ಯಾದಗಿರಿ ಸಮೀಪದ ವೆಂಕಟೇಶ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸನ್ಮಾನಿಸಲಾಯಿತು. ರ್ಜನಾಧನ್ ರಾಠೋಡ್, ಕನಕಪ್ಪ ದಾಸರ್, ಜೆ.ಇನಾಂದಾರ ಇತರರಿದ್ದರು.
ಯಾದಗಿರಿ: ಮಕ್ಕಳಿಗೆ ವಿದ್ಯೆ ಜತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಬಂಜಾರ ಸಮಾಜದ ರಾಜ್ಯ ನಾಯಕ ರ್ಜನಾಧನ್ ರಾಠೋಡ್ ಹೇಳಿದರು.
ಇಲ್ಲಿಗೆ ಸಮೀಪದ ವೆಂಕಟೇಶ ನಗರದ (ಅಲಿಪುರ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಸಿದ್ದ 7ನೇ ತರಗತಿ ಮಕ್ಕಳಿಗೆ ಬೀಳ್ಕೊಡುವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣದಿಂದಲೇ ಎಲ್ಲವೂ ಸಾಧ್ಯ. ಹೀಗಾಗಿ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಹಚ್ಚಬೇಡಿ. ಬಾಲ್ಯ ವಿವಾಹ ಮಾಡಬೇಡಿ, ಅವರು ಮುಂದಿನ ಜೀವನ ಹಸನವಾಗಲು ಪಾಲಕರು ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಇಂತಹ ಹಳ್ಳಿಗಾಡಿನ ತಾಂಡಾದಲ್ಲಿರುವ ಈ ಶಾಲೆಗೆ ಮುಖ್ಯಗುರುಗಳಾಗಿ ಕೆಲಸ ಮಾಡುತ್ತಿರುವ ಕನಕಪ್ಪ ಅವರು ಕೇವಲ ಶಿಕ್ಷಕರಾಗಿ ಅಲ್ಲ, ತಂದೆ,ತಾಯಿಯಾಗಿ ನಮ್ಮ ಮಕ್ಕಳನ್ನು ವಿದ್ಯೆ ನೀಡಿ ಬೆಳೆಸುತ್ತಿದ್ದಾರೆಂದು ರಾಠೋಡ್ ಶ್ಲಾಸಿದರು. ಯರಗೋಳದ ಸವೋರ್ದಯ ಶಾಲೆ ಮುಖ್ಯ ಗುರು ಜೆ.ಇನಾಂದಾರ ಮಾತನಾಡಿ, ಮಕ್ಕಳ ಅಭಿರುಚಿಗೆ ತಕ್ಕಂತೆಯೇ ಶಿಕ್ಷಣ ನೀಡಿದರೇ ಅವರು ಮುಂದೇ ಸಾಧಕರಾಗುತ್ತಾರೆಂದರು. ಮುಖ್ಯ ಗುರು ಕನಕಪ್ಪ ದಾಸರ್ ಮಾತನಾಡಿ, ಇಲ್ಲಿಯ ಮಕ್ಕಳು ಬುದ್ದಿವಂತರಾಗಿದ್ದು, ಅವರಿಗೆ ಸಹಕಾರ ಮನೋಭಾವನೆಯಿಂದ ಶಿಕ್ಷಣ ನೀಡಿದರೇ ಕಲಿತು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆಂದರು. ಎಸ್ಡಿಎಂಸಿ ಅಧ್ಯಕ್ಷ ಬದ್ರು ರಾಠೋಡ್, ಶಿಕ್ಷಕರಾದ ಭಾಗ್ಯವತಿ, ಮಲ್ಲಮ್ಮ, ಅಶ್ವಿನಿ, ಶ್ರೀದೇವಿ, ಶರಣಪ್ಪ, ಗ್ರಾಮಸ್ಥರು ಇತರರಿದ್ದರು. 12 ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ನಂತರ ಶಾಲಾ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮಗಳು ನಡೆದವು