ಕನಕಗಿರಿಯಲ್ಲಿ ಸೋಮವಾರ ರಾಜ್ಯ ರೈತ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಗಣೇಶರೆಡ್ಡಿ ಕೆರಿ, ಪ್ರಮುಖರಾದ ಮಲ್ಲಮ್ಮ ಹೂಗಾರ, ಲಾಲಸಾಬ್ ಜೂಲಕೇರಿ, ಶ್ರೀನಿವಾಸ ಗಂಗಾಮತ, ಕೃಷ್ಣ ಖಾಕಿ, ವೀರೇಶ ಬಾವಿಕಟ್ಟಿ, ಮರಿಯಪ್ಪ ಹುಗ್ಗಿ ಕನಕಾಪುರ ಇತರರಿದ್ದರು. 
ರಾಜ್ಯ

ಹತ್ತಿಬೀಜ ಖರೀದಿ ಹಣ ಕೊಡಿ

ಕನಕಗಿರಿ: ಬೀಜೋತ್ಪಾದನೆಯ ಹತ್ತಿ ಬೀಜ ಖರೀದಿ ಹಣ ಪಾವತಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಜಿಲ್ಲಾ ಘಟಕದಿಂದ ಪಟ್ಟಣದಲ್ಲಿ ಸೋಮವಾರ ಕೃಷಿಕರು ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೇದಾರ್ ಶರಣಪ್ಪಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಗಣೇಶರೆಡ್ಡಿ ಕೆರಿ ಮಾತನಾಡಿ, ನಾಲ್ಕೈದು ತಿಂಗಳ ಹಿಂದೆಯೇ ಬೀಜೋತ್ಪಾದನೆಯ ಹತ್ತಿ ಬೀಜಗಳನ್ನು ಖರೀದಿ ಮಾಡಿರುವ ಕಂಪನಿಗಳು, ಇದುವರೆಗೂ ರೈತರ ಖಾತೆಗೆ ಹಣ ಜಮೆ ಮಾಡಿಲ್ಲ. ಶೀಘ್ರವೇ ಹಣ ಸಂದಾಯ ಮಾಡಲು ಜಿಲ್ಲಾಡಳಿತ ಕ್ರಮ ವಹಿಸಬೇಕು. 
ತಾಲೂಕಿನಾದ್ಯಂತ ನಡೆಯುತ್ತಿರುವ ಮರಳು ಅಕ್ರಮ, ಮರಂ, ಮಟ್ಕಾ, ಇಸ್ಪೀಟ್ ದಂಧೆಗಳನ್ನು ತಡೆಗಟ್ಟಬೇಕು. ಶಾಲಾ- ಕಾಲೇಜುಗಳಲ್ಲಿ ಮಕ್ಕಳಿಗೆ ಶೌಚಗೃಹಗಳನ್ನು ನಿರ್ಮಿಸಬೇಕು. ತಾಲೂಕು ಸಂಪೂರ್ಣ ನೀರಾವರಿಗೊಳಪಡಿಸಬೇಕು. ಕಾಯಂ ತರಕಾರಿ ಮಾರುಕಟ್ಟೆ, ತೋಟಗಾರಿಕಾ ಪಾರ್ಕ್ ಆರಂಭಿಸಬೇಕು. 
ಸ್ಥಳೀಯ ಎಪಿಎಂಸಿಗೆ ನೀಲಿ ನಕಾಶೆಯಂತೆ ಕಾಂಪೌಂಡ್ ನಿರ್ಮಿಸಬೇಕು. ರಾಜ ಕಾಲುವೆ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಸಂಘದ ಪ್ರಮುಖರಾದ ನಜೀರ್‌ಸಾಬ್ ಮೂಲಿಮನಿ, ನಾಗೇಶಪ್ಪ, ಬಸವರಾಜ್‌ೇಸಾಯಿ, ನಾಗಪ್ಪ ಬಸರಿಹಾಳ ಇತರರಿದ್ದರು. ದಕ್ಕೂ ಮುನ್ನ ಹೇಮರೆಡ್ಡಿ ಮಲ್ಲಮ್ಮ ವೃತ್ತದಿಂದ ಕಲ್ಮಠ, ರಾಜಬೀದಿ ಮಾರ್ಗವಾಗಿ ಎಪಿಎಂಸಿಯಲ್ಲಿನ ರೈತ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.