ಮಾದಕ ವಸ್ತು ಬಿಡಿ ಮ್ಯಾರಥಾನ್​ ಮಾಡಿ marathon 
ರಾಜ್ಯ

ಮಾದಕ ವಸ್ತು ಬಿಡಿ ಮ್ಯಾರಥಾನ್​ ಮಾಡಿ marathon

ಕೆಜಿಎಫ್:ಕೇವಲ ಕೆಜಿಎಫ್​ನಲ್ಲಿ ಮಾತ್ರವಲ್ಲದೇ ಇತರ ಕಡೆಗಳಲ್ಲೂ ಮಾದಕ ವಸ್ತುಗಳ ಕುರಿತಾಗಿ ಜಾಗೃತಿ ಕಡಿಮೆಯಿದ್ದು, ಎಲ್ಲರಿಗೂ ಈ ಕುರಿತು ಜಾಗೃತಿ ಮೂಡಿಸುವುದು ಮ್ಯಾರಥಾನ್​ನ ಪ್ರಮುಖ ಉದ್ದೇಶವಾಗಿದೆ ಎಂದು ಕೆಜಿಎ್​ ಪೊಲೀಸ್​ ವರಿಷ್ಠಾಧಿಕಾರಿ ಶಿವಾಂಶು ರಜಪೂತ್​ ಹೇಳಿದರು. marathon
ನಮ್ಮ ಪೊಲೀಸ್​ ನಮ್ಮ ಹೆಮ್ಮೆ, ಎಲ್ಲರಿಗೂ ಫಿಟ್ನೆಸ್​ ಫ್ರೀ ಶೀರ್ಷಿಕೆಯಡಿ ಕೆಜಿಎ್​ ಜಿಲ್ಲಾ ಪೊಲೀಸ್​ನಿಂದ ಹಮ್ಮಿಕೊಂಡಿದ್ದ ಮಾದಕ ವಸ್ತು ಮುಕ್ತ ಕೆಜಿಎಫ್​ ನಿಮಾರ್ಣ ಕಾರ್ಯಕ್ರಮದಲ್ಲಿ 5 ಕಿಮೀ ಮ್ಯಾರಥಾನ್​ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾದಕ ವಸ್ತು ಸೇವನೆಯಿಂದ ಇನ್ನಿಲ್ಲದ ತೊಂದರೆ ಎದುರಿಸಬೇಕಾಗುತ್ತದೆ. ಹದಿಹರೆಯದ ಮಕ್ಕಳು ಎಚ್ಚರಿಕೆಯಿಂದ ಇರಬೇಕು. ಯಾರೇ ಆಗಲಿ ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕೂಡಲೇ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿಸಿ ಎಂದು ಹೇಳಿದರು.
ಒಮ್ಮೆ ಮಾದಕ ವಸ್ತುಗಳ ಚಟಕ್ಕೆ ದಾಸರಾದಲ್ಲಿ ಮತ್ತೆ ಆ ಕೂಪದಿಂದ ಹೊರಬರಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಇದಕ್ಕೆ ದಾಸರಾದಲ್ಲಿ ಓದಲು, ಬರೆಯಲು ಸಾಧ್ಯವಾಗುವುದಿಲ್ಲ. ಬೇರೆ ಯಾವುದೇ ಕೆಲಸವನ್ನು ಮಾಡಲು ಮನಸ್ಸಾಗದಂತಹ ಹಂತಕ್ಕೆ ಇದು ತೆಗೆದುಕೊಂಡು ಹೋಗುತ್ತದೆ ಎಂದರು.
ಡಿವೈಎಸ್ಪಿ ಲಕ್ಷ$್ಮಯ್ಯ ಮಾತನಾಡಿ, ಮಾದಕ ವಸ್ತುಗಳನ್ನು ಸೇವಿಸಲೇಬೇಕೆಂಬ ಬಯಕೆಯಿಂದ ಮನೆಯಲ್ಲಿ ತಂದೆ, ತಾಯಿ ಇಟ್ಟ ಹಣ ಕದಿಯಲು ಪ್ರಾರಂಭವಾಗಿ ಅಪರಾಧ ಚಟುವಟಿಕೆಗಳು ದೊಡ್ಡ ಮಟ್ಟದವರೆಗೂ ಆಗುತ್ತವೆ ಎಂದರು.
ಮೋಜಿಗಾಗಿ ಮಾದಕ ವಸ್ತು ಸೇವನೆ ಆರಂಭಿಸಿದ ವ್ಯಕ್ತಿ ಅವನಿಗೆ ಅರಿವಿಲ್ಲದಂತೆ ಪದೇಪದೆ ಅದನ್ನು ಬಳಸಲು ಪ್ರಾರಂಭಿಸುತ್ತಾನೆ. ಏಕೆಂದರೆ ಅದು ಅವನಿಗೆ ಸಂತೋಷವನ್ನುಂಟುಮಾಡುತ್ತದೆ. ಅಲ್ಲದೇ ಹಿತಕರ ಅನುಭವ ನೀಡುತ್ತದೆ. ಸಮಯ ಕಳೆದಂತೆ ಇವುಗಳ ಉಪಯೋಗ ಚಟಕ್ಕೆ ತಿರುಗಿಬಿಡುತ್ತದೆ ಎಂದರು.
ನಗರಸಭಾ ಮೈದಾನದಿಂದ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾದ ಮ್ಯಾರಥಾನ್​ನಲ್ಲಿ ಶಾಲಾ&ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್​ಕುಮಾರ್​, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ನಟಿ ರಾಧಿಕಾ, ದಿವ್ಯಾ, ಎಸ್​ಬಿಐ ವ್ಯವಸ್ಥಾಪಕ ಮೋಹನ್​ಸಿಂಗ್​, ವೃತ್ತ ನೀರಿಕ್ಷಕ ಸೋಮಶೇಖರ್​, ಮಾರ್ಕಂಡಯ್ಯ, ರಂಗಶಾಮಯ್ಯ, ನವೀನ್​ರೆಡ್ಡಿ, ಡಾ.ವಿಕ್ರಮ್​ ಇತರರು ಇದ್ದರು.