ಕಮತನೂರ ಪಂಚಾಯತಿಯಿಂದ ಮಹಾಲಕ್ಷ್ಮಿ ಯೋಜನೆ ಜಾರಿ
- ಗ್ರಾಮ ಪಂಚಾಯತಿಯಿಂದ ಮಹಾಲಕ್ಷ್ಮಿ ಯೋಜನೆ ಜಾರಿ
- ಹುಕ್ಕೇರಿ ತಾಲೂಕಿನ ಕಮತನೂರ ಪಂಚಾಯತಿಯಿಂದ ವಿನೂತನ ಯೋಜನೆ
- ಗ್ರಾಮ ಪಂಚಾಯತಿ ಕಾರ್ಯಕ್ಕೆ ಜನ ಮೆಚ್ಚುಗೆ
ಹೆಣ್ಣು ಮಕ್ಕಳಿಗಾಗಿ ಮಹಾಲಕ್ಷ್ಮಿ ಯೋಜನೆ ಜಾರಿ
ಸಂಕೇಶ್ವರ: ಭ್ರೂಣಹತ್ಯೆಗೆ ತಡೆ ಒಡ್ಡಿ, ಗ್ರಾಮೀಣ ಭಾಗದಲ್ಲಿ ಹೆಣ್ಣು ಮಗುವಿನ ಗೌರವ ಹೆಚ್ಚಿಸುವ ದೃಷ್ಟಿಯಿಂದ ಕಮತನೂರ ಗ್ರಾಮ ಪಂಚಾಯಿತಿ ದಿಟ್ಟ ಹೆಜ್ಜೆಯಿಟ್ಟಿದೆ. ಪಂಚಾಯಿತಿಯ ಸ್ವಂತ ಆದಾಯದ ಹಣದಲ್ಲೇ 'ಮಹಾಲಕ್ಷ್ಮೀ' ಎಂಬ ವಿನೂತನ ಯೋಜನೆ ಜಾರಿಗೆ ತರಲಾಯಿತು, ಹೆಣ್ಣು ಹೆತ್ತ ಕುಟುಂಬಕ್ಕೆ ಆಸರೆಯಾಗಲು ಮುಂದಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ. ಗ್ರಾಮ ಪಂಚಾಯಿತಿಗೆ ಹರಿದುಬರುವ ಒಟ್ಟು ತೆರಿಗೆ ಆದಾಯದ ಮೇಲಿನ ಶೇ. 5ರಷ್ಟು ಮೊತ್ತವನ್ನು ಮಹಿಳೆಯರ ಸಬಲೀಕರಣಕ್ಕಾಗಿ ಮೀಸಲಿಡಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಮೇಲಿನ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಹುಟ್ಟುವ ಮೊದಲ ಹೆಣ್ಣು ಮಗುವಿಗೆ 5,000 ರೂಪಾಯಿಗಳ ಪ್ರೋತ್ಸಾಹಧನ ದೊರೆಯಿತು.
ಮಗು ಜನಿಸಿದ 60 ದಿನಗಳ ಕಾಲಮಿತಿಯೊಳಗೆ ದಾಖಲೆಗಳೊಂದಿಗೆ ಪಂಚಾಯಿತಿ ಕಾರ್ಯಾಲಯಕ್ಕೆ ಮನವಿ ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ತಕ್ಷಣವೇ ನಡೆದ ಅರ್ಹ ತಾಯಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ. ಯೋಜನೆಯ ಹೆಚ್ಚಿನ ವಿವರಗಳಿಗೆ ಸ್ಥಳೀಯ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪಿಡಿಯೋ ಗೋಪಾಲ ಕರೋಶಿ.
ಸರ್ಕಾರದ ಅನುದಾನಕ್ಕಾಗಿ ಕಾಯದೆ, ತನ್ನದೇ ಸ್ವಂತ ಸಂಪನ್ಮೂಲ ಸದ್ಭಳಕೆಯ ಜೊತೆಗೆ ಇಂತಹದೊಂದು ಸಾಮಾಜಿಕ ಜಾಗೃತಿಯ ಹೆಜ್ಜೆ ಇಟ್ಟಿದೆ ಕಮತನೂರ ಪಂಚಾಯಿತಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.