ಗಾಜಲಹಳ್ಳಿ ಭೂ ಒತ್ತುವರಿ ತೆರವು land encroachment
- ನ್ಯಾಯಾಲಯದ ಆದೇಶದ ಮೇರೆಗೆ ಕಾರ್ಯಾಚರಣೆ
ಚಿಂತಾಮಣಿ: ಸರ್ಕಾರಿ ಗೋಮಾಳ ಖರಾಬು ಭೂಮಿ ಒತ್ತುವರಿ ಕೈಬಿಡುವಂತೆ ಒತ್ತಾಯಿಸಿ ತಾಲೂಕಿನ ಗಾಜಲಹಳ್ಳಿ ಗ್ರಾಮಸ್ಥರು ನಾಲ್ಕೆ$ದು ವರ್ಷಗಳಿಂದ ನಡೆಸುತ್ತಿದ್ದ ಪ್ರತಿಭಟನೆನಡುವೆ ಶುಕ್ರವಾರ ವಿವಾದಿತ ಜಮೀನಿನ ಮಾಲೀಕರು ನ್ಯಾಯಾಲಯದ ಆದೇಶದ ಮೇರೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ನೊಂದಿಗೆ ಭೂಮಿ ವಶಪಡಿಸಿಕೊಂಡರು. land encroachment
ಗಾಜಲಹಳ್ಳಿ ಗ್ರಾಮದ ಸರ್ವೇನಂ.21ರ ಸರ್ಕಾರಿ ಗೋಮಾಳ ಮತ್ತು ಖರಾಬು ಜಮೀನಿದ್ದು, ಈ ಭೂಮಿಯನ್ನು ಕುರುಬೂರು ನಂಜುಂಡಪ್ಪ ಎಂಬುವರು ಸರ್ವೇ ನಂಬರ್ 51 ಎಂದು ನಕಲಿ ದಾಖಲೆ ಸೃಷ್ಟಿ ಮಾಡಿ ರಾಚಾಪುರ ಗ್ರಾಮದ ವೀಣಾ ಅವರಿಗೆ ಮಾರಾಟ ಮಾಡಿದ್ದರು ಎನ್ನಲಾಗಿತ್ತು.
ಗ್ರಾಮದ ಪಕ್ಕದಲ್ಲಿರುವ ಸರ್ಕಾರಿ ಜಮೀನು ನಮ್ಮ ಗ್ರಾಮಕ್ಕೆ ಬೇಕು. ಗ್ರಾಮದಲ್ಲಿ 160 ಪರಿಶಿಷ್ಟ ಕುಟುಂಬಗಳಿದ್ದು, ಅಂಬೇಡ್ಕರ್ ಭವನ ಮತ್ತು ವಸತಿ ರಹಿತರಿಗೆ ನಿವೇಶನ ಕೋಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟಿಸಿದ್ದರು.
ಆದರೆ, ಈ ಜಮೀನಿನ ಮಾಲಕಿ, ನಮ್ಮ ಜಮೀನಿನಲ್ಲಿ ಗಾಜಲಹಳ್ಳಿ ಗ್ರಾಮದ ಕೆಲವರು ಅಕ್ರಮ ಪ್ರವೇಶ ಮಾಡಿ ರಾತ್ರೋರಾತ್ರಿ ಶಾಮಿಯಾನ ಹಾಕಿದ್ದಾರೆ ಎಂದು 2022ರಲ್ಲಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು. ನ್ಯಾಯಾಲಯದಲ್ಲಿ ಮಾಲಕಿ ಪರ ಆದೇಶವಾಗಿರುವುದಲ್ಲದೆ, ಸೂಕ್ತ ಪೊಲೀಸ್ ಬಂದೋಬಸ್ತ್ನಲ್ಲಿ ಒತ್ತುವರಿ ತೆರವು ಮಾಡುವಂತೆ ಸೂಚಿಸಿದ್ದರಿಂದ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶಿವರಾಜ್ ನೇತೃತ್ವದಲ್ಲಿ ತೆರವು ಕಾರ್ಯ ನಡೆಸಿದರು.
ತೆರವಿಗೆ ಗ್ರಾಮದ ಮಹಿಳೆಯರು ಸೇರಿದಂತೆ ಹಲವಾರು ಮಂದಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಅಲ್ಲಿದ್ದ ಅಂಬೇಡ್ಕರ್ ಭಾವಚಿತ್ರ ಮತ್ತು ಗುಡಿಸಲು ತೆರವಿಗೆ ಜೆಸಿಬಿ ಮುಂದಾದಾಗ ಅಡ್ಡಿ ಮಾಡಿದರು. ಗ್ರಾಮಾಂತರ ಠಾಣೆಯ ಮಹಿಳಾ ಮತ್ತು ಪುರುಷ ಪೊಲೀಸರು ಎಲ್ಲರನ್ನು ತಡೆದು ಸ್ಥಳದಿಂದ ಹೊರಗೆ ಕಳುಹಿಸಿ ತೆರವು ಮಾಡಿದರು.