ಚಿನ್ನ ಕಳ್ಳಸಾಗಾಣಿಕೆ ಮಾಡಲು ಯತ್ನಿಸಿದ ಮೊಹಮ್ಮದ್ ಸಿರಾಜ್
ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಮಾಡಲು ವಿಫಲ ಯತ್ನ ಮಾಡಿದ ಪ್ರಯಾಣಿಕನೊಬ್ಬನನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Gold Smuggling in Bangaluru Airport) ದಲ್ಲಿ ಭದ್ರತಾ ಸಿಬ್ಬಂದಿಗಳು ಬಂಧಿಸಿರುವ ಘಟನೆ ನಡೆದಿದೆ.
ದುಬೈನಿಂದ ಬೆಂಗಳೂರಿಗೆ ಬಂದು ಇಲ್ಲಿಂದ ಉತ್ತರ ಪ್ರದೇಶದ ಗಾಜಿಯಾಬಾದ್ಗೆ ತೆರಳ ಬೇಕಿದ್ದ ಮೊಹಮ್ಮದ್ ಸಿರಾಜ್ ಎಂಬಾತನೇ ಬಂಧಿನ ವ್ಯಕ್ತಿಯಾಗಿದ್ದು, ಬಾಯಲ್ಲಿ ಚಿನ್ನದ ತುಂಡನ್ನು ಇಟ್ಟುಕೊಂಡಿದ್ದವ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಬಾಯಲಿತ್ತು ಚಿನ್ನದ ಕ್ಯಾಪ್ಸುಲ್!
ಇಂಡಿಯೋ 6ಇ 1486 ವಿಮಾನದ ಮೂಲಕ ದುಬೈನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಈ ಮೊಹಮ್ಮದ್ ಸಿರಾಜ್. ನಂತರ ಇಲ್ಲಿಂದ ಗಾಜಿಯಾಬಾದ್ಗೆ ತೆರಳ ಬೇಕಿತ್ತು.
ಆದರೆ ವಿಮಾನ ನಿಲ್ದಾಣದಲ್ಲಿ ಇತನ ವರ್ತನೆ ಭದ್ರತಾ ಸಿಬ್ಬಂದಿಗಳ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಬಾಡಿ ಸ್ಕ್ಯಾನರ್ಗೆ ತನ್ನಲ್ಲಿ ಚಿನ್ನವಿರುವುದು ತಿಳಿಯಬಾರದೆಂದು ಬಾಯಲ್ಲಿ ಎರಡು ಚಿನ್ನದ ಕ್ಯಾಪ್ಸುಲ್ಗಳನ್ನು ಅಡಗಿಸಿಟ್ಟುಕೊಂಡಿದ್ದಾನೆ.
ಆದರೆ, ಭದ್ರತಾ ಸಿಬ್ಬಂದಿಗಳು ಬಾಡಿ ಸ್ಕ್ಯಾನ್ ಮಾಡಿದ ಬಳಿಕ, ಸಿರಾಜ್ ಗೆ ಬಾಯಿ ತೆರಿಯಲು ಹೇಳಿದಾಗ ಹಿಂದೇಟು ಹಾಕಿದ್ದಾನೆ. ನಂತರ ಗದರಿ ಹೇಳಿದಾಗ, ಬಾಯ್ತೆರೆದಿದ್ದು, ಬಾಯಲ್ಲಿ ಎರಡು ಚಿನ್ನದ ಕ್ಯಾಪ್ಸುಲ್ಗಳು ದೊರೆತಿವೆ.
ಕೂಡಲೇ ಈ ಮೊಹಮ್ಮದ್ ಸಿರಾಜ್ನನ್ನು ವಶಕ್ಕೆ ಪಡೆದ ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ, ನಂತರ ಕೆಐಎ ಠಾಣೆಯ ಪೊಲೀಸರಿಗೆ ಇವನನ್ನು ಹಸ್ತಾಂತರ ಮಾಡಿದ್ದಾಗಿ ತಿಳಿಸಿದ್ದಾರೆ, (ಏಜನ್ಸೀಸ್).