ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿಯಲ್ಲಿ ನಾಡಕಚೇರಿ ಹಾಗೂ ನವೀಕೃತ ಗ್ರಾಪಂ ಕಟ್ಟಡವನ್ನು ಶಾಸಕ ಶರತ್​ ಬಚ್ಚೇಗೌಡ ಉದ್ಘಾಟಿಸಿರು. ವಿಧಾನ ಪರಿಷತ್​ ಸದಸ್ಯ ರವಿ, ತಹಸೀಲ್ದಾರ್​ ಸೋಮಶೇಖರ್​, ತಾಪಂ ಇಒ ಮುನಿಯಪ್ಪ, ಉಪತಸೀಲ್ದಾರ್​ ಪ್ರಕಾಶ್​, ಡಿವೈಎಸ್​ಪಿ ಮಲ್ಲೇಶ್​ ಇದ್ದರು.  
ರಾಜ್ಯ

ಕಚೇರಿಗೆ ಅಲೆಸದೆ ಕೆಲಸ ಮಾಡಿಕೊಡಿ / HOSAKOTE

ಹೊಸಕೋಟೆ : ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ ದೊರೆಯಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ವಿಳಂಬ ಮಾಡದೆ ಕಾನೂನು ಚೌಕಟ್ಟಿನಲ್ಲಿ ಶ್ರೀ ಅವರ ಕೆಲಸ ಮಾಡಿಕೊಡಬೇಕು ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು. ಅನುಗೊಂಡನಹಳ್ಳಿಯಲ್ಲಿ ಬುಧವಾರ ನಾಡ ಕಚೇರಿ ಹಾಗೂ ನವೀಕೃತ ಗ್ರಾಪಂ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಶರವೇಗದಲ್ಲಿ ಮಾಡಿಮುಗಿಸುವ ಮೂಲಕ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು ಎಂದರು.
ತಾಲೂಕಿನಲ್ಲಿ ಎರಡುವರೆ ವರ್ಷಗಳಿಂದ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸುವರ್ಣಾಕ್ಷರದಲ್ಲಿ ಬರೆಯುಂತಾಗಿದೆ. 130 ಕೋಟಿ ರೂ. ವೆಚ್ಚದಲ್ಲಿ ಅನುಗೊಂಡನಹಳ್ಳಿ ಹಾಗೂ ಜಡಿಗೇನಹಳ್ಳಿ ಹೋಬಳಿಯ ಕೆರೆಗಳಿಗೆ ಏತನೀರಾವರಿ ಯೋಜನೆ ಮೂಲಕ ನೀರು ತುಂಬಿಸಲಾಗುತ್ತಿದೆ. ಎಪಿಎಂಸಿ ಯಾರ್ಡ್​ ನಿರ್ಮಾಣ ಮಾಡಿರುವುದರಿಂದ ರೈತರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಬೆಸ್ಕಾಂ ಇಇ ವೆಂಕಟೇಶ್​, ಅನುಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ಸಂತೋಷ್​, ಸಮೇತನಹಳ್ಳಿ ಗ್ರಾಪಂ ಅಧ್ಯಕ್ಷ ಕಾಂತರಾಜ್​, ಬಮುಲ್​ ನಿರ್ದೇಶಕ ಕೆಎಂಎಂ ಮಂಜು, ಯೋಜನಾ ಪ್ರಾಧಿಕಾರದ ನಿರ್ದೇಶಕ ಕೊರಳೂರು ಸುರೇಶ್​ ಗೌಡ, ಬಿಡಿಸಿಸಿ ನಿರ್ದೇಶಕ ಬಾಬು ರೆಡ್ಡಿ, ಟಿಎಪಿಸಿಎಂಎಸ್​ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಮಹಿಳಾ ಕಾಂಗ್ರೆಸ್​ ಮುಖಂಡರಾದ ಲತಾರೆಡ್ಡಿ, ಲಕ್ಷಿ$್ಮ ಇದ್ದರು.
ಅಭಿವೃದ್ಧಿ ಏನೇನು? : ತಾಲೂಕು ಪಂಚಾಯಿತಿ ಕಟ್ಟಡ ನಿಮಾರ್ಣಕ್ಕೆ ಸಚಿವರ ಭರವಸೆ, ಸರ್ಕಾರಿ ಪಾಲಿಟೆಕ್ನಿಕ್​ ಸ್ಥಾಪನೆ, ಹೊಸಕೋಟೆಯಲ್ಲಿ ಪ್ರಜಾಸೌಧ ನಿಮಾರ್ಣ, 100 ಹಾಸಿಗೆಗಳ ತಾಯಿ&ಮಕ್ಕಳ ಆಸ್ಪತ್ರೆ, 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ, ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿಗಳಿಗೆ ಏತನೀರಾವರಿ ಮೂಲಕ ಕೆರೆಗಳಿಗೆ ನೀರು ಹಾಯಿಸುವ ಯೋಜನೆಗೆ ಸರ್ಕಾರದ ಅನುಮೋದನೆಯಾಗಿದೆ, ನಾರಾಯಣಕೆರೆ ಗ್ರಾಮದಲ್ಲಿ ವಿದ್ಯುತ್​ ಸಮಸ್ಯೆ ನೀಗಿಸಲು ಪ್ರತ್ಯೇಕ ಪೀಡರ್​ ವ್ಯವಸ್ಥೆ, ತಾಲೂಕಿನ ಗಡಿ ಭಾಗವಾದ ಗುಂಡೂರು, ಸಿದ್ದನಪುರ ಹಾಗೂ ಮಾರಂಗೆರೆ ಸುತ್ತಮುತ್ತ ವಿದ್ಯುತ್​ ಸಮಸ್ಯೆ ನೀಗಿಸಲು ಪ್ರತ್ಯೇಕ ಸಬ್​ ಸ್ಟೇಷನ್​ ನಿಮಾರ್ಣ, ಹೊಸಕೋಟೆಯಲ್ಲಿ ಭೂಗತ ವಿದ್ಯುತ್​ ತಂತಿ ಅಳವಡಿಕೆ ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.
ಭೂಮಿ ಮಾರಬೇಡಿ : ಯಥಾ ರಾಜ ತಥಾ ಪ್ರಜಾ ಎಂಬಂತೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಟೊಂಕ ಕಟ್ಟಿಕೊಂಡಿರುವ ಶಾಸಕ ಶರತ್​ ಬಚ್ಚೇಗೌಡ ಉತ್ತಮ ಅಧಿಕಾರಿಗಳನ್ನು ನೇಮಿಸಿದ್ದಾರೆ. ಅನುಗೊಂಡನಹಳ್ಳಿ ರೈತರು ಎಂದಿಗೂ ಜಮೀನಿಗಳನ್ನು ಮಾರಾಟ ಮಾಡಬೇಡಿ. ಏಕೆಂದರೆ ನಾನೂ ಈ ಭಾಗದವರ ಸಹಕಾರದಿಂದಲೇ ವಿಧಾನ ಪರಿಷತ್​ಗೆ ಆಯ್ಕೆಯಾಗಿದ್ದು, ಈ ಭೂಮಿಗೆ ಮುಂದೊಂದು ದಿನ ಚಿನ್ನದ ಬೆಲೆ ಬರಲಿದೆ ಎಂದು ವಿಧಾನ ಪರಿಷತ್​ ಸದಸ್ಯ ರವಿ ಹೇಳಿದರು.