ರಾಜ್ಯ

ಜಿಲೆಟಿನ್​ ಸ್ಫೋಟ, ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಪ್ರಮುಖ ಮುಖ್ಯಾಂಶಗಳು

  • ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿತೇಶ ಮೃತ
  • ಸವಿತಾ ರಾಠೋಡ್​ ಸ್ಥಿತಿ ಗಂಭೀರ

ಆಳಂದ: ಮಟಕಿ ತಾಂಡಾದಲ್ಲಿ ಜಿಲೆಟಿನ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಯುವಕನೋರ್ವ ಮೃತಪಟ್ಟಿದ್ದು, ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಕಲಬುರಗಿಯ ಜಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿತೇಶ ಶಿವಲಾಲ್​ ಬಿಳಿರಾಮ ರಾಠೋಡ್​ (17) ಮೃತ. ಕೌಟುಂಬಿಕ ಕಲಹದಿಂದಾಗಿ ಆ.11ರಂದು ಶಿವಲಾಲ್​ ರಾಠೋಡ್​ (49) ಎಂಬಾತ ಟೊಂಕಕ್ಕೆ ಜಿಲೆಟಿನ್​ ಕಟ್ಟಿಕೊಂಡು ಸ್ಫೋಟಿಸಿಕೊಂಡಿದ್ದ. ಸ್ಫೋಟದ ಭೀಕರತೆಗೆ ಶಿವಲಾಲ್​, ಪುತ್ರಿ ಮೀರಾಬಾಯಿ ರಾಠೋಡ್​ (15) ಸ್ಥಳದಲ್ಲೇ ಮೃತರಾಗಿದ್ದರು. ತೀವ್ರ ಗಾಯಗೊಂಡಿದ್ದ ಪುತ್ರ ವಿತೇಶ ರಾಠೋಡ್​, ಪತ್ನಿ ಸವಿತಾ ರಾಠೋಡ್​, ಸವಿತಾ ಸಂಬಂಧಿಕರಾದ ಸುರೇಖಾ ಚವ್ಹಾಣ್​, ಪುತ್ರ ವಿವೇಕ ಚವ್ಹಾಣ್​ ಗಾಯಗೊಂಡಿದ್ದರು. ಎಲ್ಲರನ್ನು ಜಿಮ್ಸ್​ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ವಿತೇಶ ರಾಠೋಡ್​ ಅಸುನೀಗಿದ್ದಾನೆ. ಸವಿತಾ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.