ಅಫಜಲಪುರದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ, ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಶ್ರೀ ಡಾ.ಅಭಿನವ ಚನ್ನಮಲ್ಲ ಶಿವಾಚಾರ್ಯರು ಉದ್ಘಾಟಿಸಿದರು. ಬಿಕೆ ಪ್ರೇಮ್​, ಬಿಕೆ ವಿಜಯಾ, ಬಿಕೆ ಪುಷ್ಪಾ, ಚಂದ್ರಶೇಖರ ಕರಜಗಿ ಇತರರಿದ್ದರು. 
ರಾಜ್ಯ

ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ

ಪ್ರಮುಖ ಮುಖ್ಯಾಂಶಗಳು

  • ಡಾ.ಅಭಿನವ ಚನ್ನಮಲ್ಲ ಶ್ರೀ ಕರೆ
  • ಅಫಜಲಪುರದಲ್ಲಿ ವ್ಯಸನಮುಕ್ತ ಭಾರತ ಅಭಿಯಾನ
ಅಫಜಲಪುರ: ಇಂದಿನ ಸ್ಪರ್ಧಾತ್ಮಕ ಹಾಗೂ ತಾಂತ್ರಿಕ ಯುಗದಲ್ಲಿ ಮಹಿಳೆ ಕುಟುಂಬ ವ್ಯವಸ್ಥೆ ಜತೆಗೆ ಸರ್ಕಾರದ ರಾಜತಾಂತ್ರಿಕ ಹಾಗೂ ಕಾರ್ಯಾಂಗದ ವಿವಿಧ ಹುದ್ದೆ ಸಮರ್ಥವಾಗಿ ನಿಭಾಯಿಸಿ ಹೆಣ್ಣು ಹುಣ್ಣಲ್ಲ ಸಮಾಜದ ಕಣ್ಣು ಎಂಬುದು ನಿರೂಪಿಸಿದ್ದಾಳೆ ಎಂದು ಬಡದಾಳದ ಶ್ರೀ ಡಾ.ಅಭಿನವ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.
ಅಂಬಿಗರ ಚೌಡಯ್ಯ ನಗರದ ರಾಜಯೋಗ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಹಾಗೂ ವ್ಯಸನಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಂದೆ&ತಾಯಿ ಮಕ್ಕಳಿಗೆ ಶಿಣದೊಂದಿಗೆ ಉತ್ತಮ ಸಂಸ್ಕಾರ ನೀಡಬೇಕು. ಇಡೀ ಜಗತ್ತೇ ನಮ್ಮ ದೇಶಿಯ ಸಂಸತಿ ಅನುಸರಿಸುತ್ತಿರುವಾಗ, ನಮ್ಮ ಯುವ ಜನಾಂಗ ವಿದೇಶಿಯ ವಸ, ಆಹಾರ ಪದ್ಧತಿ ಬೆನ್ನುಹತ್ತಿ ಜೀವನ ಹಾಳುಮಾಡಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜಯೋಗ ಕೇಂದ್ರದ ಬಿಕೆ ಪ್ರೇಮ್​ ಮಾತನಾಡಿ, ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಸಮಾಜದಲ್ಲಿ ಶಾಂತಿ, ಸಹಬಾಳ್ವೆಯ ತತ್ವ ಬೋಧಿಸುತ್ತ ಮಾನವ ಕಲ್ಯಾಣಕ್ಕೆ ಶ್ರಮಿಸುತ್ತಿದೆ ಎಂದರು.
ಬಿಕೆ ವಿಜಯಾ, ಬಿಕೆ ಪುಷ್ಪಾ, ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯ ಚಂದ್ರಶೇಖರ ಕರಜಗಿ, ಪ್ರಮುಖರಾದ ಸಂತೋಷ ದಾಮಾ, ಪ್ರಭಾವತಿ ಮೇತ್ರಿ, ಬಸವರಾಜ ವಾಳಿ, ಶರಣು ಮಂದೇವಾಲ, ದೇವಿಕಾ ಶೆಟ್ಟಿ, ಮುರುಂದ್ರ ಮಸಳಿ, ಶೇಖಪ್ಪ ಜೋಗುರ ಇತರರಿದ್ದರು.