ಚಿನ್ನದ ಅಷ್ಟಲಕ್ಷ್ಷ್ಮೀ ಕಳಶ. 
ರಾಜ್ಯ

ಶ್ರೀರಂಗನಾಥಸ್ವಾಮಿ ದೇವಳಕ್ಕೆ ಚಿನ್ನದ ಕಳಶ ಕೊಡುಗೆ

ಪ್ರಮುಖ ಮುಖ್ಯಾಂಶಗಳು

  • ಪುರಾಣ ಪ್ರಸಿದ್ಧ ಶ್ರೀರಂಗನಾಥಸ್ಚಾಮಿ ದೇವಾಲಯ
  • ಟಿವಿಎಸ್ ಕಂಪನಿ ಚೇರ‌್ಮನ್ ವೇಣು ಶ್ರೀನಿವಾಸನ್

ಶ್ರೀರಂಗಪಟ್ಟಣ:

ಪುರಾಣ ಪ್ರಸಿದ್ಧ ಶ್ರೀರಂಗನಾಥಸ್ಚಾಮಿ ದೇವಾಲಯಕ್ಕೆ ಟಿವಿಎಸ್ ಕಂಪನಿ ಚೇರ‌್ಮನ್ ವೇಣು ಶ್ರೀನಿವಾಸನ್ ಅವರು ಸುಮಾರು 398 ಗ್ರಾಂ ತೂಕದ ಚಿನ್ನದ ಕಳಶವನ್ನು ಕೊಡುಗೆಯಾಗಿ ನೀಡಿದರು.

ಪ್ರಧಾನ ಅರ್ಚಕರಾದ ವಿಜಯಸಾರಥಿ, ಪ್ರಸನ್ನ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುನಾಗೇಂದ್ರದತ್ತ ಅವರ ಸಮ್ಮುಖದಲ್ಲಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಹಸ್ತಾಂತರಿಸಿದರು.
ಶ್ರೀರಂಗನಾಥಸ್ವಾಮಿಯ ಭಕ್ತರಾಗಿರುವ ವೇಣು ಶ್ರೀನಿವಾಸನ್ ಸ್ವಾಮಿಯ ಪ್ರೇರಪಣೆಯಿಂದ ಸೇವೆ ಮಾಡಿದ್ದಾರೆ. ಕೆಲತಾಸುಗಳ ಕಾಲ ಶ್ರೀ ಆದಿರಂಗನ ದೇವಳದಲ್ಲೇ ಭಕ್ತಿಸಮರ್ಪಿಸಿ ಪ್ರಾರ್ಥಿಸಿದ್ದಾರೆ ಎಂದು ವೈದಿಕರು ತಿಳಿಸಿದ್ದಾರೆ.