ಶಹಾಪುರ ತಾಲೂಕು ಕ್ರೀಡಾಂಗಣಕ್ಕೆ ಶಾಸಕ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ, ಲಾಂಗ್ ಟೆನಿಸ್ ಗ್ರೌಂಡ್ ಕಾಮಗಾರಿ ಪರಿಶೀಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ, ಅವಿನಾಶ ಸಿನ್ನೂರ ಇತರರಿದ್ದರು.
- ಮಾಜಿ ಸಚಿವ ದರ್ಶನಾಪುರ ಸಲಹೆ
- ಶಹಾಪುರದಲ್ಲಿ ವಿವಿಧ ಕಾಮಗಾರಿ ಪರಿಶೀಲನೆ
ಶಹಾಪುರ: ಜಿಲ್ಲಾ ಮಟ್ಟದ ಕ್ರೀಡಾಂಗಣದಲ್ಲಿರುವಂತೆ ವಿವಿಧ ಕ್ರೀಡೆಗಳಿಗೆ, ಶಾರೀರಿಕ, ಕವಾಯತುಗಳಿಗೆ ಬೇಕಾಗುವ ಸಕಲ ಸೌಲಭ್ಯವುಳ್ಳ ಕ್ರೀಡಾ ಸಾಮಗ್ರಿಯನ್ನು ಕಲ್ಪಿಸಲಾಗಿದು,್ದ ಹಿರಿಯರು, ಯುವಕರು ಮತ್ತು ಬಾಲಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಕೆಕೆಆರ್ಡಿಬಿ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ಸಕಲ ಸೌಲಭ್ಯಗಳು, ಲಾಂಗ್ ಟೆನಿಸ್ ಗ್ರೌಂಡ್ ನಿರ್ಮಾಣದ ಕಾಮಗಾರಿ ಪರಿಶೀಲಿಸಿ, ನಂತರ ಮಾತನಾಡಿದ ಅವರು, ಹೊರ ಕ್ರೀಡಾಂಗಣದೊಳಗೆ 1ಕೋಟಿ ರೂ ವೆಚ್ಚದಲ್ಲಿ ನೀರು ನಿಲ್ಲದಂತೆ ಇನ್ನರ್ ಡ್ರೈನೇಜ್ ನಿರ್ಮಾಣ ಮಾಡಲಾಗುತ್ತಿದ್ದು, ಅದರ ಜತೆಗೆ ಹಿರಿಯರಿಗೆ ವಾಯು ವಿಹಾರಕ್ಕೆ ಟ್ರಾ$್ಯಕಿಂಗ್ ವ್ಯವಸ್ಥೆ, ಕ್ರೀಡಾಂಗಣ ಸುತ್ತಲೂ ಗೋಡೆಗಳ ಭದ್ರತೆಗೆ ವ್ಯವಸ್ಥಿತ ಪಿಚ್ಚಿಂಗ್ ಮಾಡಲಾಗಿದೆ ಎಂದರು. ಕ್ರೀಡಾಂಗಣದ ರಕ್ಷಣೆಯ ಕಾಳಜಿಯು ಬಹು ಮುಖ್ಯವಾಗಿದೆ. ಕ್ರೀಡಾಸಕ್ತರು, ಹಿರಿಯರು ಸದಾ ಕ್ರೀಡಾಂಗಣದ ಬಗ್ಗೆ ಕಾಳಜಿ ವಹಿಸುತ್ತಿರಬೇಕು ಎಂದು ತಿಳಿಸಿದರು, ಇದೇ ಸಂದರ್ಭದಲ್ಲಿ ಉಳಿದ ಕೆಲಸ ಕಾರ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ, ಅವಿನಾಶ ಸಿನ್ನೂರ ಇತರರಿದ್ದರು.