ಇಸ್ರೋದಲ್ಲಿ 410 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಇಸ್ರೋದಲ್ಲಿ 410 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಶೈಕ್ಷಣಿಕ ಅಂಕಗಳ ಆಧಾರದ ಮೇಲೆಯೇ ನೇಮಕಾತಿ
- ತರಬೇತಿ ಅವಧಿಯಲ್ಲಿ ಮಾಸಿಕ 12,300 ವರೆಗೆ ಸ್ಟೈಫಂಡ್ ಲಭ್ಯ
ಬೆಂಗಳೂರು: ಇಸ್ರೋದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳುವ ಮಹಾದಾಸೆ ಹೊಂದಿರುವ ಅದೆಷ್ಟೋ ಅಭ್ಯರ್ಥಿಗಳಿಗೆ ಇದೀಗ ಸುವರ್ಣಾವಕಾಶ ಒಲಿದು ಬಂದಿದೆ. ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ (URSC) ಖಾಲಿ ಇರುವ 410 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ತರಬೇತಿ ಯೋಜನೆ (NATS) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 410 ಹುದ್ದೆಗಳ ಸಂಪೂರ್ಣ ವಿವರ ವೆಬ್ಸೈಟ್ನಲ್ಲಿದ್ದು, ಡಿಪ್ಲೊಮಾ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಮಾಸಿಕ ಸ್ಟೈಫಂಡ್ (Stipend) ಕೂಡ ನೀಡಲಾಗುವುದು ಎಂದು ತಿಳಿಸಲಾಗಿದೆ.
ಯಾವ ಹುದ್ದೆಗೆ ಎಷ್ಟು ಸ್ಟೈಫಂಡ್?
ಹುದ್ದೆ: ಗ್ರಾಜುಯೇಟ್ ಅಪ್ರೆಂಟಿಸ್
ಹುದ್ದೆ: ಟೆಕ್ನಿಷಿಯನ್ ಅಪ್ರೆಂಟಿಸ್
ಹುದ್ದೆ: ಕಾಮರ್ಸ್/ವಾಣಿಜ್ಯ ಅಪ್ರೆಂಟಿಸ್
ಅರ್ಜಿ ಸಲ್ಲಿಕೆ ಹೇಗೆ?
- ಮೊದಲು ಅಧಿಕೃತ ವೆಬ್‌ಸೈಟ್ nats.education.gov.in ಗೆ ಭೇಟಿ ನೀಡಿ.
- ಪೋರ್ಟಲ್‌ನಲ್ಲಿ ನಿಮ್ಮ ವಿವರಗಳನ್ನು ಹಾಕಿ ನೋಂದಣಿ ಪೂರ್ಣಗೊಳಿಸಿ.
- ನೋಂದಾಯಿತ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
- ಲಭ್ಯವಿರುವ ಅಪ್ರೆಂಟಿಸ್ಶಿಪ್ ಪಟ್ಟಿಯಲ್ಲಿ "URSC ISRO" ಆಯ್ಕೆ ಮಾಡಿ.
- ನಿಮ್ಮ ಅರ್ಹತೆಗೆ ತಕ್ಕಂತೆ ಸೂಕ್ತ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಿ.
- ವೈಯಕ್ತಿಕ ಮಾಹಿತಿ ಹಾಗೂ ಶೈಕ್ಷಣಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಕೆ ನಂತರ ದೃಢೀಕರಣ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?
ಈ ಹುದ್ದೆಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ ಎಂಬುದು ಗಮನಾರ್ಹ. ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಲಾಗುತ್ತದೆ. ನೀವು ಪದವಿ/ಡಿಪ್ಲೊಮಾದಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ಇಸ್ರೋ ಪ್ರಾಥಮಿಕ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ (Certificate Verification) ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ, ದಾಖಲೆ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪ್ರಯಾಣದ ಭತ್ಯೆ ನೀಡುವುದಿಲ್ಲ. ಇದಾದ ನಂತರ, ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 29, 2026 ಎಂಬುದನ್ನು ನೆನಪಿಡಿ,(ಏಜೆನ್ಸೀಸ್).