ಕಲಬುರಗಿ ದಣ ವಲಯ ಸರ್ಕಾರಿ ಪ್ರಾತ್ಯಕ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಜಿಪಂ ಸಿಇಒ ರಾಹುಲ್​ ಸಂಕನೂರ್​ ಚಾಲನೆ ನೀಡಿದರು. ಸಾಗರ ತವಡೆ, ಮೌಲಾಲಿಸಾಬ್​, ಸಂತೋಷಕುಮಾರ್​, ತುಕ್ಕಪ್ಪ, ಮಹೇಂದ್ರ, ವಿಜಯಕುಮಾರ ಜಮಖಂಡಿ ಇತರರಿದ್ದರು. 
ರಾಜ್ಯ

ಜಾಗತಿಕ ತಾಪಮಾನ ಅರಿವು ಅಗತ್ಯ

ಜಯತೀರ್ಥ ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಪ್ರಾತ್ಯಕ್ಷಿಕೆ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕಲಬುರಗಿ: ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಗಾಳಿ, ನೀರು ಮತ್ತು ಆಹಾರ ಸಿಗಲು ಪರಿಸರವೇ ಆಧಾರ. ಪರಿಸರವನ್ನು ಉಳಿಸುವುದರಿಂದ ಜೀವವೈವಿಧ್ಯತೆ ಕಾಪಾಡಬಹುದು. ಹೀಗಾಗಿ ಪರಿಸರ ಮಾಲಿನ್ಯ, ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನದಂತಹ ಗಂಭೀರ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್​ ಸಂಕನೂರ್​ ಹೇಳಿದರು.
ಕಲಬುರಗಿ ದಣ ವಲಯ ಸರ್ಕಾರಿ ಪ್ರಾತ್ಯಕ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ, ಸಾಮಾಜಿಕ ಅರಣ್ಯ ವಲಯ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮರಗಳನ್ನು ಬೆಳೆಸುವುದರಿಂದ ಪರಿಸರ ಸಮತೋಲನ ಕಾಪಾಡಿಕೊಳ್ಳಬಹುದು. ಜತೆಗೆ ಮಳೆ ಹಾಗೂ ಶುದ್ಧ ಗಾಳಿ ದೊರೆಯುತ್ತದೆ ಎಂಬುದನ್ನು ಜನ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಕ್ರಮ ಆಯೋಜಿಸಬೇಕು ಎಂದರು.
ಜಿಲ್ಲಾ ಉಪ ಅರಣ್ಯ ಸಂರಣಾಧಿಕಾರಿ ಸಾಗರ ತವಡೆ, ವಲಯ ಅರಣ್ಯ ಅಧಿಕಾರಿ ಮೌಲಾಲಿಸಾಬ, ಉಪ ವಲಯ ಅರಣ್ಯ ಅಧಿಕಾರಿ ಸಂತೋಷಕುಮಾರ ಮತ್ತು ತುಕ್ಕಪ್ಪ, ಅರಣ್ಯ ರಕ ಮಹೇಂದ್ರ, ೇತ್ರ ಶಿಣಾಧಿಕಾರಿ ವಿಜಯಕುಮಾರ ಜಮಖಂಡಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯ ದಸ್ತಯ್ಯ ಗುತ್ತೇದಾರ್​, ಪ್ರೌಢ ಶಾಲಾ ಎಸ್​ಡಿಎಂಸಿ ಅಧ್ಯ ರುದ್ರಯ್ಯ ಹಿರೇಮಠ್​, ನಂದಿಕೂರ ಗ್ರಾಮಸ್ಥರಾದ ಸಂಗಮೇಶ ಕಟ್ಟಿಮನಿ, ಲಾಲ್​ಪಾಷಾ ಸಲಗರ, ಶ್ರೀಕಾಂತ ಉಳ್ಳಿ ಹಾಗೂ ನಂದಿಕೂರ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕರು, ಶಿಕರು, ಪ್ರಾಥಮಿಕ ಶಾಲಾ ಶಿಕ್ಷರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.