ಹಡಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಲಕ್ಷ್ಮಣ ಅತ್ತೆ ಅವರು ಶೈಕ್ಷಣಿಕ ಸಾಮಗ್ರಿ ವಿತರಿಸಿದರು. ಸಂಜುಕುಮಾರ ಜೋಗನ್, ಕಲ್ಯಾಣರಾವ ದಂಗಾಪುರ, ಕ್ಷೇಮಲಿಂಗ ಇದ್ದರು.
- ಸಂಜುಕುಮಾರ ಜೋಗನ್ ಅನಿಸಿಕೆ
- ಹಡಲಗಿ ಶಾಲೆಯಲ್ಲಿ "ನಮ್ಮ ಶಾಲೆ ನಮ್ಮ ಹೆಮ್ಮೆ' ಕಾರ್ಯಕ್ರಮ
ಮಾದನಹಿಪ್ಪರಗಿ: ಶಾಲೆಗಳು ಜೀವಂತ ದೇವಾಲಯ. ಕರಮುಗಿದ ಬರುವ ಮಕ್ಕಳಿಗೆ ಸಂಸ್ಕಾರ ನೀಡಿ ದೇಶ ಮುನ್ನಡೆಸುವ ವ್ಯಕ್ತಿಗಳನ್ನಾಗಿ ರೂಪಿಸುವ ಶಿಕ್ಷಕರು ನಿಜವಾದ ದೇವರು ಎಂದು ಹಡಲಗಿ ಸಮೂಹ ಸಂಪನ್ಮೂಲವ್ಯಕ್ತಿ ಸಂಜುಕುಮಾರ ಜೋಗನ್ ಹೇಳಿದರು.
ಹಡಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ "ನಮ್ಮ ಶಾಲೆ ನಮ್ಮ ಹೆಮ್ಮೆ' ಕಾರ್ಯಕ್ರಮದಡಿ ಸೋಮವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಣೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರು ಹಾಗೂ ಹಳೇ ವಿದ್ಯಾರ್ಥಿಗಳ ಕೊಡುಗೆ ಹೆಮ್ಮೆಯ ವಿಷಯ. ಶಾಲೆಗಳಿಗೆ ಮೂಲಸೌಕರ್ಯ, ಪುಸ್ತಕ ಮತ್ತು ಶೈಕ್ಷಣಿಕ ಪರಿಕರ ಒದಗಿಸುವುದೇ ನಮ್ಮ ಶಾಲೆ ನಮ್ಮ ಹೆಮ್ಮೆ ಯೋಜನೆಯ ಉದ್ದೇಶವಾಗಿದೆ ಎಂದರು.
ಕಲ್ಯಾಣರಾವ ದಂಗಾಪುರ ಮಾತನಾಡಿದರು. ಉದ್ಯಮಿ ಮಲ್ಲಿನಾಥ ಅತ್ತೆ ಪರವಾಗಿ ತಂದೆ ಲಕ್ಷ$್ಮಣ ಅತ್ತೆ ಅವರು 311 ಮಕ್ಕಳಿಗೆ ಉಚಿತವಾಗಿ ಶೈಕ್ಷಣಿಕ ಸಾಮಗ್ರಿ ವಿತರಣೆ ಮಾಡಿದರು.
ಎಸ್ಡಿಎಂಸಿ ಅಧ್ಯಕ್ಷರಾದ ೇಮಲಿಂಗ, ಹೈದರ್ ಪಟೇಲ್ ಡಿಗ್ಗಿ, ಪ್ರಮುಖರಾದ ಪರಮೇಶ್ವರ ಸರಸಂಬಿ, ಅಲ್ಲಾಬಕ್ಷ ಡಿಗ್ಗಿ, ಪೀರಪ್ಪ ಜಮಾದಾರ, ಮಲ್ಲಿನಾಥ ನೆಲ್ಲೂರ, ಯಶ್ವಂತರಾವ ನೀಲೂರ, ಸಣ್ಮುಖ ಸುತಾರ, ಆಕಾಶ ದಂಗಾಪುರ, ಸಂಜುಕುಮಾರ ಅತ್ತೆ, ಸಿದ್ದರಾಮ ಗುಳಗುಂಡಿ, ಸೋಮನಾಥ ದೊಡ್ಡಮನಿ, ಯಲ್ಲಾಲಿಂಗ ಕಲಾಲ್, ಜೈಬೀಮ ಜೋಗನ್ ಇತರರಿದ್ದರು.
ಮುಖ್ಯಗುರು ಪರಮೇಶ್ವರ ಕಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿನಾಥ ಉಮ್ಮರಗಿ ನಿರೂಪಣೆ ಮಾಡಿದರು. ಶ್ರೀಶೈಲ ಹುಗ್ಗಿ ವಂದಿಸಿದರು.