Ghilli 
ರಾಜ್ಯ

ವೋಟಿಂಗ್‌ನಲ್ಲಿ ಸುನಾಮಿ ಎಬ್ಬಿಸಿದ ಪಾಳರ್​ ಗಿಲ್ಲಿ! ನಟರಾಜನಿಗೆ ಸಿಕ್ಕ ಒಟ್ಟು ಬಹುಮಾನಗಳ ಮೊತ್ತದ ಪಟ್ಟಿ ಇಲ್ಲಿದೆ... | Ghilli

ಬೆಂಗಳೂರು: ಕನ್ನಡ ರಿಯಾಲಿಟಿ ಶೋ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ 'ಬಿಗ್ ಬಾಸ್ ಕನ್ನಡ ಸೀಸನ್ 12'ರ (Bigg Boss Kannada 12) ಮಹಾ ಸಮರಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಈ ಸೀಸನ್‌ನಲ್ಲಿ ಮಂಡ್ಯದ ಹುಡುಗ, ಹಾಸ್ಯ ನಟ ಗಿಲ್ಲಿ ನಟರಾಜ್ (Gilli Nata) ಭರ್ಜರಿ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಜನವರಿ 18ರಂದು ನಡೆದ ಅದ್ಧೂರಿ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ಗಿಲ್ಲಿ ನಟರಾಜ್ ಅವರನ್ನು ವಿನ್ನರ್ ಎಂದು ಘೋಷಿಸಿದರು. ಈ ಮೂಲಕ ಅವರು ಕೇವಲ ಟ್ರೋಫಿ ಮಾತ್ರವಲ್ಲದೆ, ಕೋಟ್ಯಂತರ ಕನ್ನಡಿಗರ ಹೃದಯವನ್ನೂ ಗೆದ್ದಿದ್ದಾರೆ.

ಗಿಲ್ಲಿ ನಟರಾಜ್ ಬರೆದ ಇತಿಹಾಸವೇನು?

ದಾಖಲೆ ಮಟ್ಟದ ವೋಟಿಂಗ್: ಬಿಗ್ ಬಾಸ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ ಗಿಲ್ಲಿ ನಟರಾಜ್ ಅವರಿಗೆ ವೀಕ್ಷಕರಿಂದ ಮತಗಳ ಸುರಿಮಳೆಯಾಗಿದೆ. ವರದಿಗಳ ಪ್ರಕಾರ, ಫಿನಾಲೆ ವಾರದಲ್ಲಿ ಅವರು 43 ಕೋಟಿಗೂ ಅಧಿಕ ಮತಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಿಂದ ಅವರಿಗೆ ಕೋಟ್ಯಂತರ ಮತಗಳು ಹರಿದು ಬಂದಿದ್ದವು.
ಸರಳತೆಯೇ ಸೌಂದರ್ಯ: ಯಾವುದೇ ಮುಖವಾಡವಿಲ್ಲದೆ, ಹಳ್ಳಿ ಸೊಗಡಿನ ಭಾಷೆ ಮತ್ತು ನೇರ ನುಡಿಯ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದು ಈ ಸೀಸನ್‌ನ ವಿಶೇಷ. ಒಬ್ಬ ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯಿಂದ ಬಂದು ಇಷ್ಟು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದು ಒಂದು ಮೈಲಿಗಲ್ಲು.
ಅತಿ ವೇಗದ ಫಾಲೋವರ್ಸ್: ಬಿಗ್ ಬಾಸ್ ಮನೆಗೆ ಬಂದ ಕೇವಲ ಕೆಲವೇ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್ ಫಾಲೋವರ್ಸ್(1.7ಮಿಲಿಯನ್ಸ್​) ದಾಟಿದ ಮೊದಲ ಸ್ಪರ್ಧಿಯಾಗಿ ಗಿಲ್ಲಿ ನಟರಾಜ್ ಗುರುತಿಸಿಕೊಂಡಿದ್ದಾರೆ.

ಬಹುಮಾನದ ಮೊತ್ತ ಮತ್ತು ಗೌರವ

ವಿಜೇತರಾದ ಗಿಲ್ಲಿ ನಟರಾಜ್ ಅವರಿಗೆ ಸಿಕ್ಕ ಬಹುಮಾನಗಳು ಹೀಗಿವೆ. ಗಿಲ್ಲಿ ನಟ ವಿನ್ನರ್​ಗೆ 50 ಲಕ್ಷ ರೂ. ನಗದು ಬಹುಮಾನ. ಜೊತೆಗೆ ಹೋಸ್ಟ್ ಸುದೀಪ್ ಕಡೆಯಿಂದ ಹೆಚ್ಚುವರಿ ರೂ. 10 ಲಕ್ಷ ವೈಯಕ್ತಿಕ ಕೊಡುಗೆ ನೀಡಿದ್ದಾರೆ. ಒಂದು ಬ್ರ್ಯಾಂಡ್ ನ್ಯೂ ಮಾರುತಿ ಸುಜುಕಿ ವಿಕ್ಟೋರಿಸ್ (Victoris) SUV ಕಾರ್ ಮತ್ತು ಹೊಳೆಯುವ ಬಿಗ್ ಬಾಸ್ ಸೀಸನ್ 12ರ ಚಿನ್ನದ ಟ್ರೋಫಿ ಸಿಕ್ಕಿದೆ.

ಹಳ್ಳಿ ಹೈದನ ಜೈತ್ರಯಾತ್ರೆ

ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ನಟರಾಜ್, 'ಕಾಮಿಡಿ ಕಿಲಾಡಿಗಳು' ಮೂಲಕ ಗುರುತಿಸಿಕೊಂಡಿದ್ದರು. ನಂತರ ಯೂಟ್ಯೂಬ್ ಮತ್ತು ಬೆಳ್ಳಿ ಪರದೆಯಲ್ಲೂ ನಟಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರ ಸಮಯಪ್ರಜ್ಞೆ, ಕೌಂಟರ್ ಡೈಲಾಗ್ ಮತ್ತು ಟಾಸ್ಕ್‌ನಲ್ಲಿನ ಚತುರತೆ ಅವರನ್ನು 'ಮಾತಿನ ಮಲ್ಲ'ನನ್ನಾಗಿ ಮಾಡಿತು. ನಟಿ ರಕ್ಷಿತಾ ಶೆಟ್ಟಿ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಅಶ್ವಿನಿ ಗೌಡ ಮೂರನೇ ಸ್ಥಾನ ಪಡೆದರು.

ಫಿನಾಲೆಯ ಅಂತಿಮ ಹಂತ

ವಿನ್ನರ್: ಗಿಲ್ಲಿ ನಟ (ನಟರಾಜ್)
ಮೊದಲ ರನ್ನರ್ ಅಪ್: ರಕ್ಷಿತಾ ಶೆಟ್ಟಿ
ಎರಡನೇ ರನ್ನರ್ ಅಪ್: ಅಶ್ವಿನಿ ಗೌಡ.