ಈ ಸಂದರ್ಭದಲ್ಲಿ ಕೆಬಿಎನ ವಿವಿಯ ಕಲಾ, ಮಾನವೀಕತೆ, ಭಾಷಾ ಮತ್ತು ಸಮಾಜ ವಿಜ್ಞಾನ ನಿಕಾಯದ ಎಲ್ಲ ಶಿಕ್ಷಕವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. 
ರಾಜ್ಯ

ಸತ್ಯ ನ್ಯಾಯ ಪ್ರಾಮಾಣಿಕತೆಗೆ ಗವಾನ್ ಸಾಕ್ಷಿ : ಅಜೀಮ್ ಪಾಷಾ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಕೆಬಿಎನನಲ್ಲಿ ಮಹಮ್ಮದ ಗವಾನ ಕುರಿತು ವಿಶೇಷ ಉಪನ್ಯಾಸ
ಕಲಬುರಗಿ : ನಗರದ ಕೆಬಿಎನನಲ್ಲಿ ಕನ್ನಡ ಮತ್ತು ಇತಿಹಾಸ ವಿಭಾಗಗಳು ಜಂಟಿಯಾಗಿ ಮಹಮ್ಮದ ಗವಾನರ ಸಂಸ್ಕೃತಿಕ ಮತ್ತು ಸಾಹಿತ್ಯಕ ಕೊಡುಗೆಗಳನ್ನು ಕುರಿತು ಗುರುವಾರ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.
ಈ ಉಪನ್ಯಾಸದಲ್ಲಿ ಮುಖ್ಯ ಭಾಷಣಕಾರರಾಗಿ ಕರ್ನಾಟಕದ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಕುಲಸಚಿವರಾದ ಅಜೀಮ ಪಾಷಾ ಅವರು ಮಾತನಾಡುತ್ತ ಕೆಬಿಎನನ ಆಡಳಿತ
ಮುಹಮದ ಗವಾನನ ಆಡಳಿತಕ್ಕೆ ಒಂದು ಉದಾಹರಣೆ ಎಂದರು.
ಮುಹಮ್ಮದ ಗವಾನ ಸತ್ಯ, ನ್ಯಾಯ, ಪ್ರಾಮಾಣಿಕತೆಗೆ ಇನ್ನೊಂದು ಹೆಸರು. ಅವರು ಮನುಷ್ಯತ್ವಕ್ಕೆ ಒಂದು ಸಾಕ್ಷಿ. ಅವರದು ಅಗಾಧ ಪಾಂಡಿತ್ಯ.ಮುಹಮ್ಮದ ಗವಾನ ಸ್ಥಳೀಯರಿಂದ ಅಪಾಯ ವೂರುವುದನ್ನು ಕಂಡು ಸಾಮ್ರಾಜ್ಯವನ್ನು ಸೆಂಟರಲೈಸ ಮಾಡಿದರು.
ಉಸ್ಮಾನ್ ಅಲಿ ಅವರ ಮರಣದ ನಂತರ ಅವರ ಮರಣದ ಸತ್ಯವನ್ನು ಬಹಿರಂಗಗೊಳಿಸಿದರು. ಇದು ಅವರ ಸಮಾಧಿ ಮೇಲೆ ಉಲ್ಲೇಖ ಮಾಡಲಾಗಿದೆ. ಬೀದರ ಗೆ ಹೋದಾಗ ಅವರ ಸಮಾಧಿ ನೋಡಿ ಬನ್ನಿ. ಮಹಮ್ಮದ ಗವಾನರ ಜೀವನ ಚರಿತ್ರೆಯ ಬಗ್ಗೆ ಎಲ್ಲರಿಗೂ ಗೊತ್ತು ಇರಬೇಕು. ಇಂತಹ ಉಪನ್ಯಾಸಗಳು ನಡೆಯುತ್ತಿರಬೇಕು, ಇಂದಿನ ವಿದ್ಯಾರ್ಥಿಗಳು ಅವರ ಜೀವನದಿಂದ ಸ್ಫೂರ್ತಿ ಪಡೆಯ್ಬೇಕು. ಗವಾನರ ಬಗ್ಗೆ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು
ಇನ್ನೊರ್ವ ಅತಿಥಿ ಬೋಡೆ ರಿಯಾಜ ಅಹ್ಮದ ಇವರು ಮಾತನಾಡುತ್ತ , ನನ್ನ ಸಾಹಿತ್ಯ ಜೀವನದ ಅಧ್ಯಯನದ ಆರಂಭವಾಗಿದ್ದು ಖಾಜಾ ಬಂದಾ ನವಾಜರ ಅಧ್ಯಯನದಿಂದ. ಆದ್ದರಿಂದ ಕೆಬಿಎನ ವಿವಿ ಬರಲು ನನಗೆ ತುಂಬಾ ಸಂತೋಷ. ಅವರು ಬಹುಮಾನಿ ಸಾಮ್ರಾಜ್ಯದ ಆರಂಭದ ಬಗ್ಗೆ ಸವಿಸ್ತಾರವಾಗಿ ಹೇಳಿದರು. ಹೇಗೆ ಬಹ್ಮನಿ ಸಾಮ್ರಾಜ್ಯದ ಕ್ವಾಪಿಟಲ್ ಗುಲ್ಬರ್ಗಾ ಮಾಡಲಾಯಿತು. ಮಹಮುದ ಗವಾನ ಬಡವರಿಗೆ ದುಡ್ಡು ಹಂಚುತ್ತಿದ್ದರು. ಅವರು ಪಾರ್ಸಿಯಲ್ಲಿ 2 ಪುಸ್ತಕಗಳನ್ನು ಬರೆದಿದ್ದಾರೆ. ಕೃಷಿಯಲ್ಲೂ ಕೂಡ ಅನೇಕ ಹೊಸ ಪ್ರಯೋಗಗಗಳನ್ನು ಮಾಡಿದ್ದಾರೆ. ಮಾಹುಮ್ಮದ ಗವಾನರ ಸಂಸ್ಕೃತಿಕ, ಸಾಹಿತ್ತಿಕ ಅನೇಕ ಮಹತ್ವ ಕೊಡುಗೆಗಳಿವೆ ಎಂದು ಹೇಳಿದರು.
ಡಾ ನಿಶಾತ್ ಆರಿಫ್ ಹುಸೇನಿ ಅಧ್ಯಕ್ಷೀಯ ಸಮಾರೋಪದಲ್ಲಿ ಮಹಮ್ಮದ ಗವಾನ ಹೇಗೆ ಮೋಸದಿಂದ ಅವರನ್ನು ಕೊಲ್ಲಲಾಯಿತು ಎಂಬುದರ ಬಗ್ಗೆ ಹೇಳಿದರು. ನಿಸ್ವಾರ್ಥತೆ ಎಲ್ಲ ಸೂಫಿ ಸಂತರ ಪರಮ ಆದ್ಯತೆ. ಅವರು ಪರೋಪಕಾರವೆ ಧರ್ಮ ಎಂದು ಜೀವನ ಮಾಡಿದ್ದಾರೆ ಅನಂತವರಲ್ಲಿ ಖಾಜಾ ಬಂದಾಬಾವಾಜರ ಒಬ್ಬರು ಎಂದು ಬಂದಾನವಜರನ್ನು ನೆನೆದರು.
ಅಮರಾ ಬೇಗಮ ಕಿರಾತ ಪ್ರಸ್ತುತ ಪಡಿಸಿದರು. ನೌಷೀನ ಸಾನಿಯಾ ಸ್ವಾಗತಿಸಿದರೆ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಸಂಗನಗೌಡ ಹಿರೇಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಿಜ್ವಾನ್ ಮತ್ತು ಜೈದ ಅತಿಥಿಗಳನ್ನು ಪರಿಚಯಿಸಿದರು. ಶಾಫಿಯಾ ಸಮರೀನ ನಿರೂಪಿಸಿದರು.ಆಯೇಷಾ ಅಂಜುಮ ವಂದಿಸಿದರು.
ಈ ಸಂದರ್ಭದಲ್ಲಿ ಕೆಬಿಎನ ವಿವಿಯ ಕಲಾ, ಮಾನವೀಕತೆ, ಭಾಷಾ ಮತ್ತು ಸಮಾಜ ವಿಜ್ಞಾನ ನಿಕಾಯದ ಎಲ್ಲ ಶಿಕ್ಷಕವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.