Get admission in local colleges
ಚಿಕ್ಕನಾಯಕನಹಳ್ಳಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಲಿತಾಂಶ ಉತ್ತಮವಾಗಿದ್ದು, ನಮ್ಮ ತಾಲೂಕಿನಲ್ಲೇ ಇರುವಂತಹ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲಾ ಕಾಲೇಜುಗಳಿಗೆ ಸೇರ್ಪಡೆಯಾಗುವ ಮೂಲಕ ನಿಮ್ಮ ಪ್ರತಿಭೆಯನ್ನು ಇಲ್ಲೇ ತೋರಿಸಿ ನಮ್ಮ ತಾಲೂಕಿಗೆ ಕೀರ್ತಿ ತರಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಲ್ಲ ಶಾಲಾ&ಕಾಲೇಜುಗಳ ಪ್ರಾಂಶುಪಾಲರು, ಮುಖ್ಯಶಿಕ್ಷಕರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಶೇ.94.25ರಷ್ಟು ಲಿತಾಂಶ ಬಂದಿದ್ದು, 34 ಜನ ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳನ್ನು ನಮ್ಮ ತಾಲೂಕಿನಲ್ಲೇ ಇರುವಂತಹ 7 ಕಾಲೇಜುಗಳಲ್ಲಿ ಯಾವುದಾದರು ಒಂದು ಕಾಲೇಜಿಗೆ ಸೇರುವಂತೆ ತಿಳಿಸಲಾಗಿದೆ ಎಂದರು.
ಬಿಇಒ ಕಾಂತರಾಜು ಮಾತನಾಡಿ, ನಮ್ಮ ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತಹ ಶಿಕ್ಷಕರಿದ್ದು, ವಿದ್ಯಾರ್ಥಿಗಳು ಇರುವಂತಹ ಸೌಲಭ್ಯ ಬಳಸಿಕೊಂಡು ಸಾಧನೆ ಮಾಡಬೇಕು ಎಂದರು.