ಅಂಗವಿಕಲರಿಗೆ ಅನುಕಂಪಕ್ಕಿಂತ ಅವಕಾಶ ನೀಡಿ disabled
- ಅರಿವು ಕಾರ್ಯಕ್ರಮದಲ್ಲಿ ೇತ್ರ ಶಿಣಾಧಿಕಾರಿ ಕೆ.ಎನ್.ರಾಮಚಂದ್ರಪ್ಪ ಸಲಹೆ
ಮುಳಬಾಗಿಲು: ಅಂಗವಿಕಲರ ಬಗ್ಗೆ ಅನುಕಂಪ ಬೇಡ. ಅವಕಾಶ ನೀಡಿ. ಅವರನ್ನು ಮುಖ್ಯ ವಾಹಿನಿಗೆ ತರಬೇಕಾದ ಜವಾಬ್ದಾರಿ ಎಲ್ಲರ ಮೇಲೆ ಇದೆ ಎಂದು ೇತ್ರ ಶಿಣಾಧಿಕಾರಿ ಕೆ.ಎನ್.ರಾಮಚಂದ್ರಪ್ಪ ಹೇಳಿದರು. disabled
ನಗರದ ಬಂಗ್ಲಾ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬ್ಲಾಕ್ ಹಂತದ ಅಂಗವಿಕಲ ಮಕ್ಕಳ ಕ್ರೀಡೆ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲ ಮಕ್ಕಳನ್ನು ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವಕಾಶ ನೀಡಿದರೆ ಅವರೂ ಹೆಚ್ಚು ಸಾಧನೆ ಮಾಡುತ್ತಾರೆ. ಇದಕ್ಕೆ ಬಲ್ಬ್ ಕಂಡು ಹಿಡಿದಿರುವ ಥಾಮಸ್ ಅಲ್ವಾ ಎಡಿಸನ್ ಸಾಧನೆ ಮಾದರಿಯಾಗಿದೆ ಎಂದರು.
ಅಂಗವಿಕಲ ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ೇತ್ರ ಸಮನ್ವಯಾಧಿಕಾರಿ ಪಿ.ಸೋಮೇಶ್ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ 62 ಮಕ್ಕಳು ಮತ್ತು 45 ಪೋಷಕರು ಭಾಗವಹಿಸಿದ್ದರು.
ಮಕ್ಕಳಿಗೆ ಲು ಕ್ರೀಡಾಕೂಟ ಮತ್ತು ಕಲಿಕಾ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಯಿತು.
ಟಿವಿ ಪರದೆಯ ಮೂಲಕ ಅಂಗವಿಕಲ ಆದರ್ಶ ವ್ಯಕ್ತಿಗಳ ವಿಡಿಯೋ ಚಿತ್ರ ಮತ್ತು ಸಾಧಕರ ಸಾಧನೆಗಳನ್ನು ಪ್ರದರ್ಶಿಸಿ ಅರಿವು ಮೂಡಿಸಲಾಯಿತು.
ರಾಜ್ಯಮಟ್ಟದ ಅಂಗವಿಕಲ ಮಕ್ಕಳ ಕ್ರೀಡಾಕೂಟದಲ್ಲಿ ಪ್ರಥಮ ಬಹುಮಾನ ಪಡೆದ ಮುಳಬಾಗಿಲು ತಾಲೂಕಿನ ವಿ.ಗುಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಧನ್ವೇಲ್ ಹಾಗೂ ಪೋತ್ಸಾಹಿಸಿದ ಶಿಕರು ಮತ್ತು ಪೋಷಕರನ್ನು ಸನ್ಮಾನಿಸಲಾಯಿತು.
ಬಿಐಇಆರ್ಟಿಗಳಾದ ಶಿವಕುಮಾರ್ ಮತ್ತು ಎನ್.ಸುಜಾತಮ್ಮ, ದೈಹಿಕ ಶಿಣ ಶಿಕಿ ರಾಜೇಶ್ವರಿ , ಶಿಕ ಲೋಕೇಶ್ ಕ್ರೀಡಾಕೂಟ ಮತ್ತು ಕಲಿಕಾ ಸ್ಪರ್ಧೆ ಆಯೋಜಿಸಿದ್ದರು.
ಶಿಣ ಸಂಯೋಜಕರಾದ ಸತೀಶ್, ಮಣಿ , ಸಿಆರ್ಪಿಗಳಾದ ಲ್ಮಣ್ ಸಿಂಗ್, ರಾಜಕುಮಾರ್, ಕೌಜರಿ ಬೇಗಂ, ಭಾಸ್ಕರ್ ಫಿಜಿಯೋಥೆರಪಿಸ್ಟ್ ಎ.ಭವಿಷ್ಯ, ಸಹಾಯಕಿ ಪ್ರತಿಭಾ, ಎನ್ಪಿಎಸ್ ನೌಕರರ ಸಂದ ಅಧ್ಯ ವಿ.ಸುಬ್ರಮಣಿ ರೆಡ್ಡಿ, ದೈಹಿಕ ಶಿಣ ಪರವೀಕರ ರಹೀಂ ಶರ್ೀ, ಪಟ್ಟಣದ ಕನ್ನಡ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣಪ್ಪ ಇದ್ದರು.