Get out of the private school frenzy
ತುರುವೇಕೆರೆ: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಟಿ& ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಹಾಲಪ್ಪ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕೌಶಲ ಪಥ ಯುವ ಸಬಲಿಕರಣ ಸವೋದಯ&ಸೈನಿಕ್ ಮುರಾರ್ಜಿ, ಕಸ್ತೂರಿ ಬಾ ಇತರ ವಸತಿ ಶಾಲೆಗಳ ಉಚಿತ ಪ್ರವೇಶ ಕುರಿತು ವಿದ್ಯಾರ್ಥಿ ಹಾಗೂ ಪಾಲಕರ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ಪಾಲಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚುವಂತ ಸ್ಥಿತಿ ನಿಮಾರ್ಣವಾಗಿದೆ. ಸರ್ಕಾರಿ ಶಾಲೆಗೆ ಅರ್ಹ ಶಿಕ್ಷಕರನ್ನು ಸರ್ಕಾರ ನೇಮಿಸುತ್ತಿದ್ದು, ಸರ್ಕಾರಿ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುಲಿದೆ ಎಂದರು.
ವಸತಿ ಶಾಲೆಗಳ ಲಿತಾಂಶದಲ್ಲಿ ಇಡೀ ಜಿಲ್ಲೆಯಲ್ಲಿ ತುರುವೇಕೆರೆ ಮುಂದಿದೆ. ತಾಲೂಕಿನ ವಸತಿ ಶಾಲೆಗಳ ಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ತಾಲೂಕಿಗೆ ಇನ್ನು ಎರಡು ವಸತಿ ಶಾಲೆಗಳನ್ನು ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಮುರುಳೀಧರ ಹಾಲಪ್ಪ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.
ಹಾಲಪ್ಪ ಪ್ರತಿಷ್ಠಾಪನ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಪ್ರತಿ ತಾಲೂಕಿನಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೋದಯ, ಸೈನಿಕ್ ಶಾಲೆ, ಕಸ್ತೂರಿ ಬಾ ಸೇರಿ ವಸತಿ ಶಾಲೆಗಳಿಗೆ ಸೇರಿಸಲು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಪ್ರತಿಯೊಬ್ಬರೂ ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಸತಿ ಶಾಲೆಗಳಲ್ಲಿ ಸಾಧನೈಗೈದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ವಸತಿ ಶಾಲೆಯ ಪ್ರಾಶುಪಾಲರಾದ ಸತೀಶ್ ಜಾಮಾದಾರ್, ಮಲ್ಲಪ್ಪ ನಾವದಗಿ, ಗದಗಯ್ಯ ಹಿರೇಮಠ್, ಪ್ರಾಣೇಶ್ ಪಟೇಲ್ ಮತ್ತಿತರರು ಇದ್ದರು.