ಸಂಡೂರು ತಾಲೂಕು ಎನ್‌ಎಂಡಿಸಿಯ ಕುಮಾರಸ್ವಾಮಿ ಮೈನಿಂಗ್‌ನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ ಬಳ್ಳಾರಿಯ ಡಿಸಿ ಕಚೇರಿ ಎದುರು ಕರವೇ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ತಾಲೂಕು ಅಧ್ಯಕ್ಷ ರಾಜು ಪಾಳೇಗಾರ, ಕಾರ್ಮಿಕರಾದ ಕಾರ್ತಿಕ್, ಮಂಜುನಾಥ, ಚಾಂದ್ ಬಾಷಾ, ಚಂದ್ರಶೇಖರ, ಇರ್ಫಾನ್, ಕುಮಾರಸ್ವಾಮಿ, ಸುನೀಲ್ ಇದ್ದರು.
ಸಂಡೂರು: ಕುಮಾರಸ್ವಾಮಿ ಐರನ್ ಓರ್ ಮೈನ್ಸ್‌ನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿ ಕರವೇ ನೇತೃತ್ವದಲ್ಲಿ ಕಾರ್ಮಿಕರು ಬಳ್ಳಾರಿ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
2019ರಿಂದ 2026ರವರೆಗೆ ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಟೆಂಡರ್ ಅವಧಿ ಮುಗಿದ ಕಾರಣ ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ.
ಇದರಿಂದ ಸ್ಥಳೀಯ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಎನ್‌ಎಂಡಿಸಿಯಲ್ಲಿ ಹೊರಗುತ್ತಿಗೆ ಸಂಸ್ಥೆ ಹೊರರಾಜ್ಯಗಳ ಕಾರ್ಮಿಕರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದರು.