ಕಲಬುರಗಿ ಶರಣಬಸವ ವಿವಿ ಶುಕ್ರವಾರ ಆಯೋಜಿಸಿದ್ದ ಜ್ಞಾನೋತ್ಸವ&2026 ಟೆಕ್ನೋ ಕಲ್ಚರಲ್ ಫೆಸ್ಟ್ಗೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಚಾಲನೆ ನೀಡಿದರು. ಚಿ.ಪೂಜ್ಯ ದೊಡ್ಡಪ್ಪ ಅಪ್ಪ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಬಸವರಾಜ ದೇಶಮುಖ, ಡಾ.ಅನಿಲಕುಮಾರ ಬಿಡವೆ, ಡಾ.ಲಕ್ಷಿ$್ಮ ಪಾಟೀಲ್ ಮಾಕಾ, ಡಾ.ಕಿರಣ್ ಮಾಕಾ, ಡಾ.ಶುಭಾಂಗಿ, ಡಾ.ಬಸವರಾಜ ಗಾದಗೆ, ಡಾ.ವಿ.ಡಿ.ಮೈತ್ರಿ, ಡಾ.ಶಿವಕುಮಾರ ಜಾವಳಗಿ ಇತರರಿದ್ದರು.
- ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಹೇಳಿಕೆ
- ಶರಣಬಸವ ವಿವಿ ಜ್ಞಾನೋತ್ಸವ-2026ಗೆ ಚಾಲನೆ
- ಜಾಗತಿಕ ಮಟ್ಟದ ಚಿಂತನೆ ಅಗತ್ಯ
ಕಲಬುರಗಿ: ಶಿಕ್ಷಣ ಸೇರಿ ಬಹುತೇಕ ವಿಷಯಗಳಲ್ಲಿ ಅನೇಕ ಬದಲಾವಣೆ ಕಾಣುತ್ತಿದ್ದೇವೆ. ಈ ಹೊತ್ತಿನಲ್ಲಿ ಜಾಗತಿಕ ಮಟ್ಟದ ಚಿಂತನೆ ಅಗತ್ಯ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯ ಎಸ್.ಬಿ.ಆರ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಜ್ಞಾನೋತ್ಸವ-2026 ಟೆಕ್ನೋ ಕಲ್ಚರಲ್ ಫೆಸ್ಟ್ಗೆ ಚಾಲನೆ ನೀಡಿ ಮಾತನಾಡಿದ ಅವರು, ಇದೊಂದು ಜ್ಞಾನದ ಉತ್ಸವ. ವ್ಯಕ್ತಿ, ಕುಟುಂಬ, ಸಮಾಜ ಅಷ್ಟೇ ಅಲ್ಲ ಇಡಿ ಪ್ರಪಂಚ ಬದಲಾವಣೆ ಮಾಡುವ ಶಕ್ತಿ ಜ್ಞಾನಕ್ಕಿದೆ ಎಂದು ಪ್ರತಿಪಾದಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಅಡಿಯಲ್ಲಿ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದೆ. ಈ ವಿದ್ಯಾಸಂಸ್ಥೆಯಲ್ಲಿ ಅಧ್ಯಯನ ಮಡಿದ ಸಾವಿರಾರು ಮಕ್ಕಳು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಅನೇಕರು ಸ್ವಂತ ಉದ್ಯಮ ಸ್ಥಾಪಿಸಿ ನೂರಾರು ಕೈಗಳಿಗೆ ಕೆಲಸ ನೀಡಿರುವುದು ಶ್ಲಾನೀಯ ಎಂದರು.
ಅಧ್ಯಯನದ ನಂತರ ಕೆಲಸ ಹುಡುಕಿಕೊಂಡು ಹೋಗುವ ಬದಲಾಗಿ ಸ್ವಂತ ಉದ್ಯಮಿಗಳಾಗಿ ಹತ್ತಾರು ಕೈಗಳಿಗೆ ಕೆಲಸ ನೀಡಲು ಚಿಂತಿಸಬೇಕು. ದೊಡ್ಡ ಕನಸು ಕಾಣಿ, ಗುರಿ ತಲುಪಲು ಪರಿಶ್ರಮ ಹಾಕಿ. ಶಿಕ್ಷಣ, ಮೂಲಸೌಲಭ್ಯ ಸೇರಿ ಅನೇಕ ಕ್ಷೇತ್ರಗಳಲ್ಲಿ ಅಪಾರ ಪ್ರಮಾಣದ ಬದಲಾವಣೆ ಕಾಣುತ್ತಿವೆ. ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು. ವಿದ್ಯಾರ್ಥಿ ಜೀವನ ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬಾರದು. ವಿದ್ಯೆ ಇದೊಂದು ತಪಸ್ಸು. ಈ ಹಂತದಲ್ಲಿ ಕಷ್ಟಪಟ್ಟರೆ ಯಶಸ್ಸು ಗ್ಯಾರಂಟಿ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜ್ಞಾನ, ಸಂಸತಿ ಪರಿಚಯಿಸಲು ಜ್ಞಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಅಧ್ಯಯನದ ನಂತರ ಕೆಲಸ ಹುಡುಕಿಕೊಂಡು ಹೋಗುವ ಬದಲಾಗಿ ಉದ್ಯೋಗದಾತರಾಗಬೇಕು. ಜ್ಞಾನ ಪಡೆದು ಈ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಲಿಂ.ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಈ ಭಾಗದ ವಿದ್ಯಾರ್ಥಿಗಳಿಗೆ ಅಗತ್ಯ ಜ್ಞಾನ ನೀಡಲಾಗುತ್ತಿದೆ. ಪೂಜ್ಯ ಅಪ್ಪಾಜಿ ಅವರು ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಸ್ಕೂಲು, ಕಾಲೇಜುಗಳಿಗೆ ಸೀಮಿತವಾಗಿದ್ದ ಸಂಸ್ಥೆಯನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಬೆಳೆಸಿದರು ಎಂದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ 'ಾನೋತ್ಸವ' ಟೆಕ್ನೋ ಕಲ್ಚರಲ್ ಫೆಸ್ಟ್ ಅದ್ದೂರಿಯಾಗಿ ನಡೆಯಿತು. ವಿದ್ಯಾರ್ಥಿಗಳು ರ್ಯಾಂಪ್ ವಾಕ್, ಡಾನ್ಸ್, ಸಿಂಗಿಂಗ್, ಸ್ಟಾ$್ಯಂಡ್ ಆಫ್ ಕಾಮಿಡಿ ಸೇರಿ ಸಾಂಸತಿಕ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆ ಹೊರ ಹಾಕಿದರು.
ಕೆಲ ವಿದ್ಯಾರ್ಥಿಗಳು ತಮ್ಮದೆಯಾದ ಸ್ಟಾಲ್ಗಳನ್ನು ಹಾಕಿ ಪಾನಿಪುರಿ, ಭೇಲಪುರಿ, ಹಣ್ಣು ಸೇರಿ ಅನೇಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿರುವುದು ವಿಶೇಷವಾಗಿತ್ತು.
ಜನೋತ್ಸವ ಸಮಾರಂಭದಲ್ಲಿ ಸ್ವತ@ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಅದ್ದೂರಿಯಾಗಿ ಮಾತೋಶ್ರೀ ಡಾ.ದಾಾಯಿಣಿ ಅಪ್ಪ, ಚಿ.ದೊಡ್ಡಪ್ಪ ಅಪ್ಪ ಅವರನ್ನು ವೇದಿಕೆಯತ್ತ ಸ್ವಾಗತಿಸಿದರು. ಸ್ವತ@ ವಿದ್ಯಾರ್ಥಿಗಳು ಡೊಳ್ಳು, ಹಲಗೆ ವಾದನ ಮೂಲಕ ಗುಲಾಬಿ ಹೂವು ತೂರುತ್ತಾ ವಿಶೇಷ ಸ್ವಾಗತ ಕೋರಿದರು. ಡೊಳ್ಳು, ಹಲಗೆ ಬಾರಿಸುವ ವಿದ್ಯಾರ್ಥಿನಿಯರು ಇಳಕಲ್ ಸೀರೆ ಹಾಗೂ ಹಲಗೆ ಬಾರಿಸುವ ವಿದ್ಯಾರ್ಥಿಗಳು ಪೈಜಾಮ್ ಧರಿಸಿ, ಗಮನಸೆಳೆದರು.
ವಿಶ್ವವಿದ್ಯಾಲಯದ ಕುಲಸಚಿವೆ ಡಾ.ಲಕ್ಷಿ$್ಮ ಪಾಟೀಲ್ ಮಾಕಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ.ಪೂಜ್ಯ ದೊಡ್ಡಪ್ಪ ಅಪ್ಪ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಟಿಯು ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಡಾ.ಶುಭಾಂಗಿ ಡಿ.ಸಿ, ಡಾ.ಬಸವರಾಜ ಗಾದಗೆ, ವಿವಿ ಕುಲಪತಿ ಡಾ.ಅನಿಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ.ಎಸ್.ಎಚ್.ಹೊನ್ನಳ್ಳಿ, ವಿತ್ತಾಧಿಕಾರಿ ಡಾ.ಕಿರಣ್ ಮಾಕಾ, ನಿರ್ದೇಶಕರಾದ ಡಾ.ವಿ.ಡಿ.ಮೈತ್ರಿ, ಎನ್.ಎಸ್.ದೇವರಕಲ್, ಡೀನ್ ಡಾ.ಶಿವಕುಮಾರ ಜಾವಳಗಿ ಇತರರಿದ್ದರು.
"
ಲಿಂ.ಪೂಜ್ಯ ಶರಣಬಸವಪ್ಪ ಅಪ್ಪಾಜಿ ಅವರು ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು. ಇಂದು ಮಹಿಳಾ ಕಾಲೇಜು, ಮಹಿಳೆಯರಿಗಾಗಿ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮೂಲಕ ಈ ಭಾಗದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇದರ ಸದ್ಬಳಕೆ ಮಾಡಿಕೊಂಡು ಸಾಧನೆ ಮಾಡಬೇಕು.
— ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕುಲಾಧಿಪತಿ, ಶರಣಬಸವ ವಿವಿ ಕಲಬುರಗಿ.
"
ಎಐ, ಸಾಮಾಜಿಕ ಜಾಲತಾಣ, ತಂತ್ರಜ್ಞಾನದ ಮಧ್ಯೆ ಬೆಳೆಯಬೇಕಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಪಾರ ಸ್ಪರ್ಧೆ ನಡೆದಿದೆ. ಹೀಗಾಗಿ ಪ್ರತಿ ಹಂತದಲ್ಲೂ ಅಪ್ಡೇಟ್ ಆಗಲೇಬೇಕು. ಶಿಕ್ಷಕರು, ಪಾಲಕರನ್ನು ವಿದ್ಯಾರ್ಥಿಗಳು ಗೌರವಿಸಬೇಕು. ಸಂಚಾರಿ ನಿಯಮ ಪಾಲನೆ ಮಾಡಬೇಕು.
— ಡಾ.ಶರಣಪ್ಪ ಎಸ್.ಡಿ, ಪೊಲೀಸ್ ಆಯುಕ್ತ, ಕಲಬುರಗಿ.