ಸುಲೇಪೇಟದಲ್ಲಿ ನಡೆದ ಆಧ್ಯಾತ್ಮಕ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಪ್ರಭು ಖಟ್ಟಾಂಗೇಶ್ವರ ಮರಿದೇವರು, ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ, ಡಾ.ರಾಜಕುಮಾರ ಕುಲಕರ್ಣಿ ಇತರರಿದ್ದರು.
- ಶ್ರೀ ಪ್ರಭು ಖಟ್ವಾಂಗೇಶ್ವರ ಮರಿದೇವರು ಹಿತನುಡಿ
- ಸುಲೇಪೇಟದಲ್ಲಿ ವೀರಭದ್ರೇಶ್ವರ ಜಾತ್ರೋತ್ಸವ
ಚಿಂಚೋಳಿ : ಇಂದಿನ ಆಧುನಿಕ ಯುಗದಲ್ಲಿ ಒತ್ತಡ, ದುಡಿಮೆಗಾಗಿ ನಿತ್ಯದ ಅಲೆದಾಟದಿಂದ ಮನಸ್ಸು ಮತ್ತು ದೇಹದ ಆಯಾಸದಿಂದ ಅನಾರೋಗ್ಯದ ಬದುಕು ನಮ್ಮದಾಗಿದೆ. ಇದರಿಂದ ಹೊರಬಂದು ಅಧ್ಯಾತ್ಮದಲ್ಲಿ ಪರಮಾತ್ಮನ ಕಾಣಬೇಕು ಎಂದು ಶ್ರೀ ಪ್ರಭು ಖಟ್ವಾಂಗೇಶ್ವರ ಮರಿದೇವರು ನುಡಿದರು.
ಶ್ರೀ ವೀರಭದ್ರೇಶ್ವರ ಜಾತ್ರೋತ್ಸವ ನಿಮಿತ್ತ ಸುಲೇಪೇಟದ ಖಟ್ವಾಂಗೇಶ್ವರ ಮಠದಲ್ಲಿ ಏರ್ಪಡಿಸಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಯೋಗ, ಧ್ಯಾನ, ಜಪ ತಪದೊಂದಿಗೆ ಕಾಯಕ ನಿಷ್ಠೆ, ಆಧ್ಯಾತ್ಮಿಕ ಬದುಕು ರೂಪಿಸಿಕೊಂಡು ಸನ್ಮಾರ್ಗದಲ್ಲಿ ಜೀವನ ಸಾಗಿಸಬೇಕು ಎಂದು ಹಿತೋಪದೇಶ ನೀಡಿದರು.
ಟೆಂಗಿನಮಠ ಶ್ರೀ ಸಿದ್ರಾಮೇಶ್ವರ ಮಹಾಸ್ವಾಮೀಜಿ, ಮುರಗೆಪ್ಪ ಕುಕ್ಕಡಿ, ಬಸವರಾಜ ದೇಸಾಯಿ, ಶರಣು ಪಡಶೆಟ್ಟಿ, ಮಲ್ಲಿಕಾರ್ಜುನ ದೇಸಾಯಿ, ನಾಗಶೆಟ್ಟಿ ಕೊಟಗಿ, ನಾಗೇಶ ಚಾಂಗಲೇರಾ, ಚಂದ್ರು ಹೂಗಾರ, ಹಣಮಂತ ಪಾಟೀಲ್, ರವಿಕುಮಾರ ಮಂಗಲಗಿ, ಅಭಿಲಾಶ ಸುಬೇದಾರ, ಕರಬಸಪ್ಪ ಹೂಗಾರ, ಮಲ್ಲಪ್ಪ ಪಡಶೆಟ್ಟಿ, ಅನೀಲ್ ತಾರಾಪುರ, ಗುಲಾಬ್ ಹರದೂರ ಇತರರಿದ್ದರು.
ಕಲ್ಯಾಣ ನಾಡಿನ ಪ್ರಸಿದ್ಧ ಸುಲೇಪೇಟದ ವೀರಭದ್ರೇಶ್ವರ ಜಾತ್ರೋತ್ಸವದ ಆಧ್ಯಾತ್ಮಿಕ ಪ್ರವಚನದಲ್ಲಿ ಪಾಲ್ಗೊಂಡ ಭಕ್ತರಿಗೆ ಡಾ.ರಾಜಕುಮಾರ ಕುಲಕರ್ಣಿ ಮಹಾ ಪ್ರಸಾದದ ವ್ಯವಸ್ಥೆ ಮಾಡಿ ಭಕ್ತಿ ಮೆರೆದರು.