ಯಾದಗಿರಿ ಜಿಲ್ಲೆಯ ಯಲ್ಹೇರಿ ಗ್ರಾಪಂನಲ್ಲಿ ಮಂಗಳವಾರ ಆಯೋಜಿಸಿದ್ದ ದಾಖಲಾತಿ ಸಪ್ತಾಹ ಅಭಿಯಾನ ಕಾರ್ಯಕ್ರಮದಲ್ಲಿ ಯಲ್ಹೇರಿ ಪಿಡಿಒ ನಾಗರತ್ನ ಮಾತನಾಡಿದರು.ಬಂದೇನವಾಜ್, ಸುನೀಲ್, ಶಾರದಮ್ಮ ಇತರರಿದ್ದರು.
- ಪಿಡಿಒ ನಾಗರತ್ನ ಸಲಹೆ
- ಯಲ್ಹೇರಿಯಲ್ಲಿ ದಾಖಲಾತಿ ಸಪ್ತಾಹ ಅಭಿಯಾನ
ಯಾದಗಿರಿ: ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದ ಅತ್ಯಂತ ನಿರ್ಗತಿಕ ಕುಟುಂಬಗಳು, ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಮಹತ್ವಕಾಂಕ್ಷಿಯ ನಾರಿ&ಕಿಲ್ಟ್ ಯೋಜನೆಯಡಿ ದೊರೆಯುವ ಸೌಲಭ್ಯ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಯಲ್ಹೇರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರತ್ನ ಹೇಳಿದರು.
ಗುರುಮಠಕಲ್ ತಾಪಂ, ಯಲ್ಹೇರಿ ಗ್ರಾಪಂ ಮತ್ತು ಶ್ರೀೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಂಗಳವಾರ ಯಲ್ಹೇರಿ ಗ್ರಾಪಂನಲ್ಲಿ ಆಯೋಜಿಸಿದ್ದ ದಾಖಲಾತಿ ಸಪ್ತಾಹ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಸರ್ಕಾರದಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಉಚಿತವಾಗಿ ಆಯುಷ್ಮಾನ್, ಇ&ಶ್ರಮ, ಆಧಾರ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಪ್ರಧಾನ ಮಂತ್ರಿ ರೈತ ಸಮ್ಮಾನ್ ಪಿಂಚಣಿ ಯೋಜನೆಯಂತಹ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರು.ನಾರಿ ಕಿಲ್ಪ್ ತಾಲೂಕು ಸಂಯೋಜಕ ಬಂದೇನವಾಜ್ ಮಾತನಾಡಿದರು. ಶಿಬಿರದಲ್ಲಿ ಆಯುಷ್ಮಾನ್ ಕಾರ್ಡ್&45, ಇ&ಶ್ರಮ ಕಾರ್ಡ್&15, ಪ್ಯಾನ್ ಕಾರ್ಡ್&3 ಹಾಗೂ ಪ್ರಧಾನ ಮಂತ್ರಿ ರೈತ ಸಮ್ಮಾನ್ ಪಿಂಚಣಿ ಯೋಜನೆಯಡಿ 5 ಅರ್ಜಿಗಳನ್ನು ಸಲ್ಲಿಸಿ ಉಚಿತವಾಗಿ ದಾಖಲೆಗಳನ್ನು ವಿತರಿಸಲಾಯಿತು.ಅಭಿಯಾನದಲ್ಲಿ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ನ ತಾಲೂಕ ನೋಡಲ್ ಅಧಿಕಾರಿ ಸುನೀಲ್, ಯಲ್ಹೇರಿ ಗ್ರಾಮ ಪಂಚಾಯತಿ ನಾರಿ&ಕಿಲ್ಪ್ ಸಂಪನ್ಮೂಲ ವ್ಯಕ್ತಿ ಶಾರದಮ್ಮ, ಪಂಚಾಯತಿ ಸಿಬ್ಬಂದಿ ಇತರರಿದ್ದರು.