ಚಿತ್ತಾಪುರ ತಹಸಿಲ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನ ನಿಮಿತ್ತ ಗುರುವಾರ ಹಮ್ಮಿಕೊಂಡ ಪೂರ್ವಸಿದ್ಧತೆ ಸಭೆಯಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿದರು. ರಾಜಕುಮಾರ ಮರತೂರಕರ್, ಮಹ್ಮದ್ ಅಕ್ರಂ ಪಾಶಾ ಇತರರಿದ್ದರು.
- ತಹಸೀಲ್ದಾರ್ ನಾಗಯ್ಯ ಹಿರೇಮಠ ಸೂಚನೆ
- ತಹಸಿಲ್ ಕಚೇರಿಯಲ್ಲಿ ಪೂರ್ವಸಿದ್ಧತೆ ಸಭೆ
ಚಿತ್ತಾಪುರ: ತಾಲೂಕಿನಲ್ಲಿ ಅದ್ದೂರಿ ಹಾಗೂ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಸೂಚನೆ ನೀಡಿದರು.
ತಹಸಿಲ್ ಕಚೇರಿಯಲ್ಲಿ ಸ್ವಾತಂತ್ರ ದಿನ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತೆ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ತಹಸಿಲ್ ಸೇರಿ ಅನೇಕ ಕಡೆ ಸ್ವಚ್ಛತೆ ಕೈಗೊಳ್ಳಬೇಕು. ತಾಲೂಕು ಮಟ್ಟದ ಎಲ್ಲ ಕಚೇರಿಗಳ ಮೇಲೆ ದೀಪಾಲಂಕಾರ ಮಾಡಬೇಕು. ಬೆಳಗ್ಗೆ 8ಕ್ಕೆ ಎಲ್ಲ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ಬೆಳಗ್ಗೆ 9ಕ್ಕೆ ತಹಸಿಲ್ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸರ್ಕಾರಿ ಶಾಲೆಗಳಲ್ಲಿನ ಎಸ್ಸೆಸ್ಸೆಲ್ಸಿ, ಪಿಯುಸಿ, ನೀಟ್ ರ್ಯಾಂಕ್ ಮಕ್ಕಳು ಸೇರಿ ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಗುವುದು. ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ತಾಕೀತು ಮಾಡಿದರು.
ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರಕರ, ತಾಪಂ ಇಒ ಮಹ್ಮದ್ ಅಕ್ರಂ ಪಾಶಾ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಅಧಿಕಾರಿಗಳಾದ ಡಾ.ಶಂಕರ ಕಣ್ಣಿ, ವಿಜಯಕುಮಾರ ಬಡಿಗೇರ, ಶಶಿಧರ ಬಿರಾದಾರ, ಚೇತನ ಗುರಿಕಾರ, ಸುನೀತಾ, ವಿಠ್ಠಲರಾವ, ಸೈಯದ್ ಅನ್ವರ್, ಸತೀಶಕುಮಾರ, ಮಲ್ಲಿಕಾರ್ಜುನ ಮಾಲಿಪಾಟೀಲ್, ಸೂರ್ಯಕಾಂತ, ಎಂಡಿ ಜಾವೀದ್, ವಿಠ್ಠಲ ಬಿರಾದಾರ, ಸಂತೋಷ, ವಿಠ್ಠಲ್, ಕರಣಕುಮಾರ, ಉಮೇಶ, ನರಸಿಂಹಲು ಇದ್ದರು.