ಕಕ್ಕೇರಾದಲ್ಲಿ ಗುರುವಾರ ಹಮ್ಮಿಕೊಂಡ ಸ್ವಸಹಾಯ ಸಂಘದ ಸದಸ್ಯರಿಗೆ ಮೂರು ತಿಂಗಳ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಪೊಲೀಸ್ ಅಽಕಾರಿ ಷಣ್ಮುಕಪ್ಪ ಚಾಲನೆ ನೀಡಿದರು. ವೀರಸಂಗಪ್ಪ ಸಾಹುಕಾರ್, ನಾಗೇಶ, ಅನಿತಾ, ನಿಂಗರಾಜ್, ಸುರಿಯಾಬೇಗಂ, ಕಸ್ತೂರಿಬಾಯಿ, ಮಹಿಬೂಬ್ ಇತರರಿದ್ದರು.
- ಎಎಸ್‌ಐ ಷಣ್ಮುಖಪ್ಪ ಸಲಹೆ
- ಧರ್ಮಸ್ಥಳ ಗ್ರಾಮಭಿವೃದ್ಧಿಯಿಂದ ಕಾರ್ಯಕ್ರಮ ಆಯೋಜನೆ
ಕಕ್ಕೇರಾ: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರಿಗಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿAದ ಹಲವು ಯೋಜನೆಗಳು ಅನುಷ್ಠಾನಕ್ಕೆ ತರಲಾಗಿದ್ದು, ಅವುಗಳಲ್ಲಿ ಹೊಲಿಗೆ ತರಬೇತಿ ಕೂಡ ಅತ್ಯಂತ ಪ್ರಮುಖವಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆ ಎಎಸ್‌ಐ ಷಣ್ಮುಖಪ್ಪ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ಗುರುವಾರ ಹಮ್ಮಿಕೊಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜÁ್ಞನ ವಿಕಾಸ ಕಾರ್ಯಕ್ರಮದಡಿ ಸ್ವಸಹಾಯ ಸಂಘದ ಸದಸ್ಯರಿಗೆ ಮೂರು ತಿಂಗಳುಗಳ ಕಾಲ ಉಚಿತ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಸೇರಿ ಸರ್ಕಾರೇತರ ಸಂಸ್ಥೆಗಳಲ್ಲಿ ಒಂದಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆ ಮತ್ತು ಪುರುಷರಿಗಾಗಿ ಹಲವು ಯೋಜನೆಗಳನ್ನು ಜÁರಿಗೆ ತಂದು ಅದರಲ್ಲೂ ಮಹಿಳೆಯರಿಗಾಗಿ ವಿವಿಧ ಕಾರ್ಯಚಟುವಟಿಕೆಗಳಲ್ಲಿ ತೊಡಗಲು ಸಹಾಯವಾಗುವಂತೆ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಸ್ವಾವಲಂಬಿ ಜೀವನಕ್ಕೆ ಮುನ್ನುಡಿ ಇರಿಸಿದೆ ಎಂದರು.
ತರಬೇತಿ ವೇಳೆ ಮಹಿಳೆÀಯರು ಉತ್ತಮ ರೀತಿಯಲ್ಲಿ ತರಬೇತಿ ಹೊಂದುವ ಮೂಲಕ ಪರಿಪೂರ್ಣರಾಗಿ ಸ್ವಾವಲಂಬಿ ಜೀವನದ ಜತೆಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.
ಮುಖಂಡ ವೀರಸಂಗಪ್ಪ ಸಾಹುಕಾರ್ ಮಾತನಾಡಿದರು. ಸಂಸ್ಥೆಯ ತಾಲೂಕಾ ಯೋಜನಾಽಕಾರಿಗಳಾದ ನಾಗೇಶ ಎನ್.ಪಿ ಪ್ರಾಸ್ತಾವಿಕ ಮಾತನಾಡಿದರು.ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಸ್ತೂರಿಬಾಯಿ ಗಿಟಗಿ, ಹೊಲಿಗೆ ಶಿಕ್ಷಕಿ ಸುಮಾ ಹರಸೂರ, ಸಂಸ್ಥೆಯ ಪ್ರಮುಖರಾದ ಅನಿತಾ, ನಿಂಗರಾಜ್ ಬಿ.ಎಸ್, ಸುರಿಯಾಬೇಗಂ, ಸೈದಾಬಿ, ಖಾಜÁಬಿ, ಮಹಿಳಾ ಒಕ್ಕೂಟದ ಪದಾಽಕಾರಿಗಳು ಸೇರಿ ಅನೇಕರು ಇದ್ದರು.