ರಾಜ್ಯ

ಶ್ರೀ ಚನ್ನ ಕಲ್ಯಾಣ ಮಂಟಪದಲ್ಲಿ ಶರಣರ ಸಮಾಗಮ

ಪ್ರಮುಖ ಮುಖ್ಯಾಂಶಗಳು

  • ಇದೆ 22 ರಂದು 893ನೇ ಬಸವ ಜಯಂತ್ಯುತ್ಸವ
  • ವಿವಿಧ ಕಾರ್ಯಕ್ರಮ ಆಯೋಜನೆ
  • ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸಸಿ ವಿತರಣೆ
ಚಿಂಚೋಳಿ : ಗಡಿ ತಾಲೂಕಿನ ಅವಳಿ ಪಟ್ಟಣದಲ್ಲಿ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಬಸವ ಜಯಂತ್ಯುತ್ಸವ ನಿಮಿತ್ತ ಶರಣರ ಸಮಾಗಮ ಇದೆ 22 ರಂದು ಸಾಯಂಕಾಲ 6 ಕ್ಕೆ ಶ್ರೀ ಚನ್ನ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಹಾರಕೂಡ ಹಿರೇಮಠದ ಪೂಜ್ಯ ಷ.ಬ್ರ ಡಾ. ಚನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು, ಗದಗನ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿ ಪಾವನ ಸಾನಿಧ್ಯ ವಹಿಸುವರು. ನರನಾಳ ಪೂಜ್ಯ ಶ್ರೀ ಶಿವಕುಮಾರ ಶಿವಾಚಾರ್ಯ, ಪೂಜ್ಯ ಶ್ರೀ ಸಿದ್ದಲಿಂಗ ದೇವರು, ಪೂಜ್ಯ ಶ್ರೀ ಪ್ರಭು ದೇವರು ಸಮ್ಮುಖವಹಿಸುವರು.
ಅರಣ್ಯ ಸಚಿವ ಈಶ್ವರ ಖಂಡ್ರೆ, ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಬಿ. ಆರ್. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಡಾ. ಅವಿನಾಶ ಜಾಧವ್ ಬಸವ ಪೂಜೆ ಸಲ್ಲಿಸುವರು. ವಿಜಯಪುರ ಶಾಸಕ ಬಸನಗೌಡ ಆರ್. ಯತ್ನಾಳ ಷಟಸ್ಥಲ ಧ್ವಜಾರೋಹಣ ನೇರವೇರಿಸುವರು. ಬಸವ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವಿರೇಶ ಯಂಪಳ್ಳಿ ಅಧ್ಯಕ್ಷತೆ ವಹಿಸುವರು.
ಮಾಜಿ ಸಂಸದ ಡಾ. ಉಮೇಶ ಜಾಧವ್, ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ, ಮಾಜಿ ಜಿ.ಪಂ ಅಧ್ಯಕ್ಷ ಸಂಜೀವನ ಆರ್. ಯಾಕಾಪೂರ, ಶರಣಕುಮಾರ ಮೋದಿ, ಶರಣಪ್ಪ ಪಾಟೀಲ್ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಸಮಾಜದ ಬಾಂಧವರು, ಬಸವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕರಿಂದ ಬೈಕ್, ಕಾರ್ ಮೆರವಣಿಗೆ :
ಇದೆ 22 ರಂದು ಬೆಳಗ್ಗೆ 11 ಕ್ಕೆ ಬೃಹತ್ ಕಾರ್ ಮತ್ತು ಬೈಕ್ ರೋಡ್ ಶೋ ಜರುಗಲಿದ್ದು, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ್, ಬಿಎಸ್ಪಿ ಮುಖಂಡ ಗೌತಮ ಬೋಮ್ಮನಳ್ಳಿ, ಮಾಜಿ ಪುರಸಭೆ ಅಧ್ಯಕ್ಷ ಆನಂದ ಟೈಗರ್ ಚಾಲನೆ ನೀಡಲಿದ್ದಾರೆ.
ವಿಶ್ವಗುರು ಬಸವಣ್ಣನವರ ಭವ್ಯ ಮೆರವಣಿಗೆ :
ವಿವಿಧ ಕಲಾ ತಂಡಗಳ ಸಮ್ಮುಖದಲ್ಲಿ ವಿಶ್ವಗುರು ಬಸವೇಶ್ವರರ ಮೂರ್ತಿಯ ಭವ್ಯ ಮೆರವಣಿಗೆ ಮಾಜಿ ಜಿ.ಪಂ ಅಧ್ಯಕ್ಷ ದೀಪಕನಾಗ ಪುಣ್ಯಶೇಟ್ಟಿ, ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ ಕಟ್ಟಿಮನಿ ಚಾಲನೆ ನೀಡಲಿದ್ದು, ಮಹಾಂತೇಶ್ವರ ಮಠದಿಂದ ಶ್ರೀ ಚನ್ನ ಕಲ್ಯಾಣ ಮಂಟಪದವರೆಗೆ ಭವ್ಯವಾಗಿ ಜರುಗಲಿದೆ.
ವಿಶೇಷ ಗೌರವ ಸತ್ಕಾರ :
ಅರಣ್ಯ ಸಚಿವರು, ರಾಷ್ಟ್ರೀಯ ಅಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜವು ಸನ್ಮಾನಿಸಿ ಗೌರವಿಸಲಾಗುವುದು.
ವಿಶೇಷ ಸನ್ಮಾನ, ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸಸಿ ವಿತರಣೆ :
ಮಾಜಿ ಸೈನಿಕ, ಪ್ರಸ್ತುತ ಪಿಎಸ್ಐ ರಾಜೇಂದ್ರ ಪಾಟೀಲ್ ಅವರನ್ನು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವಿಶೇಷವಾಗಿ ಸನ್ಮಾನಿಸಿ ಗೌರವಿಸುತ್ತಿದೆ.ಪ್ರಗತಿ ಪರ ರೈತ ಬಾಬುರಾವ ಪಾಟೀಲ್, ಡಾ. ಲಕ್ಷ್ಮಿ ದೇವಿ ಮಂಜುನಾಥ ಕೋರವಿ ಅವರಿಂದ ಸಸಿ ವಿತರಣೆಗೆ ಚಾಲನೆ ನೀಡಲಿದ್ದಾರೆ.