ಹುಲಸೂರಿನ ಹಾಲಹಳ್ಳಿ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿ ಕೇಂದ್ರ(ಕೆ) ದಲ್ಲಿ ಗ್ಯಾಸ್ ಸಿಲಿಂಡರ್ ಕಳುವು ಮಾಡಿರುವುದನ್ನು ಪಿಎಸ್ಐ ಪಂಡಿತ್ ಪರಿಶೀಲಿಸಿದರು. ಮಾಜಿ ಗ್ರಾಪಂ ಸದಸ್ಯ ಸಂತೋಷ ಗಾಯಕವಾಡ ಇತರರಿದ್ದರು.
ಹುಲಸೂರು: ಪಟ್ಟಣದ ಹಾಲಹಳ್ಳಿ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿ ಕೇಂದ್ರ(ಕೆ) ದಲ್ಲಿ ಎರಡು ಗ್ಯಾಸ್ ಸಿಲಿಂಡರ್ ಕಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ಹಾಗೂ ನಾಗರ ಪಂಚಮಿ ಹಬ್ಬದ ನಿಮಿತ್ತ ಸೋಮವಾರ ರಜೆ ಇರುವುದನ್ನು ಅರಿತು ಕಳ್ಳರು ಕೇಂದ್ರದ ಕೀ ಮುರಿದು ಎರಡು ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಪರಾರಿಯಾದ್ದಾರೆ. ಮಂಗಳವಾರ ಬೆಳಗ್ಗೆ ಅಂಗನವಾಡಿ ಸಹಾಯಕಿ ಬಬಿತಾ ಕೀ ಮುರಿದಿರುವುದನ್ನು ಕಂಡು ಕೇಂದ್ರದ ಕಾರ್ಯದರ್ಶಿಗೆ ವಿಷಯ ತಿಳಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಪಿಎಸ್ಐ ಪಂಡಿತ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.