- ರಸ್ತೆ ಸ್ವಚ್ಛತೆಗೆ ಇಳಿದ ನಗರಸಭೆ
ಯಾದಗಿರಿ: ಜಿಲ್ಕಾಲಾಧಿಕಾರಿ ರಾಹುಲ್ ತುಕರಾಂ ಪಾಂಡ್ವೆ ಅವರು ಕಳೆದ ೧೫ ದಿನಗಳಿಂದ ಬೆಳಗ್ಗೆ ನಿರಂತರವಾಗಿ ನಗರದ ವಿವಿಧಡೆ ಭೇಟಿ ನೀಡಿ ಸ್ವಚ್ಛತೆ ಹಾಗೂ ಸೌಲಭ್ಯಗಳಿಗೆ ಸೂಕ್ತ ಕ್ರಮ ಜರುಗಿಸುವಂತೆಯೇ ನಗರಸಭೆ ಅಽಕಾರಿಗಳಿಗೆ ಸೂಚಿಸಿದ ಬೆನ್ನೆಲೆ ನಗರಸಭೆ ಆಡಳಿತ ಕಾರ್ಯ ಚುರುಕುಗೊಳಿಸಿದೆ.
ನಗರದ ನೈರ್ಮಲ್ಯ ಮತ್ತು ಸೌಂದರ್ಯ ಕಾಪಾಡುವ ಉದ್ದೇಶದಿಂದ ಯಾದಗಿರಿ ನಗರಸಭೆಯು ಯಾಂತ್ರಿಕ ರಸ್ತೆ ಸ್ವಚ್ಛತಾ ಯಂತ್ರಗಳನ್ನು (ಸ್ವೀಪಿಂಗ್ ಮಷಿನ್) ರಸ್ತೆಗೆ ಇಳಿಸಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದೆ.
ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ರಸ್ತೆ ಬದಿಯಲ್ಲಿ ಸಂಗ್ರಹವಾಗಿದ್ದ ಮಣ್ಣು, ಧೂಳು ಮತ್ತು ಕಸವನ್ನು ಯಂತ್ರಗಳ ಮೂಲಕ ತೆರವುಗೊಳಿಸಲಾಗುತ್ತಿದೆ. ವಿಶೇಷವಾಗಿ ನಗರದ ಪ್ರಮುಖ ವಾಣಿಜ್ಯ ಹಾಗೂ ಸಂಚಾರ ಕೇಂದ್ರಗಳಾದ ಸುಭಾಷ್ ವೃತ್ತ ಮತ್ತು ಸ್ಟೇಷನ್ ರಸ್ತೆಯ ಇಕ್ಕೆಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿದ್ದ ಮಣ್ಣನ್ನು ಯಾಂತ್ರಿಕವಾಗಿ ತೆರವುಗೊಳಿಸಿ ರಸ್ತೆ ಬದಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ.
ರಸ್ತೆ ಬದಿಯಲ್ಲಿ ಮಣ್ಣು ಸಂಗ್ರಹವಾಗಿದ್ದರಿಂದ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಧೂಳು ಏಳುತ್ತಿತ್ತು. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿತ್ತು. ಅಲ್ಲದೆ, ರಸ್ತೆ ಮೇಲೆ ಮಣ್ಣು ಹರಡಿಕೊಂಡಿದ್ದರಿAದ ದ್ವಿಚಕ್ರ ವಾಹನ ಸವಾರರು ಜಾರಿಬೀಳುವ ಆತಂಕವೂ ಎದುರಾಗಿತ್ತು.
ನಗರಸಭೆಯ ಈ ಸ್ವಚ್ಛತಾ ಕಾರ್ಯದಿಂದ ಪ್ರಮುಖ ರಸ್ತೆಗಳಲ್ಲಿ ಮಣ್ಣು ಹಾಗೂ ಧೂಳಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತಿದೆ. ಯಾಂತ್ರಿಕ ಸ್ವಚ್ಛತಾ ಯಂತ್ರಗಳ ಬಳಕೆಯಿಂದ ಕಡಿಮೆ ಅವಽಯಲ್ಲಿ ಹೆಚ್ಚಿನ ಪ್ರಮಾಣದ ಮಣ್ಣನ್ನು ತೆರವುಗೊಳಿಸಲು ಸಾಧ್ಯವಾಗುತ್ತಿರುವುದರಿಂದ ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಹೊಸ ಮೆರುಗು ದೊರೆಯುತ್ತಿದೆ. ಖುಕ್ಷಿಯಾಗಿ ಸ್ಥಳದಲ್ಲಿಯೇ ಇದ್ದು ಕೆಲಸ ಮಾಡಿಸುತ್ತಿರುವ
ನಗರಸಭೆ ಪೌರಾಯುಕ್ತ ಉಮೇಶ್ ಚವಾಣ್ ಮಾತನಾಡಿ, ರಸ್ತೆ ಬದಿಯಲ್ಲಿ ಸಂಗ್ರಹವಾಗುವ ಮಣ್ಣನ್ನು ಯಾಂತ್ರಿಕವಾಗಿ ತೆರವುಗೊಳಿಸುವ ಮೂಲಕ ನಗರದ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಕಾಪಾಡಲು ಸಾಧ್ಯವಾಗಲಿದೆ. ಸಾರ್ವಜನಿಕರು ಮತ್ತು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರಸಭೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ನಗರದ ಇತರ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿಯೂ ಇದೇ ರೀತಿಯ ಸ್ವಚ್ಛತಾ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ಮಣ್ಣು ಸಂಗ್ರಹವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ಪರಿಸರ ಅಭಿಯಂತರ ಪ್ರಶಾಂತï ಸೂರ್ಯವಂಶಿ, ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥï ಚವಾಣï ಹಾಗೂ ಸೂಪರ್‌ವೈಸರï ಅರುಣï ಕುಮಾರï ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.