ಸುರಪುರ ಗರುಡಾದ್ರಿ ಕಲಾ ಮಂದಿರದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಟಕದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 50 ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಗುಣಾಗ್ರಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
- ಕಸಾಪ ಗೌರವಾಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿಕೆ
- ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ
ಸುರಪುರ: ಕನ್ನಡ ಭಾಷೆಯಲ್ಲಿ ಪೂರ್ಣ ಅಂಕ ಪಡೆಯುವುದು ಕೇವಲ ಬುದ್ಧಿವಂತಿಕೆಯಲ್ಲ. ಅದೊಂದು ಕಲೆಯೂ ಹೌದು. ಕನ್ನಡಿಗರಾದ ನಾವು ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ತಾಲೂಕು ಕಸಾಪ ಗೌರವಾಧ್ಯಕ್ಷ ಹಾಗೂ ಯಾದಗಿರಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ರಾಜಾ ಮುಕುಂದ ನಾಯಕ ಹೇಳಿದರು.
ನಗರದ ಗರುಡಾದ್ರಿ ಕಲಾಮಂದಿರದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಟಕ ಹಮ್ಮಿಕೊಂಡ 2025&26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀೆ&1ರಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶತ ಪ್ರತಿಶತ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಗುಣಾಗ್ರಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಗಾಟಿಸಿ ಅವರು ಮಾತನಾಡಿದರು.
ಗಣಿತದಂತಹ ವಿಷಯಗಳಲ್ಲಿ ಅಂಕ ಗಳಿಸುವುದು ಸುಲಭ ಎನಿಸಬಹುದು. ಆದರೆ ಕನ್ನಡವನ್ನು ಅಚ್ಚುಕಟ್ಟಾಗಿ ಬರೆದು ಶತ ಪ್ರತಿಶತ ಅಂಕ ಪಡೆಯುವುದು ವಿಶೇಷ ಸಾಧನೆಯಾಗಿದೆ. ಈ ಸಾಧನೆಯ ಹಿಂದೆ ವಿದ್ಯಾರ್ಥಿಗಳ ಶ್ರಮದ ಜತೆಗೆ ಪಾಲಕರ ಮತ್ತು ಶಿಕ್ಷಕರ ಪಾತ್ರವೂ ಬಹಳ ಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ಸೋಮರಡ್ಡಿ ಮಂಗಿಹಾಳ ಮಾತನಾಡಿ, ಕನ್ನಡ ಭಾಷೆ ಎಲ್ಲರನ್ನೂ ಆಕರ್ಷಿಸುವ, ಅಪ್ಪಿಕೊಳ್ಳುವ ಅದ್ಭುತ ಗುಣವನ್ನು ಹೊಂದಿದೆ. ಕನ್ನಡ ಸುಲಿದ ಬಾಳೆಹಣ್ಣಿನಂತೆ ಅತ್ಯಂತ ಸರಳವಾಗಿದ್ದು ಕಲಿಯಲು ಸುಲಭವಾಗಿದೆ. ಹೊರ ರಾಜ್ಯಗಳಿಂದ ಬರುವ ಐಎಎಸ್, ಐಪಿಎಸ್ ಅಧಿಕಾರಿಗಲು ಕೇವಲ 30&45 ದಿನಗಳಲ್ಲಿ ಕನ್ನಡವನ್ನು ಕಲಿತು ಸಾರ್ವಜನಿಕರೊಂದಿಗೆ ಸಮರ್ಥವಾಗಿ ವ್ಯವಹರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಕನ್ನಡದಲ್ಲಿ ಶತ ಪ್ರತಿಶತ ಅಂಕ ಗಳಿಸಿರುವುದು ಭಾಷೆಯ ಮೇಲಿರುವ ಅವರ ಹಿಡಿತ ಮತ್ತು ಪ್ರೀತಿಗೆ ಸಾಯಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು.
ಸಹ ಪ್ರಾಧ್ಯಾಪಕ ವಿದ್ಯಾಸಾಗರ ಹೂಗಾರ ಉಪನ್ಯಾಸ ನೀಡಿದರು. ಪೂಜ್ಯರಾದ ಪ್ರಭುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇಸಿಒ ಶರಣಬಸವ ಗಚ್ಚಿನಮನಿ, ನ್ಯಾಯವಾದಿ ನಾಗರಡ್ಡಿ ಗೌಡಪ್ಪಗೋಳ ವೇದಿಕೆಯಲ್ಲಿದ್ದರು. 50 ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಗುಣಾಗ್ರಣಿ ಪ್ರಶಸ್ತಿ ಪ್ರದಾನ ಸಾಹಿತಿಗಳಾದ ಹೆಚ್.ರಾಠೋಡ ಸ್ವಾಗತಿಸಿದರು. ವೆಂಕಟೇಶ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಪದ್ಮಾ ಶಹಾಪುರಕರ್ ನಾಡಗೀತೆ ಹಾಡಿದರು. ದೇವು ಹೆಬ್ಬಾಳ ನಿರೂಪಿಸಿದರು. ಸಾಯಬರೆಡ್ಡಿ ಇಟಗಿ ವಂದಿಸಿದರು.
"
ಕನ್ನಡದಲ್ಲಿ ನೂರಕ್ಕೆ ನೂರು ಅಂಗ ಪಡೆಯುವಲ್ಲಿ ಶಿಕ್ಷಕ ಶ್ರಮ ಅಪಾರವಾಗಿದೆ. ಪಾಲಕರು ತಮ್ಮ ಮಕ್ಕಳಿಗೆ ಕೇವಲ ಶಿಕ್ಷಣವನ್ನಷ್ಟೇ ಅಲ್ಲದೆ, ನಮ್ಮ ಸಂಸತಿ ಮತ್ತು ಹಿರಿಯರ ಬಗ್ಗೆ ಗೌರವಿಸುವುದನ್ನು ಕಲಿಸಿಕೊಡಬೇಕು.
— > ಪ್ರಭುಲಿಂಗ ಮಹಾಸ್ವಾಮೀಜಿ ಸುರಪುರ