷದ ಹೈಕಮಾಂಡ ಮುಖಂಡರ ವಿರುದ್ಧ ರಸ್ತೆ ತಡೆ ನಡೆಸಿ ಟೈರಗಳಿಗೆ ಬೆಂಕಿ ಹಚ್ಚಿ ಬೃಹತ ಪ್ರತಿಭಟಿಸಿದರು. 
ರಾಜ್ಯ

ಸಿಎಂ ಸ್ಥಾನದಿಂದ ಕೆಳಗಿಳಿಸಿದ ಕಾಂಗ್ರೇಸ್ ಪಕ್ಷದ ಹೈಕಮಾಂಡ ವಿರುದ್ಧ ಗೊಂಡ ಕುರುಬ ಸಂಘದಿಂದ ಬೃಹತ್ ರಸ್ತಾ ರೋಕೋ ಚಳುವಳಿ

ಚಿಂಚೋಳಿ: ಪಟ್ಟಣದ ಕ್ರಾಂತಿವೀರ ಸಂಗೋಳ್ಳಿರಾಯಣ್ಣ ನವರ ವೃತ್ತದ ಬಳಿ ತಾಲೂಕು ಗೊಂಡ ಕುರುಬ ಸಂಘವು ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ನವರ ರಾಜಿನಾಮೆ ಪಡೆದ ಕಾಂಗ್ರೇಸ್ ಪಕ್ಷದ ಹೈಕಮಾಂಡ ಮುಖಂಡರ ವಿರುದ್ಧ ರಸ್ತೆ ತಡೆ ನಡೆಸಿ ಟೈರಗಳಿಗೆ ಬೆಂಕಿ ಹಚ್ಚಿ ಬೃಹತ ಪ್ರತಿಭಟಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಆದಿವಾಸಿ ಬುಡಕಟ್ಟು ಮೂಲನಿವಾಸಿ ಸಂಘಟನೆಯ ಅಧ್ಯಕ್ಷ ಗೋಪಾಲ ಎಂ.ಪಿ ಮಾತನಾಡಿ ಹಿಂದುಳಿದ ಶೋಷಿತ ದಲಿತ ಸಮುದಾಯಗಳ ಅಹಿಂದಶಕ್ತಿ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದ ಕಾಂಗ್ರೆಸ್ ಹೈಕಮಾಂಡ ವಿರುದ್ಧ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೇಸ್ ಪಕ್ಷವು ತಳಮಟ್ಟದಿಂದ ಬಲವರ್ದನೆಗೆ ಶ್ರಮಿಸಿದ ವಿರೇಂದ್ರ ಪಾಟೀಲ್, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು, ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಕಾಳಗಿ ಕರ್ನಾಟಕ ಪ್ರದೇಶ ಕುರುಬ ಗೊಂಡ ಅಧ್ಯಕ್ಷ ರೇವಣಸಿದ್ದಪ್ಪ ಅಣಕಲ್, ಹಣಮಂತ ಕೆ ಪೂಜಾರಿ, ರವೀಂದ್ರ ದಸ್ತಾಪುರ ಪೂಜಾರಿ, ರಾಜಕುಮಾರ್ ಖಣಗೊಂಡ, ಮಾಳಪ್ಪ ಅಪ್ಪುಜಿ, ಸಂಜುಕುಮಾರ್ ರಾಣಪುರ, ರಾಜುಕುಮಾರ ತುಮಕುಂಟಾ, ಮುರುಗೇಶ ಗಂಗನಪಲ್ಲಿ, ರಾಜಕುಮಾರ ಯಂಪಳ್ಳಿ, ಪ್ರಹಲಾದ ಪೂಜಾರಿ, ನರಸಪ್ಪ ದೀಪನೋರ, ಸೂರ್ಯಕಾಂತ್ ಪೂಜಾರಿ, ಮಾರುತಿ ಪೂಜಾರಿ, ರಾಜಕುಮಾರ ಖರ್ಚಖೇಡ, ದಶರಥ ಅಣವಾರ, ದೇವಿಂದ್ರಪ್ಪ ಪೂಜಾರಿ, ಸೋಮಶೇಖರ್ ಕರಕಟ್ಟಿ, ಮಹಾದೇವ ಚಿಮ್ಮಇದಾಲಾಯಿ, ಈರಪ್ಪಾ ಚಿಟ್ಟ, ನಾಗಶೇಟ್ಟಿ ಸೋಲೆಪ್ಪೋರು, ಬಕ್ಕಪ್ಪಾ ಪೊಲಕಪಳ್ಳಿ, ಸಂತೋಷ ಚಿಮ್ಮನಚೋಡ, ನಾಗೇಶ್ ಇರಗಪಳ್ಳಿ, ಪರಶುರಾಮ್ ರೆಡ್ಡಿ, ಓಮನರಾವ ಕೊರವಿ, ರಂಗಣ್ಣ ಪೂಜಾರಿ ಇತರರು ಇದ್ದರು.