ಮುಧೋಳ ನಗರದ ಕಸಾಪ ಭವನಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಗ್ರಾಮೀಣಾಭಿವೃದ್ಧಿ ಪಂಚಾಯಿತಿ ಅಧಿಕಾರಿಗಳನ್ನು ತಾಲೂಕು ಪಂಚಾಯಿತಿಯಿಂದ ಸನ್ಮಾನಿಸಲಾಯಿತು. ರಾಜ್ಯ ಗೌರವಾಧ್ಯಕ್ಷ ರಾಜು ವಾರದ, ಜಿಲ್ಲಾಧ್ಯಕ್ಷ ಸಿದ್ಧಾರ್ಥ ಗೋಠ, ಅಶೋಕ ಹುಕಮನವರ ಇತರರಿದ್ದರು. 
ರಾಜ್ಯ

ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ರಾಜು ವಾರದ ಅಭಿಪ್ರಾಯ
  • ನಿವೃತ್ತ ಅಧಿಕಾರಿಗಳಿಗೆ ಬೀಳ್ಕೊಡುಗೆ
ಮುಧೋಳ: ಸರ್ಕಾರಿ ಸೇವೆ ಎನ್ನುವುದು ಕೇವಲ ಉದ್ಯೋಗವಲ್ಲ, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಹಸನುಗೊಳಿಸುವ ಪವಿತ್ರ ಕಾರ್ಯ ಎಂದು ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವಾಧ್ಯಕ್ಷ ರಾಜು ವಾರದ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಗ್ರಾಮೀಣಾಭಿವೃದ್ಧಿ ಪಂಚಾಯಿತಿ ಇಲಾಖೆಯಿಂದ ನಿವೃತ್ತರಾದ ಪಿಡಿಒ ಆರ್.ಜೆ. ತಳವಾರ, ಅಣ್ಣಾರಾವ ಕುಂದಗೋಳ ಹಾಗೂ ಎಸ್‌ಡಿಎ ಆರ್.ಎಚ್. ಬುದ್ಧ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಹುದ್ದೆಗಳು ಬದಲಾಗಬಹುದು, ಆದರೆ ಸಮಾಜಕ್ಕೆ ನಾವು ಸಲ್ಲಿಸುವ ಸೇವೆ ಶಾಶ್ವತವಾಗಿ ಉಳಿಯುತ್ತದೆ. ನಿವೃತ್ತಿ ನಂತರ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ನೈಜ ಸಮಾಜ ಸೇವಕನ ಲಕ್ಷಣ ಎಂದು ಹೇಳಿದರು.
ತಾಪಂ ಇಒ ಮಲ್ಲಿಕಾರ್ಜುನ ಅಂಬಿಗೇರ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಗ್ರಾಮೀಣ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಹಿಸಿದ ಶ್ರಮ ಶ್ಲಾಘನೀಯ. ವೈಯಕ್ತಿಕ ಜವಾಬ್ದಾರಿಗಳ ನಡುವೆ ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸಿ, ಕರ್ತವ್ಯ ನಿರ್ವಹಿಸುವ ಮೂಲಕ ಅವರು ಸೇವೆಗೆ ಹೊಸ ಅರ್ಥ ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ನಿವೃತ್ತ ಅಧಿಕಾರಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷ ಸಿದ್ಧಾರ್ಥ ಗೋದ, ತಾಪಂ ಸಹಾಯಕ ನಿರ್ದೇಶಕ ಅಶೋಕ ಹುಕಮನವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಂ. ಪಾಟೀಲ, ಸರ್ಕಾರಿ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ನಿಡೋಣಿ, ತಾಪಂ ಸಹಾಯಕ ನಿರ್ದೇಶಕ ಶ್ರೀನಿವಾಸ ಚಗರಡ್ಡಿ, ರೋಹಿತ್ ಇಟಗಿನವರ, ರಾಜ್ಯ ಪರಿಷತ್ ಸದಸ್ಯ ಶಿವಾನಂದ ನರಸನ್ನವರ ಸೇರಿ ಸಂಘದ ಪ್ರಮುಖರು ಇತರರಿದ್ದರು.