ಹೊಸಕೋಟೆಯ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ. ಶೈಲಜಾ ರೆಡ್ಡಿ, ಡಾ.ವರಧರಾಜ್, ಬೆಂ.ಗ್ರಾಮಾಂತರ ಹಾಗೂ ಕೋಲಾರ ರೋಟರಿ ಸಂಸ್ಥೆಯ ಸಹಾಯಲ ಪಾಲಕ ಡಿ.ಎಸ್. ರಾಜ್ಕುಮಾರ್ ಇತರರು ಇದ್ದರು.
ಹೊಸಕೋಟೆ : ಗ್ರಾಮೀಣ ಜನರು ಸಂಕುಚಿತ ಮನಸ್ಥಿತಿ ಬಿಟ್ಟು ಆರೋಗ್ಯ ಪರೀಕ್ಷೆಗಳ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ರೋಟರಿ ಸೆಂಟ್ರಲ್ನ ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ವಿಭಾಗದ ಸಹಾಯಕ ಪಾಲಕ ಡಿ.ಎಸ್. ರಾಜ್ ಕುಮಾರ್ ತಿಳಿಸಿದರು.
ನಗರದ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊಸಕೋಟೆ ರೋಟರಿ ಸೆಂಟ್ರಲ್, ರೋಟರಿ ಕಬ್ಬನ್ ಪಾರ್ಕ್ ಘಟಕ ಹಾಗೂ ಬೆಂಗಳೂರು ಗ್ಯಾಸ್ಟ್ರೊ ಸೆಂಟರ್ ಆಸ್ಪತ್ರೆಯಿಂದ ಜೀರ್ಣಾಂಗ ತಪಾಸಣಾ ಶಿಬಿರ, ಉಚಿತ ಔಷಧ ವಿತರಣೆ ಹಾಗೂ ಎಂಡೋಸ್ಕೋಪಿ ಪರೀಕ್ಷಾ ಶಿಬಿರದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಮೊದಲು ಎಂಡೊಸ್ಕೋಪಿ ಆನ್ ವೀಲ್ ವಾಹನವನ್ನು ರೋಟರಿ ಸಂಸ್ಥೆಯಿಂದ ನೀಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗೆ ತಲುಪಿ ಗ್ಯಾಸ್ಟ್ರೊ ಸಮಸ್ಯೆ ಅಥವಾ ಜೀರ್ಣಾಂಗ ಸಮಸ್ಯೆ ಸಂಬಂಧ ಸ್ಥಳದಲ್ಲಿಯೇ ತಪಾಸಣೆ ಮಾಡಬಹುದು ಎಂದರು.
250ಕ್ಕೂ ಹೆಚ್ಚು ಜನ ಶಿಬಿರದಲ್ಲಿ ಭಾಗಿಯಾಗಿ ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ ಹುಬ್ಬಳ್ಳಿ, ಹಾಸನ ಸೇರಿ ಹಲವು ಜಿಲ್ಲೆಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಬಾಧಿತರು ಶಿಬಿರದ ಪ್ರಯೋಜನ ಪಡೆದಿರುವುದು ಸಂತಸ ತಂದಿದೆ ಎಂದರು.
ಗ್ಯಾಸ್ಟ್ರೊ ಆಸ್ಪತ್ರೆಯ ಮುಖ್ಯಸ್ಥ ಡಾ. ಯೋಗಾನಂದ ರೆಡ್ಡಿ ಮಾತನಾಡಿ, ಗ್ಯಾಸ್ಟ್ರಿಕ್ ಸಮಸ್ಯೆ ಮಾರಣಾಂತಿಕ ಕಾಯಿಲೆಯಲ್ಲ. ದೇಹದಲ್ಲಿ ಆರೋಗ್ಯ ಸಮಸ್ಯೆಯುಂಟಾಗುವುದೇ ಜೀರ್ಣಾಂಗ ವ್ಯವಸ್ಥೆಯಿಂದ ಮೊದಲು ಶುರುವಾಗುವುದೇ ಗ್ಯಾಸ್ಟ್ರಿಕ್ ಸಮಸ್ಯೆ. ಆದುದರಿಂದ ಜೀರ್ಣಾಂಗ ಸಮಸ್ಯೆ ಬಗ್ಗೆ ರ್ನಿಲಕ್ಷ$್ಯ ತೋರದೆ ಮೊದಲ ಹಂತದಲ್ಲೇ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದಲ್ಲಿ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎಂದರು. ರೋಟರಿ ಸಂಸ್ಥೆಯ ವೈ.ಸಿ.ರಾಯ್, ಸುಬ್ರಮಣಿ, ಗೌರಿ ಶಂಕರ್, ಉಪಾ ವೆಂಕಟೇಶ್, ಶಾಮಲಾ ವಿದ್ಯಾರಣ್ಯ, ಕಾರ್ಯದರ್ಶಿ ಬಚ್ಚಣ್ಣ ಇದ್ದರು.