Give children special skills and knowledge
ಬುಕ್ಕಾಪಟ್ಟಣ " ಖಾಸಗಿ ಶಾಲೆಗಳೆಂದರೆ ಪಾಲಕರನ್ನು ಸುಲಿಗೆ ಮಾಡುವ ಯಂತ್ರಗಳಾಗಿ ಬದಲಾಗುತ್ತಿದ್ದು, ಕೇವಲ ಅಂಕಗಳ ಹಿಂದೆ ಓಡಾಡುವ ಮೂಲಕ ಮಕ್ಕಳಲ್ಲಿ ಪಠ್ಯೇತರ ವಿಷಯಗಳ ಕೊರತೆ ಕಾಡುವಂತೆ ಮಾಡುತ್ತಿವೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತರಾಜು ಹೇಳಿದರು.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಪ್ರತಿ ಮಗು ತನ್ನದೇ ಆದ ಪ್ರತಿಭೆ ಹಾಗೂ ಕೌಶಲ ಹೊಂದಿರುತ್ತದೆ. ಆ ಮಗುವಿನಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಅನಾವರಣ ಮಾಡಲು ಸೂಕ್ತ ವೇದಿಕೆ ನಿರ್ಮಿಸುವ ಕಾರ್ಯವಾಗಬೇಕು ಎಂದರು.
ವಿಎಸ್ಸೆಸ್ಸೆನ್ ಅಧ್ಯಕ್ಷ ಹೊಸಪಾಳ್ಯ ಸತ್ಯನಾರಾಯಣ ಮಾತನಾಡಿ, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂತಹ ಕಾಲಘಟ್ಟದಲ್ಲಿ ಬುಕ್ಕಾಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ ಎಂದರು.
ಎಸ್ಡಿಆರ್ಪಿ ಶಿರಾ&2 ಯೋಜನಾಧಿಕಾರಿ ರಮೇಶ್, ಬುಕ್ಕಾಪಟ್ಟಣ ವಲಯದ ಮೇಲ್ವಿಚಾರಕ ನರೇಶ್, ಮದ್ಯವರ್ಜನಾ ಶಿಬಿರಾಧಿಕಾರಿ ನಾಗೇಂದ್ರ, ಮುಖ್ಯಶಿಕ್ಷಕ ಸಿದ್ದರಾಮಣ್ಣ, ಸಹ ಶಿಕ್ಷಕರಾದ, ಸವಿತಾ, ಶ್ರುತಿ, ಹನುಮಂತೆಗೌಡ, ವಿಜಯ, ಜ್ಯೋತಿ, ಸೌಮ್ಯಾ, ಗೀತಾ ಮಹಬೂಬಿ, ನರಸಿಂಹಮೂರ್ತಿ, ಗಿರೀಶ್, ಎಸ್ಡಿಎಂಸಿ ಅಧ್ಯಕ್ಷ ದಯಾನಂದ, ಮಾಜಿ ಅಧ್ಯಕ್ಷ ಆಟೋರಾಜು, ಉಪಾಧೆ ಸಲ್ಮಾ ಭಾನು, ಸದಸ್ಯರು ಇತರರು ಇದ್ದರು.