ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಎಸ್‌ಎಸ್‌ಎಲ್‌ಸಿಪರೀಕ್ಷೆಯಲ್ಲಿ ಹಿಂದಿ ಸೇರಿತೃತೀಯ ಭಾಷಾ ವಿಷಯಗಳಿಗೆ ಗ್ರೇಡ್ಬದಲು ಅಂಕವನ್ನೇ ನೀಡಬೇಕು ಎಂಬತನ್ನ ಹಿಂದಿನ ಆದೇಶವನ್ನುಮರುಪರಿಶೀಲಿಸಲು ಹೈಕೋರ್ಟ್ನಿರಾಕರಿಸಿದೆ.ಈ ಸಂಬಂಧ ರಾಜ್ಯಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾಅರ್ಜಿಯನ್ನು ನ್ಯಾಯಮೂರ್ತಿಇ.ಎಸ್.ಇಂದಿರೇಶ್ಅವರಿದ್ದ ಏಕಸದಸ್ಯ ಪೀಠವು ಮಂಗಳವಾರಇತ್ಯರ್ಥಗೊಳಿಸಿದೆ.
ಪ್ರಸಕ್ತಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳುಈಗಾಗಲೇ ಮುಕ್ತಾಯಗೊಂಡಿದ್ದು,ಪರೀಕ್ಷೆಯನಂತರವಷ್ಟೇ ಸರ್ಕಾರ ಕರಡು ಅಧಿಸೂಚನೆಹೊರಡಿಸಿದೆ.ಕಾನೂನುಬದ್ಧವಾಗಿಅಂತಿಮ ನಿಯಮಗಳು ಜಾರಿಯಲ್ಲಿಇಲ್ಲದ ಕಾರಣ, ಈಹಂತದಲ್ಲಿ ಹಿಂದಿನ ಆದೇಶದಲ್ಲಿಮಧ್ಯಪ್ರವೇಶಿಸಲು ಯಾವುದೇ ಲೋಪಗಳುಕಂಡುಬರುತ್ತಿಲ್ಲ ಎಂದು ನ್ಯಾಯಾಲಯಹೇಳಿದೆ. ಭವಿಷ್ಯದಲ್ಲಿಸರ್ಕಾರವು ಕಾನೂನಿನ ಅನ್ವಯ ಸೂಕ್ತಕ್ರಮಗಳನ್ನು ಕೈಗೊಳ್ಳಲುಸ್ವತಂತ್ರವಾಗಿದೆ ಎಂದೂ ನ್ಯಾಯಾಲಯಸ್ಪಷ್ಟಪಡಿಸಿದೆ.
ವಿಚಾರಣೆವೇಳೆ ಸರ್ಕಾರದ ಪರ ಅಡ್ವೊಕೇಟ್ಜನರಲ್ ಕೆ.ಶಶಿಕಿರಣ್ ಶೆಟ್ಟಿವಾದ ಮಂಡಿಸಿ,ಗ್ರಾಮೀಣ ಭಾಗದವಿದ್ಯಾರ್ಥಿಗಳಿಗೆ ಹಿಂದಿಯಲ್ಲಿಪಾಸ್ ಆಗಲು ಕಷ್ಟವಾಗುತ್ತಿದೆ. 15-16ನೇ ವಯಸ್ಸಿನಲ್ಲಿಅನುತ್ತೀರ್ಣರಾದರೆ ಮಕ್ಕಳಿಗೆಮಾನಸಿಕ ಒತ್ತಡವಾಗುತ್ತದೆ.ಆದ್ದರಿಂದ ಗ್ರೇಡ್ನೀಡುವುದು ಸೂಕ್ತ ಎಂದು ಸರ್ಕಾರದನಿರ್ಧಾರವನ್ನು ಸಮರ್ಥಿಸಿದರು.
ಎಜಿವಾದಕ್ಕೆ ಪ್ರತಿಕ್ರಿಯಿಸಿದನ್ಯಾಯಪೀಠವು,ನಿಮ್ಮ ಉದ್ದೇಶಎಲ್ಲರನ್ನೂ ಪಾಸು ಮಾಡುವುದಾಗಿದೆಯೇ?ನಾವು ಓದುವಾಗಲೂಪರೀಕ್ಷೆಯ ಒತ್ತಡವಿತ್ತು.ಕಲಿಕೆಯಲ್ಲಿಗುಣಮಟ್ಟ ಮುಖ್ಯ.ಕೆಲವು ಕಡೆಕನ್ನಡವೇ ಮೂರನೇ ಭಾಷೆಯಾಗಿರುತ್ತದೆ.ಹಿಂದಿ ಬೋಧಿಸಲುಉತ್ತಮ ಶಿಕ್ಷಕರನ್ನು ನೇಮಿಸಿತರಬೇತಿ ನೀಡಿ ಎಂದು ಸರ್ಕಾರಕ್ಕೆಕೋರ್ಟ್ ಸಲಹೆ ನೀಡಿತು.