ಚಿತ್ತಾಪುರದ ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 15ನೇ ವಾರ್ಷಿಕೋತ್ಸವದಲ್ಲಿ ಸರಸ್ವತಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶ್ರೀ ಸೋಮಶೇಖರ ಶಿವಾಚಾರ್ಯ, ಭೀಮಣ್ಣ ಸಾಲಿ, ವಿಶ್ವನಾಥ ಕಾಶಿ, ರೇವಣಸಿದ್ದಪ್ಪ ರೋಣದ, ಜಗದೇವ ಕುಂಬಾರ ಇದ್ದರು. 
ರಾಜ್ಯ

ಮಕ್ಕಳ ಕೈಗೆ ಮೊಬೈಲ್​ ಬದಲು ಪುಸ್ತಕ ಕೊಡಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸೋಮಶೇಖರ ಶಿವಾಚಾರ್ಯರು ಕರೆ
  • ಮಾತೋಶ್ರೀ ಶಾಲೆಯ ವಾರ್ಷಿಕೋತ್ಸವ
ಚಿತ್ತಾಪುರ: ಶಿಣ ಸಂಸ್ಥೆಯೊಂದನ್ನು ನಡೆಸುವುದು ಹತ್ತು ಆನೆಗಳನ್ನು ಸಾಕಿದಂತೆ. ದೇಶದ ಭವಿಷ್ಯ ರೂಪಿಸುವ ಅತಿದೊಡ್ಡ ಶಕ್ತಿ ಶಾಲೆಗಳಿಗಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಮಾತೋಶ್ರೀ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 15ನೇ ವಾರ್ಷಿಕೋತ್ಸವದಲ್ಲಿ ಸರಸ್ವತಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಬಡ ಮಕ್ಕಳ ಶಿಣಕ್ಕಾಗಿ ಶ್ರಮಿಸುತ್ತಿರುವ ಮಾತೋಶ್ರೀ ಶಾಲೆಯ ಕಾರ್ಯ ಶ್ಲಾನೀಯ. ಪಾಲಕರು ಮಕ್ಕಳಿಗೆ ಮೊಬೈಲ್​ ನೀಡಿ ಭವಿಷ್ಯ ಹಾಳು ಮಾಡುವ ಬದಲು, ಪುಸ್ತಕಗಳನ್ನು ನೀಡಿ ಬದುಕನ್ನು ಸಾರ್ಥಕಗೊಳಿಸಬೇಕು ಎಂದು ಸಲಹೆ ನೀಡಿದರು.
ಪಿಎಲ್​ಡಿ ಬ್ಯಾಂಕ್​ ಅಧ್ಯ ಭೀಮಣ್ಣ ಸಾಲಿ ಮಾತನಾಡಿದರು. ಮುಖ್ಯಗುರು ಜಗದೇವ ಕುಂಬಾರ ವಾರ್ಷಿಕ ವರದಿ ವಾಚಿಸಿದರು.
ಕಸಾಪ ತಾಲೂಕು ಗೌರವಾಧ್ಯ ವೀರೇಂದ್ರ ಕೊಲ್ಲೂರ, ರಾಜ್ಯ ನಿವೃತ್ತ ನೌಕರರ ಸಂದ ತಾಲೂಕು ಅಧ್ಯ ರೇವಣಸಿದ್ದಪ್ಪ ರೋಣದ, ಪ್ರಮುಖರಾದ ಅಂಬರೀಶ ಕಲ್ಲಶೆಟ್ಟಿ, ವಿಶ್ವನಾಥ ಕಾಶಿ, ಚಂದ್ರಶೇಖರ ಬಳ್ಳಾ, ಬಸವರಾಜ ಮೈನಾಳಕರ್​, ಅಂಬರೀಶ ಭೋವಿ, ವಿಶ್ವನಾಥ ಕುಂಬಾರ, ಶೇಷಪ್ಪ ಬಡಿಗೇರ, ಕಾಸೀಂ ಅಲಿ, ಫೈಮುದಾ ಬೇಗಂ, ಸುಜಾತಾ ಕುಂಬಾರ, ಸುನೀತಾ, ಶಮ್ರಿನ್​ ಬೇಗಂ, ಶ್ರೀದೇವಿ ಇತರರಿದ್ದರು. ಶಿಕ ನರಸಪ್ಪ ಚಿನ್ನಕಟ್ಟಿ ನಿರೂಪಣೆ ಮಾಡಿದರು.