ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ ಕಲಬುರಗಿ ವಿ.ಜಿ. ಮಹಿಳಾ ಕಾಲೇಜು ಮನೋವಿಾನ ವಿಭಾಗದ ವಿದ್ಯಾರ್ಥಿನಿ ಹೇಝಲ್ ಠಕ್ಕರ್ಗೆ ವಿಭಾಗದ ಮುಖ್ಯಸ್ಥೆ ಪ್ರೊ.ಛಾಯಾ ಪಾಟೀಲ್ ಸಿಹಿ ತಿನ್ನಿಸಿ ಅಭಿನಂದಿಸಿದರು.
ಕಲಬುರಗಿ: ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ 2024-25ರ ಬಿಎ ಪದವಿ 6ನೇ ಸೆಮಿಸ್ಟರ್ ಮುಗಿಸಿರುವ ಹೇಝಲ್ ಠಕ್ಕರ್ ಮನೋವಿಾನ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ.ಪಿ.ಎಸ್. ಹಲ್ಯಾಳ ಹೆಸರಿನಲ್ಲಿ ಕೊಡಮಾಡುವ ಚಿನ್ನದ ಪದಕ ಪಡೆದು ಶಿಕ್ಷಣ ಸಂಸ್ಥೆ ಮತ್ತು ಕಾಲೇಜಿನ ಕೀರ್ತಿಹೆಚ್ಚಿಸಿದ್ದಾಳೆ. ಅಕ್ಕಮಹಾದೇವಿ ವಿವಿ 17ನೇ ಟಿಕೋತ್ಸವದಲ್ಲಿ ಹೇಝಲ್ಗೆ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರಚಂದ ಗೆಹೆಲೋತ್ ಚಿನ್ನದ ಪದಕ ನೀಡಿ ಪ್ರೋತ್ಸಾಹಿಸಿರುವುದಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯ ಶಶೀಲ್ ನಮೋಶಿ, ಉಪಾಧ್ಯ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಪಾಟೀಲ್, ಸಂಚಾಲಕರಾದ ನಾಗಣ್ಣ ಂಟಿ, ಅರುಣಕುಮಾರ ಪಾಟೀಲ್, ಅನಿಲಕುಮಾರ ಮರಗೋಳ, ಕಾಲೇಜಿನ ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡಾ, ಮನೋವಿಾನ ವಿಭಾಗದ ಮುಖ್ಯಸ್ಥೆ ಪ್ರೊ.ಛಾಯಾ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.