ಕಲಬುರಗಿ ಶರಣಬಸವ ವಿವಿ ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ಮಧ್ಯೆ ಒಡಂಬಡಿಕೆ ಪತ್ರವನ್ನು ಶುಕ್ರವಾರ ವಿನಿಮಯ ಮಾಡಿಕೊಳ್ಳಲಾಯಿತು. ಪ್ರೊ.ಅನಿಲಕುಮಾರ ಬಿಡವೆ, ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಡಾ.ಪ್ರಭುಗೌಡ ಬಿ.ಎಲ್., ಡಾ.ಮಾಲಿನಿ, ಅನಿಲ ರೆಡ್ಡಿ, ಡಾ.ಶಿಲ್ಪಾ ಕಂದಗೋಳ, ಪ್ರೊ.ನೀರಜ್ ತಡಕಲ್ ಇತರರಿದ್ದರು.
- ಕಲಬುರಗಿ ಶರಣಬಸವ ವಿಶ್ವವಿದ್ಯಾಲಯ ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆಯೊಂದಿಗೆ ಒಪ್ಪಂದ
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ನಿಕಾಯ (ವಿದ್ಯಾರ್ಥಿನಿಯರಿಗಾಗಿ ಮಾತ್ರ)ವು ಕಲಬುರಗಿಯ ವಿಕಾಸನುಮ್ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್ ಟಕವಾದ ಭೋರುಕಾ ನೇತ್ರಾಲಯ ಎಂದು ಕರೆಯಲ್ಪಡುವ ಅನುಗ್ರಹ ಕಣ್ಣಿನ ಆಸ್ಪತ್ರೆಯೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
ವಿವಿ ಕುಲಸಚಿವೆ ಡಾ.ಲಕ್ಷ್ಮೀ ಪಾಟೀಲ್ ಮಾಕಾ ಮತ್ತು ಅನುಗ್ರಹ ಆಸ್ಪತ್ರೆ ಅಧ್ಯಕ್ಷ ಡಾ.ಪ್ರಭುಗೌಡ ಬಿ.ಎಲ್. ಅವರು ಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಅನುಗ್ರಹ ಸಂಸ್ಥಾಪಕ ನಿರ್ದೇಶಕಿ ಡಾ.ಮಾಲಿನಿ ಪ್ರಭುಗೌಡ, ಆಡಳಿತಾಧಿಕಾರಿ ಅನಿಲ ರೆಡ್ಡಿ, ಬಿಬಿಎ(ವಿದ್ಯಾರ್ಥಿನಿಯರಿಗೆ ಮಾತ್ರ) ಮುಖ್ಯಸ್ಥ ಡಾ.ಶಿಲ್ಪಾ ಕಂದಗೋಳ ಮತ್ತು ಪ್ರೊ.ನೀರಜ್ ತಡಕಲ್ ಸಮ್ಮುಖದಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
ಈ ಒಪ್ಪಂದ ಶರಣಬಸವ ವಿಶ್ವವಿದ್ಯಾಲಯದ ಬಿಬಿಎ ಕಾರ್ಯಕ್ರಮ ಮತ್ತು ಅನುಗ್ರಹ ಆಸ್ಪತ್ರೆ ನಡುವೆ ಸಕ್ರಿಯ ಶೈಕ್ಷಣಿಕ ಮತ್ತು ಕೈಗಾರಿಕಾ ಸಹಯೋಗ ಸ್ಥಾಪಿಸುವ ಗುರಿ ಹೊಂದಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಜತೆ ಆಸ್ಪತ್ರೆ ಆಡಳಿತ ಮತ್ತು ನಿರ್ವಹಣೆಯ ವಿವಿಧ ಅಂಶಗಳಲ್ಲಿ ಅನುಭವ ಪಡೆಯಲು ಅನುವು ಮಾಡಿಕೊಡುತ್ತದೆ.
ಕೈಗಾರಿಕಾ ಭೇಟಿ, ಅತಿಥಿ ಉಪನ್ಯಾಸ, ಕಾರ್ಯಾಗಾರ ಮತ್ತು ತರಬೇತಿ ಆಯೋಜಿಸಲು ಸಹಕಾರಿಯಾಗಿದ್ದಲ್ಲದೆ ವಿದ್ಯಾರ್ಥಿಗಳ ವೃತ್ತಿಪರ ಕೌಶಲ ಹೆಚ್ಚಿಸಿ ಉದ್ಯೋಗಶೀಲತೆ ಸುಧಾರಿಸಲು ನೆರವಾಗುತ್ತದೆ. ಆಸ್ಪತ್ರೆಯ ಪ್ರಾಯೋಗಿಕ ತರಬೇತಿ ಅವಕಾಶ ವಿದ್ಯಾರ್ಥಿಗಳಿಗೆ ಆಸ್ಪತ್ರೆ ಆಡಳಿತ ಮತ್ತು ಆರೋಗ್ಯ ವ್ಯವಸ್ಥಾಪನೆಯಲ್ಲಿ ಅನುಭವ ನೀಡುತ್ತದೆ. ಆಸ್ಪತ್ರೆ ಆಡಳಿತ, ಮುಂಭಾಗದ ಕಚೇರಿ ವ್ಯವಸ್ಥಾಪನೆ, ಮಾನವ ಸಂಪನ್ಮೂಲ ನಿರ್ವಹಣೆ, ರೋಗಿ ಸಂಬಂಧ ವ್ಯವಸ್ಥಾಪನೆ, ಮಾರ್ಕೆಟಿಂಗ್, ಹಣಕಾಸು ಮತ್ತು ಸಾಮಾನ್ಯ ಆಡಳಿತದಂತಹ ಕಾರ್ಯಾತ್ಮಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಒದಗಿಸಲಿದೆ. ವಿದ್ಯಾರ್ಥಿಗಳ ಯೋಜನೆ, ಸಂಶೋಧನಾ ಉಪಕ್ರಮ ಮತ್ತು ಜ್ಞಾನ ಹಂಚಿಕೆ ಕಾರ್ಯಕ್ರಮ ಸೇರಿ ಸಹಯೋಗದ ಶೈಕ್ಷಣಿಕ ಚಟುವಟಿಕೆಯನ್ನೂ ಪ್ರೋತ್ಸಾಹಿಸುತ್ತದೆ.
"
ಈ ಒಪ್ಪಂದ ನಿಯಮಿತ ಕೈಗಾರಿಕಾ ಭೇಟಿ, ವೀಕ್ಷಣಾ ತರಬೇತಿ, ಅನುಭವಿ ವೃತ್ತಿಪರರಿಂದ ಮಾರ್ಗದರ್ಶನ ಹಾಗೂ ಸಲಹೆ ಖಚಿತಪಡಿಸುತ್ತದೆ. ಇದು ವಿದ್ಯಾರ್ಥಿಗಳು ಸಾಂಸ್ಥಿಕ ಅಭ್ಯಾಸ, ನೀತಿಶಾಸ ಮತ್ತು ಕಾರ್ಯೇತ್ರದ ನಿರೀೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ.
— > ಡಾ.ಲಕ್ಷ್ಮೀ ಪಾಟೀಲ್ ಮಾಕಾ ಕುಲಸಚಿವೆ, ಶರಣಬಸವ ವಿವಿ ಕಲಬುರಗಿ