ಬನ್ನೇರುಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆ ಶಿವಾನಿ.
ಆನೇಕಲ್ : ಬನ್ನೇರುಟ್ಟ ಜೈವಿಕ ಉದ್ಯಾನವನದಲ್ಲಿ ಶಿವಾನಿ (3.10 ವರ್ಷ) ಹೆಸರಿನ ಹೆಣ್ಣು ಜೀರಾೆ ಮೃತಪಟ್ಟಿದೆ.
2024ರ ೆ.27ರಂದು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಶಿವಾನಿಯನ್ನು ಬನ್ನೇರುಟ್ಟ ಜೈವಿಕ ಉದ್ಯಾನವನಕ್ಕೆ ತಂದು ಮತ್ತೊಂದು ಜಿರಾಫೆ ಜತೆ ಬಿಡಲಾಗಿತ್ತು.
ನಾಲ್ಕು ದಿನದ ಹಿಂದೆ ಶಿವಾನಿ ಆಹಾರ ಸೇವನೆ ನಿಲ್ಲಿಸಿತ್ತು, ಈ ಬಗ್ಗೆ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರು, ಬನ್ನೇರುಟ್ಟ ಜೈವಿಕ ಉದ್ಯಾನವನದ ವೈದ್ಯರು ನಿರಂತರವಾಗಿ ಜಿರಾೆ ಆರೋಗ್ಯದ ಮೇಲೆೆ ನಿಗಾ ವಹಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮಧ್ಯಾಹ್ನ 11 ಗಂಟೆಗೆ ಮೃತಪಟ್ಟಿದೆ ಎಂದು ಬನ್ನೇರುಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ತಪರಿಚಲನೆ ಆಗದೆ ಸಾವು: ಕರುಳು ಸುತ್ತಿಕೊಂಡು ರಕ್ತಪರಿಚಲನೆ ಆಗದೆ ಜಿರಾೆ ಸತ್ತಿದೆ ಎಂದು ಮರಣೋತ್ತರ ಪರೀೆ ನಡೆಸಿದ ವೈದ್ಯಾಧಿಕಾರಿಗಳು ವರದಿ ನೀಡಿದ್ದು, ಪ್ರಾಣಿಯ ಒಳಾಂಗಗಳ ಮಾದರಿ ಸಂಗ್ರಹಿಸಿ ಪಶು ವೈದ್ಯಕಿಯ ಜೈವಿಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.
ಒಂಟಿ ಎಂದು ತಂದುಬಿಟ್ಟಿದ್ದರು! : ಮೂರು ವರ್ಷದ ಹಿಂದೆ ಬನ್ನೇರುಟ್ಟ ಜೈವಿಕ ಉದ್ಯಾನವನದಲ್ಲಿ ಜಿರಾಫೆಯೊಂದು ಮರದ ಸಂದಿಯಲ್ಲಿ ತಲೆ ಹಾಕಿ ಮೃತಪಟ್ಟಿತ್ತು. ಇದಾದ ಬಳಿಕ ಒಂಟಿಯಾಗಿದ್ದ ಜಿರಾಫೆಗೆ ಜೋಡಿಯಾಗಿರಲಿ ಎಂದು ಮೈಸೂರಿನಿಂದ ಹೆಣ್ಣು ಜಿರಾಫೆ ಶಿವಾನಿಯನ್ನು ಸಾಕಷ್ಟು ಸುರಕ್ಷತೆಯ ಮೂಲಕ ತಂದು ಬನ್ನೇರುಟ್ಟಕ್ಕೆ ಬಿಡಲಾಗಿತ್ತು. ಆದರೆ ಈಗ ಶಿವಾನಿಯೂ ಮೃತಪಟ್ಟಿದೆ.