Get out of the caste system
ತುರುವೇಕೆರೆ: ಸಂವಿಧಾನ ಮತ್ತು ಕಾನೂನುಗಳು ಎಲ್ಲ ಜಾತಿಗೂ ಅನ್ವಯಿಸುವಾಗ ಈ ಜಾತಿ ವ್ಯವಸ್ಥೆಗೆ ಏಕೆ ನಾವೆಲ್ಲ ಪ್ರಧಾನ್ಯತೆ ಕೊಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಪ್ರಶ್ನಿಸಿದರು.
ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಂದಿನ ಕಡು ಬಡತನನದ ಸ್ಥಿತಿಯಲ್ಲೂ 14 ಮಕ್ಕಳ ಸಾಕಿ ಸಲಹಿ ಇಡೀ ಜಗತ್ತೇ ಕೊಂಡಾಡುವ ಡಾ.ಬಿ.ಆರ್.ಸಂಬೇಡ್ಕರ್ ನಂತಹ ಶಕ್ತಿ ಕೊಟ್ಟಿ ಅವರ ತಾಯಿಯ ಪ್ರೀತಿಗೆ ನಾವೆಲ್ಲ ನಮಿಸಬೇಕು ಎಂದರು.
ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜು ಮಾತನಾಡಿ, ಬುದ್ಧ, ಬಸವಣ್ಣನವರ ಸಮಾನತೆ ಜತೆ ಜತೆಯಲ್ಲೇ ಅಂಬೇಡ್ಕರ್ ಚಿಂತನೆಗಳೂ ಸಮಕಾಲೀನ ಸಮಾಜಕ್ಕೆ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಬಿಆರ್ಸಿ ಸುರೇಶ್ ಅವರು ಸಂವಿಧಾನ ಪೀಠಿಕೆ ಬೋಧಿಸಿದರು. ಸರ್ಕಾರಿ ನೌಕರರ ಸಂಘದ ಪಾಪಣ್ಣ, ಗುತ್ತಿಗೆದಾರ ಕಲ್ಲಬೋರನಹಳ್ಳಿ ಜಯರಾಮ್, ಬೆಸ್ಕಾಂ ಎಇಇ ಎಂ.ಸಿ.ರಾಜಶೇಖರ್, ವಾಲ್ಮೀಕಿ ಸಮುದಾಯದ ವಸಂತ್ ಕುಮಾರ್ ಮತ್ತಿತರರು ಇದ್ದರು.