ಇಂಡಿಯ ಸಿಂದಗಿ ರಸ್ತೆಯ ಮಂಗಲ ಕಾರ್ಯಾಲಯ ಪಕ್ಕದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿಯಿಂದ ಆಯೋಜಿಸಿದ್ದ ವಿರಾಟ್ ಹಿಂದೂ ಸಮ್ಮೇಳನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಗುರು ಪ್ರಸಾದ ಸ್ವಾಮೀಜಿ ಕಾಸುಗೌಡ ಬಿರಾದಾರ, ಜಗದೀಶ ಕ್ಷತ್ರಿ, ಸಂಗಣ್ಣ ಈರಾಬಟ್ಟಿ, ಜಗದೀಶ ಕ್ಷತ್ರಿ ಮತ್ತಿತರರಿದ್ದರು. 
ರಾಜ್ಯ

ಜಿಹಾದಿಗಳನ್ನು ದೇಶ ಬಿಟ್ಟು ಹೊರ ಹಾಕಿ

ಪ್ರಮುಖ ಮುಖ್ಯಾಂಶಗಳು

  • ಮೈಗೂರದ ಗುರುಪ್ರಸಾದ ಸ್ವಾಮೀಜಿ ಅಭಿಮತ
  • ಧರ್ಮ, ಸಂಸ್ಕೃತಿ ಉಳಿಸಿ
ಇಂಡಿ: ಇಸ್ಲಾಂ ಧರ್ಮದವರು ಭಾರತದ ದೇಗುಲಗಳನ್ನು ನಾಶಪಡಿಸಿದ್ದಲ್ಲದೆ ದೇಶದ ಮೇಲೆ ಸಾಕಷ್ಟು ಬಾರಿ ದಾಳಿ ಮಾಡಿದ್ದಾರೆ. ಆದರೂ ನಮ್ಮ ಧರ್ಮ ಸಂಸ್ಕೃತಿ ಇನ್ನೂ ಉಳಿದಿದೆ. ಜಿಹಾದಿಗಳನ್ನು ದೇಶ ಬಿಟ್ಟು ಹೊರಹಾಕಬೇಕು. ಆಗ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಮೈಗೂರದ ಗುರುಪ್ರಸಾದ ಸ್ವಾಮೀಜಿ ಹೇಳಿದರು.
ನಗರದ ಸಿಂದಗಿ ರಸ್ತೆಯ ಮಂಗಲ ಕಾರ್ಯಾಲಯ ಪಕ್ಕದ ಆವರಣದಲ್ಲಿ ಹಿಂದೂ ಸಮ್ಮೇಳನ ಸಂಚಲನಾ ಸಮಿತಿ, ಇಂಡಿ ನಗರ ವತಿಯಿಂದ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಸಲ್ಮಾನರು ಪವಿತ್ರ ರಂಜಾನ್ ತಿಂಗಳಿನಲ್ಲೂ ಸಹ ಶಿವಾಜಿ ಮಹಾರಾಜರ ಮೆರವಣಿಗೆಗೆ ಕಲ್ಲು ಎಸೆದಿದ್ದಾರೆ. ಬಾಗಲಕೋಟೆ, ಹುಬ್ಬಳ್ಳಿ ಸೇರಿ ಹಲವೆಡೆ ಗಣಪತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ಮಾಡಲಾಗಿದೆ. ನಾವೆಲ್ಲ 100 ಕೋಟಿ ಹಿಂದೂಗಳು ಕಲ್ಲು ಎಸೆಯಲು ಪ್ರಾರಂಭಿಸಿದರೆ ಈ ದೇಶದಲ್ಲಿ ಒಂದೂ ಮಸೀದಿ ಉಳಿಯಲ್ಲ. ರಾಜ್ಯ ಸರ್ಕಾರ ಆರ್.ಎಸ್.ಎಸ್. ಸಂಘದ ಪಥ ಸಂಚಲನ ಮಾಡಬಾರದು, ಸಂಘದ ಕಾರ್ಯ-ಕಲಾಪಗಳನ್ನು ಮುಜರಾಯಿ ಇಲಾಖೆಯ ದೇವಸ್ಥಾನಗಳ ಆವರಣದಲ್ಲಿ ನಡೆಸಬಾರದು ಎಂದು ಆದೇಶ ಹೊರಡಿಸಿದ್ದು ಖಂಡನೀಯ. ಸಂಘದವರು ಯಾರ ಮೇಲೂ ಕಲ್ಲು ಎಸೆದಿಲ್ಲ, ಒಬ್ಬರಿಗೂ ಕ್ರೂರತೆಯಿಂದ ನಡೆಸಿ ಕೊಂಡಿಲ್ಲ. ಅಂತಹ ಸಂಘಟನೆಗೆ ಅಡ್ಡಿಪಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮಹಿಳೆಯರು ಹಿಂದೂ ಸಮಾವೇಶಗಳಲ್ಲಿ ಹೆಚ್ಚು-ಹೆಚ್ಚು ಭಾಗವಹಿಸಬೇಕು. ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳಬೇಕು. ವೀರ ಸಂತ-ಸನ್ಯಾಸಿ, ವೀರ ಯೋಧರಂತೆ ನಮ್ಮ ಮಕ್ಕಳನ್ನೂ ಬೆಳೆಸುವ ಕಾರ್ಯ ಮಾಡಬೇಕು ಎಂದರು.
ಹಿರೇಮಣೂರದ ಪಂ. ಸರ್ವೇಶ ಆಚಾರ್ಯರು ಅಕಮಂಚಿ ಮಾತನಾಡಿ, ಹಿಂದೂಗಳಾದ ನಾವೆಲ್ಲ ಮೊದಲು ನಮ್ಮನ್ನು ನಾವು ಸರಿ ಮಾಡಿಕೊಳ್ಳಬೇಕು. ಜಾತಿ-ಜಾತಿ ಎನ್ನದೇ ಮೊದಲು ನಾವೆಲ್ಲ ಹಿಂದೂ ಎನ್ನುವುದನ್ನು ಅರಿಯಬೇಕು. ಈ ಹಿಂದೆ ಆಗಿ ಹೋದ ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ಮಹಾನ್ ನಾಯಕರನ್ನು ಒಂದೊಂದು ಜಾತಿಗೆ ಸೀಮಿತ ಮಾಡಿಕೊಳ್ಳುತ್ತಿರುವುದು ನಮ್ಮ ದುರಂತ. ಹೀಗಾಗಿ ಜಾತಿ ಬಿಟ್ಟು ಧರ್ಮದ ಬಗ್ಗೆ ಕಾಳಜಿವಹಿಸಬೇಕು ಎಂದರು.
ಆಂದೋಲ ಕರುಣೇಶ್ವರಮಠದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ರಾಮ ಮಂದಿರ ನಿರ್ಮಾಣಕ್ಕೆ 500 ವರ್ಷ ಕಾಯಬೇಕಾಯಿತು. 1992ರಲ್ಲಿ ಹಿಂದೂ ಯುವಕರು ಅಂದಾಜು 6 ಲಕ್ಷ ಜನ ಅಯೋಧ್ಯೆಗೆ ಹೋಗಿ ಬಾಬ್ರಿ ಮಸೀದಿ ಧ್ವಂಸ ಮಾಡಿತು. ಅಲ್ಲಿಂದ ನಿರಂತರ ಕಾನೂನು ಹೋರಾಟ ನಡೆಸಿ ಗೆಲುವು ಸಾಧಿಸಿ ಕೇಂದ್ರದಲ್ಲಿ ಮೋದಿ ಹಾಗೂ ಉತ್ತರಪ್ರದೇಶದಲ್ಲಿ ಯೋಗಿ ಅವರ ದಿಟ್ಟ ನಿರ್ಧಾರದಿಂದ ರಾಮ ಮಂದಿರ ನಿರ್ಮಾಣವಾಗಿದೆ ಎಂದರು.
ಕರ್ನಾಟಕ ಉತ್ತರ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಹಿಂದೂ ಧರ್ಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಭೀಮಾಶಂಕರ ಮುರಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಸುಗೌಡ ಬಿರಾದಾರ, ಜಗದೀಶ ಕ್ಷತ್ರಿ, ಸಂಗಣ್ಣ ಈರಾಬಟ್ಟಿ, ಜಗದೀಶ ಕ್ಷತ್ರಿ, ಮಲ್ಲು ಗುಡ್ಲ, ಸತೀಶ ಕುಂಬಾರ, ಯಮನಾಜಿ ಸಾಳುಂಕೆ, ಡಾ. ಲಕ್ಷ್ಮೀಕಾಂತ ಮೇತ್ರಿ, ವಿರಾಜ ಪಾಟೀಲ, ಅಜಿತ ಹಿರೇಮಠ, ಸಂತೋಷ ಗವಳಿ, ಸಂಜು ದಶವಂತ, ವಿಠ್ಠಲ ಕಂಬಾರ, ಸ್ವತಂತ್ರ ಸಿಂಧೆ, ನೇತಾಜಿ ಪವಾರ, ಪ್ರಕಾಶ ಬಿರಾದಾರ, ವಿವೇಕ ಹಂಜಗಿ, ಮಂಜು ತಮಶೆಟ್ಟಿ ಮತ್ತಿತರರಿದ್ದರು.

ವಿರಾಟ್ ಹಿಂದೂ ಶೋಭಾಯಾತ್ರೆ ಅದ್ದೂರಿ

ಇಂಡಿ: ನಗರದಲ್ಲಿ ಶುಕ್ರವಾರ ವಿರಾಟ್ ಹಿಂದೂ ಶೋಭಾಯಾತ್ರೆ ವಿವಿಧ ಮಠಾಧೀಶರು, ಗಣ್ಯರ ಸಮ್ಮುಖದಲ್ಲಿ ವಿಜಂಭಣೆಯಿಂದ ನಡೆಯಿತು. 4 ಗಂಟೆಗೆ ನಗರದ ಶಿವಾಜಿ ವತ್ತದಿಂದ ಮಹಾವೀರ ವತ್ತ, ಡಾ. ಬಿ.ಆರ್. ಅಂಬೇಡ್ಕರ ವತ್ತ, ಬಸವೇಶ್ವರ ವತ್ತ, ಸ್ವಾಮಿ ವಿವೇಕಾನಂದ ವತ್ತ ಮಾರ್ಗವಾಗಿ ಸಿಂದಗಿ ರಸ್ತೆಯಲ್ಲಿರುವ ಶಾಂತೇಶ್ವರ ಮಂಗಲ ಕಾರ್ಯಾಲಯದ ಪಕ್ಕದ ಖಾಲಿ ಜಾಗದಲ್ಲಿ ಬಹತ್ ಸಮಾವೇಶ ನಡೆಯಿತು. ಜಮಖಂಡಿ ತಾಲೂಕು ಮೈಗೂರಿನ ಪೂಜ್ಯ ಗುರುಪ್ರಸಾದ ಶ್ರೀಗಳು, ಜೇವರ್ಗಿ ಆಂದೋಲ ಶ್ರೀ ಕರುಣೇಶ್ವರ ಮಠದ ಸಿದ್ಧಲಿಂಗ ಶಿವಾಚಾರ್ಯರು, ಹಿರೇಮಣೂರದ ಶ್ರೀ ವೇದೇಶ ತೀರ್ಥ ವಿದ್ಯಾಪೀಠದ ಉಪಕುಲಪತಿ ಪಂಡಿತ ಶ್ರೀ ಸರ್ವೇಶಚಾರ್ಯ ಮತ್ತು ಪ್ರಾಂತ ಕಾರ್ಯವಾಹಕರು ಕರ್ನಾಟಕ ಉತ್ತರ ಪ್ರಾಂತದ ರಾಘವೇಂದ್ರ ಕಾಗವಾಡ, ಭೀಮಾಶಂಕರ ಮುರಗುಂಡಿ, ಕಾಸುಗೌಡ ಬಿರಾದಾರ, ಹಣಮಂತಗೌಡ ಪಾಟೀಲ, ಮುತ್ತು ದೇಸಾಯಿ, ಪ್ರಕಾಶ ಬಿರಾದಾರ, ಅನೀಲ ಜಮಾದಾರ, ರಾಮಸಿಂಗ ಕನ್ನೊಳ್ಳಿ, ಜಿ.ಎಸ್.ಜೋಶಿ ವಕೀಲರು, ಅನೀಲಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವಡೆ, ಸಂಜು ದಶವಂತ, ಸೋಮು ನಿಂಬರಗಿಮಠ, ಬಸವರಾಜ ಕಂಬಾರ, ಆನಂದ ಕುಲಕರ್ಣಿ ಮತ್ತಿತರರಿದ್ದರು. ಶೋಭಾಯಾತ್ರೆಯಲ್ಲಿ ಮುನ್ನೂರಕ್ಕೂ ಹೆಚ್ಚು ಮಹಿಳೆಯರು ಐನೂರಕ್ಕೂ ಹೆಚ್ಚು ಪುರುಷರು ಭಾಗಿಯಾಗಿದ್ದರು. ಸಮಾವೇಶದ ನಿಮಿತ್ತ ಬಹತ್ ಶೋಭಾಯಾತ್ರೆಗೆ ಮಾರ್ಗದುದ್ದಕ್ಕೂ ಬಹುತೇಕ ವತ್ತಗಳಿಗೆ ಭಗವಾ ಧ್ವಜ ರಾರಾಜಿಸುತ್ತಿತ್ತು.