ಜಿಆರ್‌ಟಿ ಜುವೆಲ್ಲರ್ಸ್‌  
ರಾಜ್ಯ

ಜಿಆರ್‌ಟಿ ಜುವೆಲ್ಲರ್ಸ್‌ನಿಂದ ಸ್ವರ್ಣ ಆಷಾಢ ಕೊಡುಗೆ: ಚಿನ್ನಾಭರಣಗಳ ಮೇಲೆ ರಿಯಾಯಿತಿ-Discount on gold jewellery

ಬೆಂಗಳೂರು: ದೇಶದ ಅತ್ಯಂತ ವಿಶ್ವಾಸಾರ್ಹ ಹಾಗೂ ಪ್ರಮುಖ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದಾದ ಜಿಆರ್‌ಟಿ ಜುವೆಲ್ಲರ್ಸ್‌, ಆಷಾಢ ಮಾಸದ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿಶೇಷ ಆಷಾಢ ಅಭಿಯಾನ ಕೊಡುಗೆ ಪ್ರಕಟಿಸಿದೆ.
ದಕ್ಷಿಣ ಭಾರತದಾದ್ಯಂತ 67 ಮತ್ತು ಸಿಂಗಾಪುರದಲ್ಲಿ 1 ಸೇರಿ ಒಟ್ಟು 68 ಶೋರೂಂಗಳ ಜಾಲವನ್ನು ಹೊಂದಿರುವ ಸಂಸ್ಥೆ, ಕರ್ನಾಟಕದ ಗ್ರಾಹಕರಿಗಾಗಿ ‘ಸ್ವರ್ಣ ಆಷಾಢ’, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಗ್ರಾಹಕರಿಗಾಗಿ ‘ಸ್ವರ್ಣ ಆಷಾಢಂ’ ಹೆಸರಿನಲ್ಲಿ ಈ ಕೊಡುಗೆಯನ್ನು ಪರಿಚಯಿಸಿದೆ.
ಹೊಸ ಚಿನ್ನ ಆಭರಣಗಳ ಖರೀದಿ ಮೇಲೆ ಪ್ರತಿ ಗ್ರಾಂಗೆ 200 ರೂ., ಹಳೆಯ ಚಿನ್ನವನ್ನು ಎಕ್ಸ್‌ಚೇಂಜ್ ಮಾಡುವ ಗ್ರಾಹಕರಿಗೆ ಪ್ರತಿ ಗ್ರಾಂಗೆ ಹೆಚ್ಚುವರಿಯಾಗಿ 150 ರೂ. ರಿಯಾಯಿತಿ ದೊರೆಯಲಿದೆ. ಡೈಮಂಡ್ ಮತ್ತು ಅನ್‌ಕಟ್ ಡೈಮಂಡ್‌ಗಳ ಮೌಲ್ಯದ ಮೇಲೆ ಶೇ.12.5 ವಿನಾಯಿತಿ ಕೊಟ್ಟಿದೆ. ಬೆಳ್ಳಿ ವಸ್ತುಗಳ ತಯಾರಿಕಾ ವೇಸ್ಟೇಜ್ ಮೇಲೆ ಶೇ.25, ಬೆಳ್ಳಿ ಆಭರಣಗಳ ಎಂಆರ್‌ಪಿ ಬೆಲೆಯ ಮೇಲೆ ಶೇ.10 ವಿನಾಯಿತಿ ದೊರೆಯಲಿದೆ. ಈ ಎಲ್ಲ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಇರಲಿವೆ.
ಜಿಆರ್‌ಟಿ ಜುವೆಲ್ಲರಿ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್. ಆನಂದ್ ಅನಂತಪದ್ಮನಾಭನ್ ಮಾತನಾಡಿ, ಪ್ರತಿ ವರ್ಷವೂ ಆಷಾಢದ ಶಾಪಿಂಗ್ ಋತುಮಾನದಲ್ಲಿ ಗ್ರಾಹಕರಿಗಾಗಿ ವಿಶೇಷ ಕೊಡುಗೆ ತರುತ್ತಿದ್ದೇವೆ. ಈ ವರ್ಷವೂ ಅತ್ಯಂತ ಆಕರ್ಷಕ ಪ್ರಯೋಜನಗಳೊಂದಿಗೆ ‘ಸ್ವರ್ಣ ಆಷಾಢ’ ಪ್ರಸ್ತುತಪಡಿಸಲು ಸಂತಸವಾಗುತ್ತಿದೆ ಎಂದರು.