ANIL KUMAR NAYDU 
ರಾಜ್ಯ

ಆಹಾರ ಸುರಕ್ಷಿತ ತರಬೇತಿ ಕಡ್ಡಾಯ ಪಡೆದುಕೊಳ್ಳಿ

ರಾಯಚೂರು ಪ್ರತಿಯೊಬ್ಬ ಅಹಾರ ಉದ್ಯಮದಾರರು ಕೇಂದ್ರ ಸರ್ಕಾರದ ಆಹಾರ ಸುರಕ್ಷತೆ ಕಾಯ್ದೆಯ ಪ್ರಕಾರ ಕಡ್ಡಾಯವಾಗಿ ಪರವಾನಿಗೆಯನ್ನು ಪಡೆದಿರಬೇಕೆಂದು ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರದ ಜಿಲ್ಲಾ ಸಂಯೋಜಕ ಅನಿಲಕುಮಾರ ನಾಯ್ಡು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ ಅಡಿಯಲ್ಲಿ ಬರುವ ಅಹಾರ ಸುರಕ್ಷತೆ ತರಬೇತಿ ಪ್ರಮಾಣ ಪತ್ರ ಈ ತರಬೇತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಹಾಗೂ ಗ್ಲೋಬಲ್ ಇನ್ಸಿಟ್ಯೂಟ್ ಫಾರ್ ಎಜುಕೇಶನ್ ಅಂಡ್ ರಿಸರ್ಚ್ ಫೌಂಡೇಶನರ ’ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರದ ಅನುಮತಿಯಲ್ಲಿ ಈ ತರಬೇತಿಯನ್ನು ನೀಡಲಾಗುತ್ತದೆ ಎಂದರು.
ಇಂದಿನ ಆಹಾರ ಪದ್ಧತಿ ಹಾಗೂ ಜೀಪನ ಶೈಲಿಯಲ್ಲಿ ಬಹಳ ಬದಲಾವಣೆ ಆಗಿರುವುದರಿಂದ ಮಕ್ಕಳಿಂದ ಹಿಡಿದು ಯುವಕರು, ವೃದ್ಧರು ಎಲ್ಲಾ ವಯೋಮಾನದವರಿಗೂ ಹೃದಯ ರೋಗ ಕ್ಯಾನ್ಸರ್ ಹಾಗೂ ಅಸಿಡಿಟಿ ಇಂತಹ ಕಾಯಿಲೆಗಳಿಗೆ ಅವೈಜ್ಞಾನಿಕ ಆಹಾರ ಕಲಬರಿಕೆ ಬಣ್ಣಗಳ ಮಿಶ್ರಣ ಹಾಗೂ ರುಚಿ ಬರಲು ಟೇಸ್ಟಿಂಗ್ ಪೌಡರ್ ಮತ್ತು ಕೆಲವು ರಾಸಾಯನಿಕಗಳನ್ನು ಬಳಸುವುದರಿಂದ ಎಲ್ಲಾ ವಯೋಮಾನದವರಿಗೂ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದು ಬಹಳ ನೋವಿನ ಸಂಗತಿ.
ಇದರಲ್ಲಿ ಮುಖ್ಯ ಕಾರಣ ಆಹಾರ ತಯಾರಿಕರಿಗೆ ಹಾಗೂ ಮಾರಾಟ ಮಾಡುವವರಿಗೆ ಅರಿವು ಇಲ್ಲದಿರುವುದೇ ಮುಖ್ಯ ಕಾರಣ ಇದೆಲ್ಲವನ್ನು ಕೇಂದ್ರ ಸರ್ಕಾರದ ಅಂಗ ಸಂಸ್ಥೆ, ಆದಂತಹ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ ಇದನ್ನು ಗಮನಿಸಿ ಎಲ್ಲಾ ಆಹಾರ ಉಧ್ಯಮದಾರರೂ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಕಡ್ಡಾಯವಾಗಿ ತರಬೇತಿಯನ್ನು ಪಡೆಯಬೇಕು ಎಂಬ ದೃಷ್ಟಿಯಿಂದ ಅಹಾರ ಸುರಕ್ಷತೆ ತರಬೇತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು ಎಂದು 2017ರಲ್ಲಿ ಕಡ್ಡಾಯ ಮಾಡಿದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಮೇಶ್, ಉದಯ ಆಚಾರ, ಜಯಲಕ್ಷ್ಮೀ ಇದ್ದರು.