- ಅಹಿಂದ ಮುಖಂಡ ಹನುಮೇಗೌಡ ಬೀರನಕಲ್ ಆಗ್ರಹ
- ನಿರ್ಲಕ್ಷಿಸಿದರೆ ಡಿಸಿ ಕಚೇರಿಗೆ ಮುತ್ತಿಗೆ
ಯಾದಗಿರಿ: ವಡಗೇರಾ ತಾಲೂಕಿನ ಬಸವನಗರದ ಮುರುಮ್ ಕ್ವಾರಿಯ ನೀರಿನ ತೆಗ್ಗಿನ ಮುಳುಗಿ ಮೂವರು ಮೃತಪಟ್ಟ ದುರ್ಟನಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ, ಜಿಲ್ಲಾಡಳಿತ ಮತ್ತು ಸ್ಥಳಿಯ ಶಾಸಕರು ತೊರಿದ ರ್ನಿಲ್ಯ ಖಂಡಿಸಿರುವ ಅಹಿಂದ ಸಂಟನೆ ಹಿರಿಯ ರಾಜ್ಯ ಮುಖಂಡ ಹನುಮೇಗೌಡ ಬೀರನಕಲ್, ಕೂಡಲೇ ಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತ ಕುಟುಂಬಗಳಿಗೆ ತಲಾ 20 ಲ ರೂ. ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 7ರಂದು ಟನೆ ನಡೆದಿದೆ. ಯಂಕಪ್ಪ ಎಂಬುವವರು ವಡಗೇರಾ ತಹಸಿಲ್ದಾರ್, ಗಣಿ ಮತ್ತು ಭೂವಿಾನ ಇಲಾಖೆ ಅಧಿಕಾರಿಗಳು, ಡಿಬಿಎಲ್ ಕಂಪನಿ ವ್ಯವಸ್ಥಾಪಕರು ಹಾಗೂ ಶಿವಪ್ಪ ಶಿಂತೆ ಎಂಬುವವರ ವಿರುದ್ಧ ಪ್ರಕರಣ ದಾಖಲಾದರೂ ಇದುವರೆಗೂ ಯಾರ ವಿರುದ್ಧವೂ ಕ್ರಮ ಆಗಿಲ್ಲ, ಬಡವರ ಜೀವಗಳಿಗೆ ಕಿಮ್ಮತ್ತು ಇಲ್ಲವೇ, ಕನಿಷ್ಠ ಸೌಜನ್ಯಕ್ಕಾದರೂ ಮೃತರ ಮನೆಗಳಿಗೆ ಭೇಟಿ ನೀಡದಷ್ಟು ಕಟುಕತನ ಪ್ರದರ್ಶಿಸುತ್ತಿರುವ ವಡಗೇರಾ ತಹಸಿಲ್ದಾರ್ ಸೇರಿ ಸಂಬಂಧಪಟ್ಟವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಒಂದೆರಡು ದಿನಗಳಲ್ಲಿ ಬಸವನಗರದ ಟನೆಗೆ ನ್ಯಾಯ ಸಿಗದಿದ್ದರೆ ಸೋಮವಾರ ಇಲ್ಲವೇ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಮತ್ತು ಆ ಣಕ್ಕೆ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಬಸವನಗರದಲ್ಲಿರುವ ಮುರುಮ್ ಕ್ವಾರಿಯೇ ಅನಧಿಕೃತವಾಗಿದೆ. ಶಾಲೆಯ ಪಕ್ಕದಲ್ಲಿಯೇ ಇದು ಇದ್ದು, ಅಮಾಯಕ ಮಕ್ಕಳ ಜೀವ ತೆಗೆಯಲೇಂದೇ ಇಲ್ಲಿ 30 ಫೀಟ್ ಆಳಕ್ಕೆ ತೆಗ್ಗು ತೊಡಿ, ಅಲ್ಲಿಂದ ಮಣ್ಣು ಡಿಎಲ್ಬಿ ಕಂಪನಿ ತೆಗೆದುಕೊಂಡು ಹೊಗುತ್ತಿದೆ. ಇದು ವಡಗೇರಾ ತಹಸಿಲ್ದಾರ್, ಗಣಿ ಮತ್ತು ಭೂವಿಜ್ಷಾನ ಇಲಾಖೆ, ಪೊಲೀಸ್ ಅಧಿಕಾರಿಗಳ ಕಣ್ಮುಂದೆಯೇ ರಾಜಾ ರೋಷವಾಗಿ ನಡೆಯುತ್ತಿದ್ದರೂ ಇದುವರೆಗೂ ಕ್ರಮ ತೆಗೆದುಕೊಳ್ಳದಿರುವುದರಿಂದ ಮೂವರು ಜೀವ ಕಳೆದುಕೊಳ್ಳಬೇಕಾಯಿತು ಎಂದು ಅವರು ಹೇಳಿದರು.
ರೈತ ಸಂಟನೆ ಮುಖಂಡ ಚನ್ನಬಸವ ವಾಲಿ ಸಾಹುಕಾರ, ಹಣಮಂತ್ರಾಯಗೌಡ, ಅಶೋಕ ಐಕೂರ, ರಾಜಶೇಖರ, ಮಾನಪ್ಪ ದಳಪತಿ, ಮಹ್ಮದ್ ಮಹಿಬೂಬ್ ಪಟೇಲ್, ಚಾಂದಪಾಶಾ, ಅಬ್ದುಲ್ ಕರಿಂ ದಾದು ಇತರರಿದ್ದರು.
ಯಾರಿಗೆ ಕರೆಯಬೇಕು ಮಕ್ಕಳು ಅವ್ವಾ ಎಂದು ?
ಮೃತ ಗುಂಡಮ್ಮಳಿಗೆ ನಾಲ್ಕು ಜನ ಮಕ್ಕಳು, ಈಗ ಆಕೆನೇ ಇಲ್ಲ. ಮಕ್ಕಳು ಯಾರಿಗೆ ಅವ್ವಾ ಅಂತಾ ಕರೆಯಬೇಕು. ಸುಜಾತಾ ಮತ್ತು ಶಿವಲೀಲಾ ಮುಗ್ದ ಮಕ್ಕಳು. ಇವರ ಸಾವಿನಿಂದಾಗಿ ಕುಟುಂಬ ಕಷ್ಟಕ್ಕೆ ಸಿಲುಕಿದೆ. ಮಾನವೀತೆಯ ದೃಷ್ಟಿಯಿಂದಲಾದರೂ ಜಿಲ್ಲಾಡಳಿತ ಮತ್ತು ಶಾಸಕರು ಬಸವನಗರಕ್ಕೆ ಭೇಟಿ ನೀಡಬೇಕಾಗಿತ್ತು. ಡಿಸಿ ಅವರಿಗೆ ಸಮಯ ಇಲ್ಲದಂತೆ ಕಾಣುತ್ತೆ. ಇನ್ನೂ ಶಾಸಕರು ಶವಗಾರದ ಸ್ಥಳಕ್ಕೆ ಹಣಕಿ ಹಾಕಿ ಹೋಗಿದ್ದಾರೆ. ಇದೇನಾ ನಿಪ್ಪ ಪದ್ಧತಿ ಎಂದು ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.