ಸಮಾಜದ ಏಳಿಗೆಗೆ ಶ್ರಮಿಸಿದ ಶ್ರೀಗಳು society 
ರಾಜ್ಯ

ಸಮಾಜದ ಏಳಿಗೆಗೆ ಶ್ರಮಿಸಿದ ಶ್ರೀಗಳು society

ಪ್ರಮುಖ ಮುಖ್ಯಾಂಶಗಳು

  • ವೀರಶೈವ ಸಂದ ಸದಸ್ಯ ಟಿ.ಎನ್​.ಪ್ರಶಾಂತ್​ ಹೇಳಿಕೆ
ಲಕ್ಕೂರು: ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಅದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದು ವೀರಶೈವ ಸಂದ ಸದಸ್ಯ ಟಿ.ಎನ್​.ಪ್ರಶಾಂತ್​ ಹೇಳಿದರು.society
ಮಾಲೂರು ತಾಲುಕಿನ ಜಯಮಂಗಲ ಗ್ರಾಪಂ ವ್ಯಾಪ್ತಿಯ ಕೋಡಿಹಳ್ಳಿ ಗೇಟ್​ನ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರೀ ಶಿವಕುಮಾರ ಸ್ವಾಮೀಜಿ ಅವರ 7ನೇ ವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರು ಸಿದ್ಧಗಂಗಾ ಮಠದ ಪೀಠಾಧಿಪತಿಯಾಗಿ ಅನ್ನ, ಅಕ್ಷರ, ಜ್ಞಾನ ದಾಸೋಹದ ಮೂಲಕ ಲಾಂತರ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಆಹಾರ ಮತ್ತು ಆಶ್ರಯ ನೀಡಿ ಸಮಾಜದ ಉನ್ನತಿಗೆ ಸೇವೆ ಸಲ್ಲಿಸಿದ್ದರು ಎಂದು ಹೇಳಿದರು.
2015ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದ ಇವರು 1907 ಏ.1ರಂದು ಮಾಗಡಿ ತಾಲೂಕಿನ ವೀರಾಪುರದಲ್ಲಿ ಜನಿಸಿದರು. ಬಾಲ್ಯದಿಂದಲೇ ಆಧ್ಯಾತ್ಮಿಕ ಒಲವು ಹೊಂದಿದ್ದರು. ಬಸವಣ್ಣ ನುಡಿದ ಕಾಯಕವೇ ಕೈಲಾಸ ಎಂಬ ತತ್ವದಲ್ಲಿ ಆಳವಾದ ನಂಬಿಕೆ ಇಟ್ಟು ಬಾಳಿದರು ಎಂದರು.
ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಮೂಲಕ ಎಲ್ಲ ಧರ್ಮದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದರು. ಪದ್ಮಭೂಷಣ, ಕರ್ನಾಟಕ ರತ್ನ ಹಾಗೂ ಗೌರವ ಡಾಕ್ಟರೇಟ್​ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಶ್ರೀಗಳು 111 ವರ್ಷ ಬದುಕಿದ್ದರು ಎಂದು ಹೇಳಿದರು.
ಅನ್ನಕ್ಕಿಂತ ದೊಡ್ಡ ದೈವವಿಲ್ಲ. ದಾಸೋಹಕ್ಕಿಂತ ಹೆಚ್ಚಿನ ಪುಣ್ಯವಿಲ್ಲ. ನಾವು ನೀಡುವ ಒಂದೊಂದು ತುತ್ತು ದೇವರಿಗೆ ಸೇರಿದ್ದು ಎಮದು ಜಗತ್ತಿಗೆ ಸಾರಿದ ತ್ರಿವಿಧ ದಾಸೋಹಿಗಳು ಶ್ರೀ ಶಿವಕುಮಾರ ಸ್ವಾಮೀಜಿ ಎಂದು ಹೇಳಿದರು.
ಶ್ರೀ ಶಿವಕುಮಾರ ಮಹಾಸ್ವಾಮೀಜಯವರ ಭಾವಚಿತ್ರ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ನಂತರ ಅನ್ನಪ್ರಸಾದ ವಿತರಿಸಿದರು.
ಟಿ.ಬಿ.ನಟರಾಜ್​, ಸಂತೋಷ್​, ಹರ್ಷ, ವೀರೇಶ್​, ಆರ್​.ಚಂದ್ರಶೇಖರ್​, ರಾಜಣ್ಣ, ನೂತನ್​, ಮಂಜುನಾಥ್​, ಇತರರು ಇದ್ದರು.