ಸವದತ್ತಿ ನಗರದಲ್ಲಿ ಹಡಪದ ಅಪ್ಪಣ್ಣ ದೇವಸ್ಥಾನದ ಜೀಣೋರ್ದ್ಧಾರ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಮಲ್ಲಿಕಾರ್ಜುನ ಹಡಪದ, ಶಿವಾನಂದ ಹೂನ್ನೂರ, ಅಲ್ಲಮಪ್ರಭು ಪ್ರಭುನವರ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಪ್ರಭುನವರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಸವದತ್ತಿ
ಸಮಾಜದಲ್ಲಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಸಾರ್ವಜನಿಕರು ಹಾಗೂ ಸಮುದಾಯದ ಮುಖಂಡರು ಕೈಜೋಡಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದ ಹನಮಗೇರಿ ಓಣಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ದೇವಸ್ಥಾನದ ಜೀಣೋರ್ದ್ಧಾರ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ದೇವಸ್ಥಾನದ ಜೀಣೋರ್ದ್ಧಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ನಡೆಯಲಿದೆ. ದೇವಸ್ಥಾನದ ಅಭಿವೃದ್ಧಿಗಾಗಿ 10 ಲ ರೂ. ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಶಿವಶರಣ ಹಡಪದ ಅಪ್ಪಣ್ಣನವರ ಆದರ್ಶ ಹಾಗೂ ವಚನ ಸಾಹಿತ್ಯ ಸಮಾಜಕ್ಕೆ ದಾರಿದೀಪವಾಗಿವೆ. ಇಂತಹ ಮಹನೀಯರ ಸಂದೇಶ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಮಾಜದಲ್ಲಿ ಸಾಂಸತಿಕ, ಆಧ್ಯಾತ್ಮಿಕ ಮೌಲ್ಯ ಸಾರುವಲ್ಲಿ ಮಠ&ಮಂದಿರಗಳ ಪಾತ್ರ ಪ್ರಮುಖವಾಗಿದೆ ಎಂದರು.
ಮುಖಂಡರಾದ ಚಂದ್ರು ಶಾಮರಾಯನವರ, ಅಲ್ಲಮಪ್ರಭು ಪ್ರಭುನವರ, ಶಿವಾನಂದ ಪಟ್ಟಣಶೆಟ್ಟಿ, ಬಸವರಾಜ ಪ್ರಭುನವರ, ಮಲ್ಲು ಜಕಾತಿ, ನಾಗಪ್ಪ ಬಜೇರಿ, ಸಮುದಾಯದ ಜಿಲ್ಲಾಧ್ಯ ಶಿವಾನಂದ ಹುನ್ನೂರ, ತಾಲೂಕಾಧ್ಯ ಮಲ್ಲಿಕಾರ್ಜುನ ಹಡಪದ, ವಿನೋದ ಹಡಪದ, ಶೇಖರ ಹಡಪದ, ಮಹಾಂತೇಶ ಹಡಪದ, ಮೌಳೇಶಪ್ಪ ಹಡಪದ, ಕೀರಪ್ಪ ಬಿದರಗಡ್ಡಿ, ಬಾಬು ಹಡಪದ, ಮುತ್ತು ಹಡಪದ, ರಾಜು ಹಡಪದ, ಅಶೋಕ ಹಡಪದ, ಮಂಜು ಹಡಪದ, ವಿರೂಪಾ ಹಡಪದ, ಸುರೇಶ ಹಡಪದ, ರುದ್ರಪ್ಪ ಹುಬ್ಬಳ್ಳಿ ಇತರರಿದ್ದರು.