ಗಂಗ ಶಿರಸ್ಸು ಜಾತ್ರೆ ವಿಜೃಂಭಣೆ enthusiasm 
ರಾಜ್ಯ

ಗಂಗ ಶಿರಸ್ಸು ಜಾತ್ರೆ ವಿಜೃಂಭಣೆ enthusiasm

ಮುಳಬಾಗಿಲು: ನಗರದ ಮುತ್ಯಾಲಪೇಟೆಯ ಗ್ರಾಮದೇವತೆ ಗಂಗಮ್ಮ ದೇವರ 24ನೇ ವರ್ಷದ ಗಂಗ ಶಿರಸ್ಸು ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.enthusiasm
ಮಂಗಳವಾರ ಮುಂಜಾನೆ ಗಂಗ ಶಿರಸ್ಸು ಪ್ರತಿಷ್ಠಾಪನೆ ನಂತರ ಮಹಿಳೆಯರು ತಂಬಿಟ್ಟು ದೀಪಗಳನ್ನು ದೇವರಿಗೆ ಅರ್ಪಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಗಂಗಶಿರಸ್ಸು ಮೆರವಣಿಗೆ ಮಾಡಿ, ನಂತರ ವಿಸರ್ಜನೆ ಮಾಡಲಾಯಿತು.
ಮುತ್ಯಾಲಪೇಟೆ, ಕುರುಬರಪೇಟೆ, ಶಿವಕೇಶವನಗರ, ನೇತಾಜಿನಗರ, ಅಂಬೇಡ್ಕರ್​ ನಗರ, ವೀರಭದ್ರನಗರ, ತ್ಯಾಗರಾಜಕಾಲನಿ, ಭೋವಿಕಾಲನಿ, ಟೀಚರ್ಸ್​ ಕಾಲನಿ, ಮಂಜುನಾಥ ಕಾಲನಿ, ಗುಣಿಗಂಟಿಪಾಳ್ಯ, ತೋಟಲಪಾಳ್ಳ, ಕುಂಬಾರಪಾಳ್ಯ, ದೋಬಿಪಾಳ್ಯ, ಪಲ್ಲಿಗರಪಾಳ್ಯ, ಹೊಸಪಾಳ್ಯ, ಸೋಮೇಶ್ವರ ಪಾಳ್ಯ, ಗಣೇಶಪಾಳ್ಯ, ಕೊಲುಮಿಕುಂಟೆ, ನೂಗಲಬಂಡೆ ಸೇರಿ ನಾನಾ ಕಡೆಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.