ಉಗರಗೋಳ ಗ್ರಾಮದಲ್ಲಿ ಶ್ರೀ ಗಾಳಿದುರ್ಗಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸುಮಂಗಲಿಯರ ಆರತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು.
ವಿಜಯವಾಣಿ ಸುದ್ದಿಜಾಲ ಉಗರಗೋಳ
ಇಂದಿನ ಆಧುನಿಕ ಯುಗದಲ್ಲಿ ಅಧ್ಯಾತ್ಮ ಮರೆಯದೇ ಮಹಾತ್ಮರು ಬೋಧಿಸುವ ಪ್ರವಚನದ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮುಖಂಡ ಹೂವಪ್ಪ ಸಿಕ್ಕಲಗೇರ ಹೇಳಿದರು.
ಉಗರಗೋಳ ಗ್ರಾಮದಲ್ಲಿ ಕನಕಮ್ಮಾ ದೇವಿ ಸೇವಾ ಸಂಘದವರು ಜೂ.16ರಿಂದ ಜೂ.20ರವರೆಗೆ ಹಮ್ಮಿಕೊಂಡ ಗಾಳಿದುರ್ಗಮ್ಮದೇವಿ (ಕನಕಮ್ಮದೇವಿ) ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು ಎಂದರು.
ಪೊಲೀಸ್ ರೇಣಪ್ಪ ಸಿಕ್ಕಲಗೇರ ಮಾತನಾಡಿ, ಶರಣರ ಆಧ್ಯಾತ್ಮಿಕ ನುಡಿಗಳು ಜೀವನವನ್ನು ಸುಂದರವಾಗಿಸುತ್ತದೆ. ಅನ್ನ, ನೀರು, ಆಶ್ರಯದಿಂದ ಬದುಕು ಪೂರ್ಣವಾಗುವುದಿಲ್ಲ. ಆಧ್ಯಾತ್ಮಿಕ ನುಡಿ ಆಲಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದರು.
ಸುಮಂಗಲಿಯರ ಆರತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ನಾಸಿಕ್ ಢೋಲ್, ಡೊಳ್ಳು ಕುಣಿತ, ಕಥಕ್ಕಳಿ ಜಾನಪದ ನತ್ಯ ಹಾಗೂ ಭಂಡಾರದ ಹೊನ್ನಾಟ ಜಾತ್ರಾ ಮಹೋತ್ಸವಕ್ಕೆ ರಂಗುತಂದಿತ್ತು. ಹುಬ್ಬಳ್ಳಿಯ ರಾಜಪ್ಪ ಗಬ್ಬೂರ, ಧಾರವಾಡದ ಶರಣಪ್ಪ ಯಮನೂರ, ಕನಕಪ್ಪ ಸಿಕ್ಕಲಿಗೇರ, ಹೂವಪ್ಪ ಸಿಕ್ಕಲಿಗೇರ, ಮುಖಪ್ಪ ಸಿಕ್ಕಲಿಗೇರ, ಗಾಳಪ್ಪ ಸಿಕ್ಕಲಿಗೇರ, ಮಂಜುನಾಥ ಸಿಕ್ಕಲಿಗೇರ, ರಾಜಪ್ಪ ಸಿಕ್ಕಲಿಗೇರ, ಲಕ್ಷ್ಮಣ ಸಿಕ್ಕಲಿಗೇರ, ನಬಿ ಸಿಕ್ಕಲಿಗೇರ ಇತರರಿದ್ದರು.