ಬಸವಣ್ಣ ಪುತ್ಥಳಿಗೆ ಹೊಸ ಸ್ವರೂಪ ನೀಡಿ; ಕರ್ನಾಟಕ ಯುವ ಸಮೂಹ ಒತ್ತಾಯ  
ರಾಜ್ಯ

ಬಸವಣ್ಣ ಪುತ್ಥಳಿಗೆ ಹೊಸ ಸ್ವರೂಪ ನೀಡಿ; ಕರ್ನಾಟಕ ಯುವ ಸಮೂಹ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಬಸವಣ್ಣ ಪುತ್ಥಳಿಗೆ ಹೊಸ ಸ್ವರೂಪ ನೀಡಿ
  • ಕರ್ನಾಟಕ ರಾಜ್ಯ ಯುವ ಸಮೂಹ ಒತ್ತಾಯ
  • ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹ

ಬೆಂಗಳೂರು:ನಗರದ ಚಾಲುಕ್ಯವೃತ್ತದಲ್ಲಿರುವ ಭಕ್ತಿ ಬಂಡಾರಿಬಸವಣ್ಣನವರ ಪುತ್ಥಳಿ ಸಮೀಪ ಮೂಲಭೂತಸೌಕರ್ಯಗಳನ್ನು ಕಲ್ಪಿಸಿ ಹೊಸಸ್ವರೂಪ ನೀಡುವಂತೆ ಕರ್ನಾಟಕರಾಜ್ಯ ಯುವ ಸಮೂಹ ಮುಖ್ಯಮಂತ್ರಿಗಳಿಗೆಒತ್ತಾಯಿಸಿದೆ.

ಈಕುರಿತು ಪತ್ರ ಬರೆದಿರುವ ಸಮೂಹದಅಧ್ಯಕ್ಷ ಎಸ್.ಸಂಗಮೇಶ್,.20ರಂದುಎಲ್ಲೆಡೆ ಬಸವ ಜಯಂತಿ ಆಚರಿಸಲಾಗುತ್ತಿದೆ.ಆದರೆ ಆಡಳಿತಕೇಂದ್ರ ವಿಧಾನಸೌಧಕ್ಕೆ ಸಮೀಪದಲ್ಲಿರುವಬಸವಣ್ಣನವರ ಪ್ರತಿಮೆಯನ್ನುಸರಿಯಾಗಿ ನಿರ್ವಹಣೆ ಮಾಡದೆನಿರ್ಲಕ್ಷ್ಯ ವಹಿಸಿದ್ದು,ಜಯಂತಿ ಸಂದರ್ಭದಲ್ಲದಾರೂಹೊಸ ಬಣ್ಣ ಬಳಿದು,ಸ್ಚಚ್ಛತೆಯನ್ನುಮಾಡಬೇಕು. ಪ್ರತಿಮೆಯಪರಿಸರದಲ್ಲಿ ಮಿನಿ ಪಾರ್ಕ್ನಿರ್ಮಿಸಿ ಅಲ್ಲಿ ಧ್ವನಿವರ್ಧಕವನ್ನುಅಳವಡಿಸಿ ಪ್ರತಿದಿನ ಬೆಳಗ್ಗೆ5 ರಿಂದ10 ಗಂಟೆಮತ್ತು ಸಂಜೆ 5.30ರಿಂದ 10ಗಂಟೆಯವರೆಗೆವಚನಗಳ ಪ್ರಸಾರಕ್ಕೆ ವ್ಯವಸ್ಥೆಮಾಡಬೇಕು. ಆಸಕ್ತಸಾರ್ವಜನಿಕರು ಕುಳಿತುಕೊಳ್ಳಲುಆಸನದ ವ್ಯವಸ್ಥೆಯನ್ನು ಕಲ್ಪಿಸಬೇಕುಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.