ನವಿಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎನ್. ಎಸ್. ಗಿರೀಶ್ ಅವರನ್ನು ಸಂಘದ ಸದಸ್ಯರು, ಮುಖಂಡರು ಅಭಿನಂದಿಸಿದರು. ಅಭಿಲಾಶ್, ಚಂದ್ರಪ್ಪ, ರಾಮಚಂದ್ರು, ನಾಗೇಂದ್ರ ಇತರರಿದ್ದರು.
ಬಾಗೂರು: ಹೋಬಳಿಯ ನವಿಲೇ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನವಿಲೇ ಗೇಟಿನ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎನ್.ಎಸ್. ಗಿರೀಶ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎನ್. ಎಸ್. ಗಿರೀಶ್ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ವಿಜಯಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ನವಿಲೇ ಗೇಟಿನ ಗಿರೀಶ್ ಮಾತನಾಡಿ, ಪಹಣಿ ಹೊಂದಿರುವ ರೈತರು ಹಾಗೂ ನವಿಲೇ ವ್ಯಾಪ್ತಿಯ ಸ್ತ್ರೀ ಶಕ್ತಿ ಸಂಘಗಳಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಸಹಕಾರದಿಂದ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಿಸಲು ಕ್ರಮವಹಿಸುತ್ತೇನೆ. ಮಳೆಗಾಲ ಪ್ರಾರಂಭವಾಗಿರುವ ಕಾರಣ ರೈತರಿಗೆ ಬೇಕಾಗಿರುವ ರಸಗೊಬ್ಬರ ದಾಸ್ತಾನು ಸಂಗ್ರಹಿಸಲು ಸಭೆ ನಡೆಸುವುದಾಗಿ ತಿಳಿಸಿದರು.
ಮೇಲ್ವಿಚಾರಕ ಎಸ್. ಕೆ. ಅಭಿಲಾಶ್, ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರು, ತಾ.ಪಂ.ಮಾಜಿ ಅಧ್ಯಕ್ಷ ಚಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜುನಾಥ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಇಟ್ಟಿಗೆ ನಾಗರಾಜ್, ಜಯದೇವಪ್ಪ, ನಿವೃತ್ತ ಇಂಜಿನಿಯರ್ ಸದಾಶಿವಪ್ಪ, ಉಪನ್ಯಾಸಕ ನಾಗೇಂದ್ರ, ಮುಖಂಡರಾದ ಡಿ.ಕೆ. ದಿನೇಶ್, ಕೆಂಪೇಗೌಡ, ಕುಳ್ಳೇಗೌಡ, ಜೋಕೇನಹಳ್ಳಿ ದಿನೇಶ್, ಎನ್‌ಎಸ್. ಮಂಜುನಾಥ್, ಪೂಜಾರಿ ನಾಗರಾಜ್, ನವೀನ್, ರವಿ, ಲೋಹಿತ್, ರಾಜು, ನಿಂಗಪ್ಪ, ನಂಜುಂಡೇಗೌಡ, ಪುಟ್ಟರಾಜು, ಸದಸ್ಯರಾದ ಸಿ.ಜೆ. ನಾಗೇಶ್, ನಾಗರಾಜ್, ಬಸವರಾಜ್, ಮಹಾಲಿಂಗಪ್ಪ, ನಾಗಲಿಂಗೇಗೌಡ, ರೇಣುಕಮ್ಮ, ಮೀನಾ, ನಾಗರಾಜು, ಮಂಜು ಇತರರಿದ್ದರು.