ಹುಳಿಯಾರಿನಲ್ಲಿ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿhealthcampಬಿರದ ಸಮಾರೋಪವನ್ನು ಸಿದ್ದರಾಮ ದೇಸಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಪೂಜಿತಾ, ರವೀಶ್​, ಕಿರಣ್​, ಗೋಪಿಕೃಷ್ಣ ಇತರರು ಇದ್ದರು.  
ರಾಜ್ಯ

ದುಶ್ಚಟ ಬಿಟ್ಟು ಉತ್ತಮ ಬದುಕು ರೂಪಿಸಿಕೊಳ್ಳಿ healthcamp

ಹುಳಿಯಾರು :ಮದ್ಯಪಾನವು ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಕುಟುಂಬವನ್ನು ವಿನಾಶದತ್ತ ದೂಡುತ್ತದೆ. ಹೀಗಾಗಿ, ಶಿಬಿರಾರ್ಥಿಗಳು ಮದ್ಯದ ದುಶ್ಚಟವನ್ನು ಸಂಪೂರ್ಣವಾಗಿ ತ್ಯಜಿಸಿ, ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಯಳನಾಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಸಿಕೇಂದ್ರ ಸ್ವಾಮೀಜಿ ತಿಳಿಸಿದರು.
ಹುಳಿಯಾರಿನ ಬಸವೇಶ್ವರ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್​ ಸಹಯೋಗದಲ್ಲಿ ಆಯೋಜಿಸಿದ್ದ 2088ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. healthcamp
ಶಿಬಿರದಲ್ಲಿ ಪಾಲ್ಗೊಂಡಿದ್ದ 54 ಶಿಬಿರಾರ್ಥಿಗಳಿಗೆ ಮಂಜುನಾಥಸ್ವಾಮಿ ಹೆಸರಿನಲ್ಲಿ ಪ್ರಮಾಣವಚನ ಬೋಧಿಸಿದ ಶ್ರೀಗಳು, ದೇವರ ಮುಂದೆ ಮಾಡಿದ ಪ್ರಮಾಣ ಯಾರೂ ಮುರಿಯಬಾರದು. ಇನ್ನು ಮುಂದೆ ಎಂದಿಗೂ ಮದ್ಯದ ಕಡೆಗೆ ಮುಖ ಮಾಡಬಾರದು.
ಮದ್ಯಕ್ಕೆ ಖರ್ಚು ಮಾಡುವ ಹಣವನ್ನು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಕುಟುಂಬದ ಧಾರ್ಮಿಕ ಕಾರ್ಯಗಳಿಗೆ ಬಳಸುವ ಮೂಲಕ ಉತ್ತಮ ಮನುಷ್ಯರಾಗಬೇಕು ಎಂದು ತಿಳಿಸಿದರು.ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್​ಆರ್​ಎಸ್​ ದಯಾನಂದ್​ ಮಾತನಾಡಿ, ಮೊದಲ ದಿನ ನಿಮ್ಮನ್ನು ನೋಡಿದ ಪರಿಸ್ಥಿತಿಗೂ ಇವತ್ತು ನಿಮ್ಮ ಮುಖದಲ್ಲಿ ಕಾಣುತ್ತಿರುವ ತೇಜಸ್ಸಿಗೂ ಅಜಗಜಾಂತರ ವ್ಯತ್ಯಾಸವಿದೆ
. ಹಿಂದೆ ಮದ್ಯದ ದಾಸರಾಗಿದ್ದ ನಿಮ್ಮ ಮುಖದಲ್ಲಿ ಇಂದು ಆ ತರಹದ ಯಾವುದೇ ಕುರುಹುಗಳಿಲ್ಲದೆ ಎಲ್ಲರೂ ಅತ್ಯಂತ ಕ್ರಿಯಾಶೀಲವಾಗಿ ಕಾಣಿಸುತ್ತಿದ್ದೀರಾ. ನಿಮ್ಮ ಈ ಬದಲಾವಣೆ ನಿಮ್ಮ ಇಡೀ ಕುಟುಂಬಕ್ಕೆ ಹೊಸ ಭರವಸೆ ನೀಡಿದೆ ಎಂದರು.
ನರುವಗಲ್​ ಡೇರಿ ಅಧ್ಯಕ್ಷ ಗೋಪಿಕೃಷ್ಣ ಮಾತನಾಡಿ, ಹಳ್ಳಿಗಳಲ್ಲಿರುವ ಪೆಟ್ಟಿಗೆ ಅಂಗಡಿಗಳು, ಕಿರಾಣಿ ಅಂಗಡಿಗಳು ಹಾಗೂ ಹೋಟೆಲ್​ಗಳಲ್ಲಿ ಮದ್ಯ ಅಕ್ರಮವಾಗಿ ಮಾರಾಟವಾಗುತ್ತಿರುವುದು ಕಂಡುಬರುತ್ತಿದೆ. ಶಿಬಿರ ಮುಗಿಸಿ ಹಳ್ಳಿಗಳಿಗೆ ಮರಳುವ ನೀವು, ನಿಮ್ಮ ನಿಮ್ಮ ಗ್ರಾಮಗಳಲ್ಲಿ ಇಂತಹ ಮದ್ಯ ಅಕ್ರಮ ಮಾರಾಟ ಕಂಡುಬಂದರೆ ಅದನ್ನು ಧೈರ್ಯವಾಗಿ ಖಂಡಿಸಬೇಕು ಎಂದರು.
ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶಿವಪ್ಪ, ಯೋಜನಾಧಿಕಾರಿ ತಿಮ್ಮಯ್ಯನಾಯಕ್​, ಬ್ರಹ್ಮಕುಮಾರಿ ಸಮಾಜದ ಗೀತಾ, ಪಪಂ ಅಧ್ಯೆ ಪ್ರೀತಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್​ಆರ್​ಎಸ್​ ದಯಾನಂದ್​, ಪಪಂ ಸದಸ್ಯೆ ಫಾತೀಮಾ, ಮಾಜಿ ಸದಸ್ಯ ರಾಘವೇಂದ್ರ, ಆಯುರ್ವೇದ ವೈದ್ಯ ಬಸವರಾಜ ಪಂಡಿತ್​, ಯೋಜನಾಧಿಕಾರಿ ರಾಮಚಂದ್ರ, ಶಿಬಿರಾಧಿಕಾರಿ ಕೆ.ರಮೇಶ್​ ಇದ್ದರು.